ವೆನ್ನುತ್ತಾ ತೂಕಡಿಸುತ್ತಿದ್ದುವು........ಆಗ ಒಂದು ನೆರಳು ನನ್ನ ಮೇಲಿಂದ ಹಾಯ್ದಹಾಗಾಯಿತು. ಒಮೈ, ಮತ್ತೊಮ್ಮೆ. ನಾನು ಚಲಿಸಲಿಲ್ಲ. ಮುಚ್ಚಿದ ಕಣ್ಣನ್ನು ತೆರೆಯಲಿಲ್ಲ. ಉಸಿರು ಬಿಡಲಿಲ್ಲ. ಒಂದು ಕೈ ಮೆಲ್ಲನೆ ನನ್ನ ಜೇಬಿನೊಳಕ್ಕೆ ಇಳಿಯಿತು-ಬಲು ಮೌನ ವಾಗಿ. ಅಷ್ಟೇ ಮೌನವಾಗಿ ನಾನು ಆ ಕೈಯನ್ನು ಬಿಗಿಹಿಡಿದೆ. ಯಾರೂ ಮಾತನಾಡಲಿಲ್ಲ. ಆ ಕೈ ಬಂದ ಹಾದಿಯಲ್ಲೆ ವಾಪಸ್ಸುಹೋ ಗಲು ಯತ್ನಿಸುತ್ತಿತ್ತು. ಅದರೆ ನನ್ನ ಮುಷ್ಟಿ ಬಲವಾಗಿತ್ತು........ ಹಾಗೆ ಒಂದೆರಡು ನಿಮಿಷ. ನಾನು ತುಂಬ ಕುತೂಹಲಿಯಾಗಿದ್ದೆ. ಆ ವ್ಯಕ್ತಿಯನ್ನು ನೋಡಬೇಕೆಂಬ ತವಕ ಹೆಚ್ಚುತ್ತಿತ್ತು............ಬಲು ದೀರ್ಘವೆಂದು ಕಂಡ ಮೂರು ನಾಲ್ಕು ನಿಮಿಷಗಳ ಆ ಸಂದಿಗ್ಧ ಸರಿ ಸ್ಥಿತಿಯನ್ನು ಕೊನೆಗಾಣಿಸುವ ಹಾಗೆ, ಆ ವ್ಯಕ್ತಿ ನಕ್ಕಿತು. ನಾನು ಕಣ್ಣು ತೆರೆದೆ. ತೆರೆದು, ಬಿಗಿಹಿಡಿದಿದ್ದ ಕೈಯನ್ನು ಹೊರಕ್ಕೆ ತರುತ್ತ ಎದ್ದು ಕುಳಿತೆ,
"ಆನ್ಯಾಯ"
ಆತ ಮಾತನಾಡಲಿಲ್ಲ.
"ಚಾಲಾಕಿ ಇದ್ದರೆ ಶ್ರೀಮಂತರ ಮೇಲೆ ಪ್ರಯೋಗಿಸು. ನನ್ನ ಐದು ರೂಪಯಿ ನಿನಗೆ ಬಲಿಯಾಗೋದು ಯಾವ ನ್ಯಾಯ?"
ಕ್ಷಣ ಕಾಲ ಅವನ ಮುಖ ಕಪ್ಪಿಟ್ಟತು. ಮತ್ತೆ ನಟನೆಯ
ಮುಖವಾಡವನ್ನು ಆತ ಧರಿಸಿದ.
"ಕ್ಷಮಿಸು ತಮ್ಮ."
ಮುಖದಮೇಲೆ ವಿಷಾದದ ಛಾಯೆ ಇಲ್ಲದಿದ್ದರೂ ಆ ಸ್ವರ ಕಂಪಿ ಸುತ್ತಿತು. ನನಗಿಂತ ಆತ ಮೂರು ನಾಲ್ಕು ವರ್ಷ ದೊಡ್ಡವನಿದ್ದಿರ ಬೇಕು. ಕಸಬಿಗೆ ಹೊಸಬನಲ್ಲ. ಅವನ ದೃಷ್ಟಿ ಅದನ್ನು ಹೇಳುತ್ತಿತ್ತು. ಉತ್ತರದವನ ಹಾಗೆ ಮಾತನಾಡುತ್ತಿದ್ದ. ಅವನ ಹಿಂದೂಸ್ಥಾನಿ ಆಕರ್ಷಣೀಯವಾಗಿತ್ತು-ನಮ್ಮ ತಂದೆ ನಾವಿಬ್ಬರೆ ಇದ್ದಾಗ ಮಾತ ನಾಡುತ್ತಿದ್ದ ಹಳ್ಳಿಯ ಕನ್ನಡದ ಹಾಗೆ.
"ಬಾ, ಚಾ ಕುಡಿಯೋಣ" ಎಂದು ಅವನು ಆಹ್ವಾನಿಸಿದ.