ಬಂದಿದ್ದ ಹಳ್ಳಿಯ ಬಡ ಹುಡುಗನನ್ನು ಅವರು ಪ್ರೀತಿಸಿರಲಿಲ್ಲ.
ಈಗ....
ನನ್ನ ಓರಗೆಯ ಹುಡುಗಿಯರು ನಡೆದು ಹೋಗುತ್ತಿದ್ದರೆ ನನ್ನಲ್ಲಿ ಹೊಸ ಅನುಭವಗಳಾಗುತ್ತಿದ್ದುವು. ಕೊಳೆಯಾದ ಉಡುಗೆ ಧರಿಸಿದ್ದ ನನ್ನನ್ನು ಅವರು ನೋಡುತ್ತಿರಲಿಲ್ಲ ನಿಜ. ಚಲಚ್ಚಿತ್ರದಲ್ಲಿ ತೋರಿಬರು ತ್ತಿದ್ದ ಘಟನೆಗಳು ನಿಜ ಜೀವನದಲ್ಲಿ ಆಗುತ್ತಿರಲಿಲ್ಲ ನಿಜ. ಆದರೆ, ಯಾವಳಾದರೂ ಹುಡುಗಿ ಯಾರನ್ನಾದರೂ ನೋಡಿ ಕಂಡೂ-ಕಾಣದ ಹಾಗೆ ತುಟಿಗಳ ಮೇಲೆ ಮುಗುಳುನಗೆ ಹಾಯಿಸಿದಾಗ, ನನಗೆ ನೋವಾಗುತ್ತಿತ್ತು. ಆ ಕಣ್ಣುಗಳು ಯಾರನ್ನೊ ಹುಡುಕಿದಾಗ, ನಾನು ಕಾತರಗೊಳ್ಳುತ್ತಿದ್ದೆ.......ಆದರೆ ಅದು ಕ್ಷಣ-ಕಾಲ. ನನಗೆ ಬಿಡುವಿ ದ್ದಾಗ. ಯೋಚನೆಗಳು ತರ್ಕಬದ್ಧವಾಗದೆ, ಬೇರೆ ಬೇರೆಯಾಗಿ ಹರಡಿಕೊಂಡಾಗ. ಆದರೆ, ಅಂತಹ ಸಂದರ್ಭಗಳು ಹೆಚ್ಚಾಗಿರು ತ್ತಿರಲಿಲ್ಲ.
ದಿನ ನಿತ್ಯದ ಬದುಕಿನ ಹೋರಾಟ ನನ್ನನ್ನು ಹೆಚ್ಚು ಹೆಚ್ಚು ಅನುಭವಿಯಾಗಿ ಮಾಡುತ್ತಿತ್ತು. ಆ ವರ್ಷದ ನಿರುದ್ಯೋಗ ಪ್ರದರ್ಶ ನಗಳು ಒಂದು ಪಾಠವನ್ನು ನನಗೆ ಕಲಿಸಿದವು: ನಾನು ಒಬ್ಬನೇ ಆಗಿರಲಿಲ್ಲ. ಈ ಪ್ರಪಂಚದಲ್ಲಿ ಸಂಕಟಪಡುವ ಜೀವ ನನ್ನದೊಂದೇ ಆಗಿರಲಿಲ್ಲ.......
ಅಜ್ಜಿ ಇಟ್ಟಿದ್ದ ನೋಟುಗಳಲ್ಲಿ ಒಂದು ಮಾತ್ರ ಉಳಿದಿತ್ತು. ಅಂಗಿಯ ಜೇಬಿನೊಳಗೆ ಅದನ್ನು ಇರಿಸಿದ್ದೆ. ಆ ಮಧ್ಯಾಹ್ನ, ಬೋರಿ ಬಂದರದ ದೊಡ್ಡದೊಂದು ಅಂಗಡಿಯ ಹೊರಗೆ ಬಲ ಸಂಧಿಯಲ್ಲಿ ನಾನು ಆಕಾಶ ನೋಡುತ್ತಾ ಮಲಗಿದ್ದೆ. ಆದರೆ ಹಲವಾರು ತಂತಿಗಳು ನನ್ನಮೇಲೆ ಬಲೆಯಂತೆ ಹರಡಿ, ಆಕಾಶವನ್ನು ನನ್ನ ದೃಷ್ಟಿಯಿಂದ ಮರೆಮಾಡಿದ್ದುವು. ಒಂದಷ್ಟು ಮೋಡಗಳು ಎಡದಿಂದ ಬಲಕ್ಕೆ ಹಾದು ಹೋದ ಮೇಲೆ ನಾನು ಮಗ್ಗುಲಿಗೆ ತಿರುಗಿಕೊಂಡು ನಿದ್ದೆಹೋಗಲು ಯತ್ನಿಸಿದೆ. ಐದು ನಿಮಿಷಗಳಾಗಿರಬೇಕು. ಕಣ್ಣುಗಳು ಒಲ್ಲೆ