೫
"ಇಲ್ಲ ! ಇಲ್ಲ ! ನಾನೊಬ್ಬ ಓದುಗ ಆಷ್ಟೆ."
"ಇತ್ತೀಚೆಗೆ ಏನು ಓದಿದೀರಿ?"
"ನೀವೊಂದು ಕಾದಂಬರಿ ಬರೀತಾ ಇದ್ದೀರಿ ಅಂತ 'ಸಾಹಿತ್ಯ
__ಸುದ್ದಿ__ಸಾರ'ದಲ್ಲಿ ಓದಿದೆ."
"ಓ! .. ನೋಡಿ, ಮೇಜಿನ ಮೇಲಿರೋ ಹಸ್ತಪ್ರತಿಯೇ
ಆ ಕಾದಂಬರಿ. ಇದೇ ಈಗ ಮುಕ್ತಾಯವಾಗಿದೆ. ಇತಿ ಶ್ರೀ ಬರೆದು
ಕೈ ಇನ್ನೂ ಚೇತರಿಸಿಕೊಂಡಿಲ್ಲ.... ಹಸ್ತ ಪ್ರತಿಯೇ ನೋಡ್ತೀರೇನು ?"
ಆತ ಫೂಲ್ಸ್ ಕ್ಯಾಪ್ ಹಾಳೆಗಳ ರಾಶಿಯನ್ನೆಲ್ಲ ಎತ್ತಿಕೊಂಡರು.
ಆದರದಿಂದಲೇ ಎತ್ತಿಕೊಂಡರು ಎನ್ನಬೇಕು.....
ಅವರ ಮುಖವನ್ನು ನಾನು ಕುತೂಹಲದಿಂದ ದಿಟ್ಟಿಸುತ್ತಿದ್ದೆ.
ಬಲು ಸೂಕ್ಶ್ಮವಾಗಿ, ಬಣ್ಣದ ಬದಲಾವಣೆಗಳಾಗುತ್ತವೇನೋ ಎಂದು
ನಿರೀಕ್ಶಿಸುತ್ತಿದ್ದೆ. ಆದರೆ ಆ ವಿಶಾಲ ಕಣ್ಣುಗಳ ಹೊಳಪು ಎಲ್ಲವನ್ನೂ
ಮರೆಮಾಡಿತ್ತು.
"ಪ್ರತಿ ಮಾಡಿಸಿದೀರೇನು? ಬೇರೆ ಬೇರೆ ಕೈಬರಹಗಳಿವೆಯಲ್ಲ?"
"ಇಲ್ಲವಪ್ಪ. ಮೊದಲ ಇನ್ನೂರೈವತ್ತು ಪುಟ ನಾನು
ಬರೆದದ್ದಲ್ಲ"
ಅವರಿಗೆ ಸ್ವಲ್ಪ ಆಶ್ಚರ್ಯವೇ ಆಯಿತು.
"ಹಾಗಂದರೆ?"
"ಗಾಬರಿ ಬೀಳಬೇಡಿ. ಮೊನ್ನೆ ಕಾಹಿಲೆ ಮಲಗಿದ್ದೆ. ಏನೂ
ಬರೆಯದೆ ಮನಸ್ಸಿಗೆ ಬೇಸರವಾಗಿತ್ತು. ಆಗ ಸ್ನೇಹಿತರೊಬ್ಬರು
ಬಂದು ನನಗಾಗಿ ಬರೆದುಕೊಂಡರು-ರಾಘವೇಂದ್ರ ಅಂತ. ನೂರೈ
ವತ್ತು ಪುಟ ಅವರು ಬರೆದದ್ದು. ಇನ್ನೊಬ್ಬ ಸ್ನೇಹಿತರು - ನಾಗ
ಭೂಷಣ ಅಂತ-ನೂರು ಪುಟ ಬರೆದುಕೊಂಡರು. ಕೈಲಾಗದವನಿಗೆ
ನೆರವಾದ ಪುಣ್ಯಾತ್ಮರು!... ಅದಾದಮೇಲೆ ಉಳಿದದ್ದೆಲ್ಲ ನನ್ನ ಕೈಬರಹ
ಏನೂ ಚೆನ್ನಾಗಿಲ್ಲ ಅಲ್ಲವೆ?"
"ಯಾವುದು?"
"ಕೈ ಬರಹ!"