ಪುಟ:Vimoochane.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಮೀರ್ ಚಹಾವನ್ನು ಸಾಸರಿಗೆ ಬಸಿದುಕೊಂಡು ಹೀರುತ್ತಾ ನನ್ನ ಮುಖವನ್ನೇ ದಿಟ್ಟಿಸಿದ.

"ಆ ನೋಟುಗಳ ಜೊತೇಲಿ ಆ ವ್ಯಾನಿಟಿ ಬ್ಯಾಗ್ ನಲ್ಲಿ ವಿಸಿ ಟಿಂಗ್ ಕಾರ್ಡೂ ಇತ್ತು. ಅವರ ಬಂಗಲೆ ಇರೋದು ತಾರ್ದೇವ್ ನಲ್ಲಿ. ಅಲ್ಲಿಗೆ ಹೋಗಿ, ತಪ್ಪಾಯ್ತು ಅಂತ ಕ್ಷಮೆ ಕೇಳಿ, ಕೊಟ್ಟ ಡೋಣವೇನು ವಾಪಸ್ಸು ದುಡ್ನ?"

ಅಮೀರ್ ಹಾಗೆ ಕೇಳಿದಾಗ ನಗುತ್ತಿರಲಿಲ್ಲ.

"ಯಾಕೆ ಅಮೀರ್, ಗೇಲಿ ಮಾಡೋದು ತುಂಬ ಇಷ್ಟವೇನು ನಿಂಗೆ?" "ಮತ್ತೆ ದೇವರ ಹಾಗೆ ಕೂತಿದೀಯಲ್ಲ? ಮನಸ್ಸಿನಲ್ಲಿ ರೋದನ್ನ ಸ್ಪಷ್ಟವಾಗಿ ಹೇಳ್ಬಾರ್ದ್ದೆ?"

"... .... ...."

"ನೋಡು ಶೇಖರ್,ಇಷ್ಟು ದಿವಸದಿಂದ ನಾವು ಸ್ನೇಹಿತರು. ನಾನು ಮಾಡೋದು ತಪ್ಪು ಅಂತಿದ್ದರೆ ಬಾಯ್ಬಿಟ್ಟು ಹೇಳು. ಯಾವ

ಸುಡುಗಾಡಿಗೆ ಮುಚ್ಚುಮರೆ?"

ಆ ಸ್ವರದಲ್ಲಿ ನೋವಿತ್ತು. ಉದ್ವೇಗವಿತ್ತು, ತಿಳಿವಳಿಕೆ ಬಂದಾ ಗಿನಿಂದ ಸಂಕಷ್ಟ, ಪರಂಪರೆಗಳನ್ನೇ ಅನುಭವಿಸುತ್ತ ಬಂದ ನಾನು ಆ ಘಾಸಿಕೊಂಡ ಹೃದಯವನ್ನು ಅರ್ಥ ಮಾಡಿಕೊಳ್ಳಲು ಸಮರ್ಥ

ನಾಗಿದ್ದೆ. ಅಂದ ಮೇಲೆ-

"ಅಣ್ಣಾ ನನ್ನ ತಪ್ಪು ತಿಳೀಬೇಡ . ಇದು ಇಷ್ಟವಾದ ಕೆಲಸ ಅಂತ ಯಾರಾದರು ಮಾಡ್ತಾರ?" ಅಮೀರ್ ಗೆ ಸ್ವಲ್ಪ ಸಮಾಧಾನವಾದಂತೆ ತೋರಿತು. "ಶೇಖರ್ , ನಾನು ನಿನ್ನ ಜೇಬಿನಿಂದ ಐದು ರೂಪಾಯಿ ಕದಿಯೋಕೆ ಪ್ರಯತ್ನಪಟ್ಟ ದಿನದಿಂದ ತುಂಬ ಬದಲಾಗಿದ್ದೇನೆ. ಆಗ ನನಗೆ ಹಸಿವಾಗಿತ್ತು. ಎಂಜಲೆಲೆಗಾಗಿ ನಾಯಿಗಳು ಕಿತ್ತಾಡೋ ದಿಲ್ಲವೆ? ಹಾಗೆ. ನಾನು ಯಾರ ಮೇಲೆ ಬೀಳೋದಕ್ಕೂ ಸಿದ್ಧವಾಗಿದ್ದೆ. ಆದರೆ ನಿನ್ನನ್ನು ಕಂಡ ಮೇಲೆ, ನಿನ್ನ ಮಾತು ಕೇಳಿದ ಮೇಲೆ,ನಾನು