ಪುಟ:Vimoochane.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಈ ಆಟವೆಲ್ಲಾ ಬಿಟ್ಟುಡು. ಸಿನಿಮಾ ಬೇಕಾಗಿದ್ರೆ ತೆಪ್ಪಗೆ ಬಾ. ನೀನು ಚೆಂದವಾಗಿದ್ರೆ ಸಾಕು. ಅಲ್ವಾ ಶೇಖರ್?"

ಅವರ ಜಗಳ ನನಗೆ ಹೊಸದಾಗಿರಲಿಲ್ಲ. ಆದರೆ ಅಮೀರ್ ಎಂದೂ ಸೋತವನಲ್ಲ. ಅವನ ವ್ಯಕ್ತಿತ್ವವೇ ಅಂಥದು. ಕೊನೆಗೆ ಸೋಲನ್ನೋಪ್ಪಿಕೊಳ್ಳುತ್ತಿದ್ದವಳು ಶೀಲಳೇ. ಅದರಿಂದ ಅವಳಿಗೆ ಹೆಚ್ಚಿನ ಆಸಮಾಧಾನವೇನೂ ಆಗುತಿರಲಿಲ್ಲ. ಅಮೀರ್ ತನಗಾಗಿ ತುಂಬಿ ಕೊಡುತ್ತಿದ್ದ ಪ್ರೀತಿಯ ಬಟ್ಟಲು ಅವಳ ಪಾಲಿನ ಸ್ವರ್ಗವಾಗಿತ್ತು.

ಅಮೀರ್ ಆಜ್ಞೆ ಕೊಟ್ಟ ಮೇಲೆ ನಾನು ಸೂಟು ಧರಿಸಿದೆ. ಮೂವರೂ ಮನೆ ಬಿಟ್ಟು ಹೊರಟೆವು. ಅಂಚೆಯ ಮನೆಯವರೆಗೂ ನಡೆದು ಹೋಗಿ ಅವರಿಬ್ಬರ ಎದುರಲ್ಲಿ ಕಾಗದವನ್ನು ಅಜ್ಜಿಗೆ ಕಳಿಸಿ ಕೊಟ್ಟದಾಯಿತು. ಅಲ್ಲಿಂದ ನಾವು ಸಿನಿಮಾ ಮಂದಿರ ಸೇರಿದೆವು.

ಹಳೆಯ ನೆನಪುಗಳು ಚಲಚ್ಚಿತ್ರದ ಸುರುಳಿಗಳಂತೆ ಒಂದರ ಮೇಲೊಂದಾಗಿ ದೃಷ್ಟಿಯ ಮುಂದೆ ಹಾದು ಹೋಗುತ್ತವೆಂದು ಹೇಳುವು ದುಂಟು. ಹಲವು ವರ್ಷಗಳ ಮೇಲೆ ಈಗ ನನಗೆ ಹಾಗೆಯೇ ಆಗುತ್ತಿದೆ ತಬ್ಬಲಿಯಾಗಿ ಪ್ರಪಂಚ ಸಾಗರದಲ್ಲಿ ತೇಲಿ ಬಿಟ್ಟು ನನ್ನ ದೋಣಿ ಗಾಳಿ ಬೀಸಿದತ್ತ ಚಲಿಸಲಿಲ್ಲವೆ? ಚುಕ್ಕಾಣಿ ಹಿಡಿದು ನಾನು ಅಪೇಕ್ಷೆ ಪಟ್ಟ ಗುರಿಯತ್ತ ಅದನ್ನು ಒಯ್ಯುವುದು ಸಾಧ್ಯವಾಯಿತೆ?

ಆಮಾರನ ಸಹೋದ್ಯೋಗಿಯಾಗಿ ನಾನು, ಸಮಾಜ ಕಂಟಕ ನಾದೆ. ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಹಲವು ಕೆಲಸಗಳನ್ನು ಮಾಡಿದೆ. ಮುಚ್ಚಿಕೊಂಡ ಚಾಕು ನನ್ನ ಕೈಯಲ್ಲಿ ಚಿಣ್ಣನೆ ಚಿಗಿದು ಬಾಯಿ ತೆರೆಯುವುದನ್ನು ಕಲಿಯಿತು. ಅದನ್ನು ಅಪರಿಚಿತ ವ್ಯಕ್ತಿಯ ಕೊರಳಿಗೋ ಹೊಟ್ಟೆಗೋ ಗುರಿಯಿಟ್ಟು ಬೆದರಿಸುತ್ತ ಹಣ ಸಂಪಾದಿ ಸಲು ನಾನು ಕಲಿತೆ. ಪಿಸ್ತೂಲು ಹಿಡಿಯುವ ಆಧುನಿಕರು ನಾವಾಗಿರ ಲಿಲ್ಲ. ಕೊಲೆಯ ಮಾರ್ಗವಾಗಿಯೇ ಗುರಿಸೇರುವ ಪಾತಕಿಗಳು ನಾವಾಗಿರಲಿಲ್ಲ. ಒಂದು ಜೀವವನ್ನು ಕೊನೆಗಾಣಿಸುವ ಅಧಿಕಾರ ಇನ್ನೊಂದು ಜೀವಕ್ಕೆ ಇಲ್ಲ ಎನ್ನುವುದು ನನ್ನ ಅಭಿಪ್ರಾಯ,ಆಗಲೂ