ಪುಟ:Vimoochane.pdf/೧೨೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಗುಣಮುಖನಾಗಿ ಹೊರಬಂದೆ. ಅಜ್ಜಿಯ ನೆನೆಪು ನನ್ನನ್ನು ಕಾಡುತ್ತಿತ್ತು. ಒಂದು ದಿನ ಸಂಜೆಯೆಲ್ಲಾ ಕುಳಿತು ದೀರ್ಘ ವಾದ ಒಂದು ಕಾಗದವನ್ನು ಅಜ್ಜಿಗೆ ಬರೆದೆ. ಅರ್ಧ ಸುಳ್ಳು, ಅರ್ಧ ಸತ್ಯ. ನನ್ನ ಬಗ್ಗೆ ಅಜ್ಜಿ ಕಾತರಗೊಳ್ಳಬೇಕೆಂಬ ಆಸೆಯಿಂದ, ನನ ಗಾದ ಕಾಹಿಲೆಯನ್ನು ಉಪ್ಪು ಖಾರ ಹಚ್ಚಿ ವಿವರಿಸಿದೆ. ಆದರೆ ಮರು ಕ್ಷಣವೇ, ಅಜ್ಜಿ ಗಾಬರಿಯಾಗಬಹುದೆಂದು ಹೆದರಿ, "ಈಗ ಗುಣ ವಾಗಿದೆ. ಪೂರ್ತಿ ಗುಣವಾಗಿದೆ. ಈಗ ಮೊದಲಿಗಿಂತ ಚೆನ್ನಾಗಿದ್ದೀನಿ" ಎಂದು ಬರೆದೆ. ಆ ಕಾಗದದ ವರದಿ ಪ್ರಕಾರ, ನನಗೆ ಉದ್ಯೋಗ ವಿತ್ತು __ ತಕ್ಕ ಮಟ್ಟಿಗೆ ಸಂಬಳ ಬರುವ ಉದ್ಯೋಗ. ಊರಿಗೆ ವಾಪಸ್ಸು ಬರುವ ಆಸೆ ಆಗುತ್ತಿತ್ತು. ಆದರೆ ಸಾಕಷ್ಟು ಸಂಪಾದನೆ ಮಾಡದೆ ಹಿಂತಿರುಗುವುದು ಹೇಗೆ? ಕಾಗದದ ಮುಕ್ತಾಯದಲ್ಲಿ ಹೃತ್ಪೂರ್ವಕವಾಗಿ ಹೃದಯ ತೋಡಿಕೊಳ್ಳುತ್ತಾ ಬರೆದೆ.

"ಅಜ್ಜೀ, ಆಗಾಗ್ಗೆ ನಿಮ್ಮ ನೆನಪಾಗ್ತದೆ. ನಿಮ್ಮನ್ನು ನೋಡ ಬೇಕೆಂಬ ಆಸೆ. ನೀವು ಮಾಡಿದ ಚಕ್ಕುಲಿ ಕೋಡುಬಳೆ ಈ ಹಾಳು ಬೊಂಬಾಯಿಯಲ್ಲಿ ಎಲ್ಲಿ ಸಿಗಬೇಕು? ಈ ಅತ್ತಿಗೆ ಒಳ್ಳೆಯವಳು. ಆದರೂ ನಾನು ಬೆಳೆದು ದೊಡ್ಡವನಾದ ಊರು ನನ್ನನ್ನು ಕರೆಯು ತ್ತಿದೆ. ಇನ್ನೂ ಕೆಲವು ತಿಂಗಳು. ಆಮೇಲೆ ಬಂದೇ ಬಿಡ್ತೇನೆ ಅಜ್ಜಿ, ಊರಿಗೆ ಬಂದೇ ಬಿಡ್ತೇನೆ."

ಆಮೀರ್ ಕೇಳಿದ:

" ಅಜ್ಜಿಗೆ ಬರೀತಾ ಇದ್ದೀಯೇನೋ"

"ಹೂನಪ್ಪ".

ಆತ ಸಿಗರೇಟು ಹಚ್ಚುತ್ತಾ ಹೊಗೆಯ ಮುಸುಕಿನ ಹಿಂದೆ ಮುಖಮರೆಸಿಕೊಂಡು ಕುಳಿತ. ಆದರೆ ನನಗೆ ಗೊತ್ತಿತ್ತು. ಹಳೆಯ ನೆನಪು ಅವನನ್ನು ಬಾಧಿಸುತ್ತಿರಬೇಕು. ಊರೆಲ್ಲಾ ಬಿಟ್ಟು ಬಂದಿದ್ದ ವಯಸ್ಸಾದ ತಾಯಿಯ ದೊಡ್ಡಣ್ಣನ ಮತ್ತು ಅಕ್ಕತಂಗಿಯರ ನೆನಪು ಅವರಲ್ಲಿ ಯಾರು ಯಾರು ಗಂಡದಿರ ಮನೆಗೆ ಹೋದರೊ. ಅವನು ಎಂದೂ ಕಾಗದ ಬರೆದವನೆಲ್ಲ. ಅವನ ಮನೆಯ