ಪುಟ:Vimoochane.pdf/೧೨೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಈಗಲೂ. ಬೇರೆ ಉದ್ಯೋಗ ನಮಗೆ ದೊರೆತಿದ್ದರೆ, ಸದ್ಗೃಹಸ್ಥರಾಗಿ ಬಾಳುವ ಅವಕಾಶ ನಮಗೆ ಇದ್ದಿದ್ದರೆ, ಈ ವೃತ್ತಿಗೆ ನಾವು ಕಟ್ಟು ಬೀಳುವ ಅವಶ್ಯತೆಯೇ ಇರಲಿಲ್ಲ...........

ಅಜ್ಜಿಯಿಂದೊಂದು ಕಾಗದ ಬಂತು----ನನ್ನದಕ್ಕೆ ಉತ್ತರ. ಆ ಮೇಲೆ ಇನ್ನೊಂದು ಬಂತು. ಎರಡು ತಿಂಗಳ ಮೇಲೆ ಮತ್ತೊಂದು. ಎಲ್ಲ ಕಾಗದಗಳಲ್ಲೂ ಇದ್ದ ಹಾಡು ಒಂದೇ.

"ಊರಿಗೆ ಬಾ ಚಂದ್ರು, ವಾಪಸ್ಸು ಬಾ. ನನಗೆ ಮೈ ಚೆನ್ನಾ ಗಿಲ್ಲ. ಬಾ, ತಪ್ಪದೆ ಬಾ"

ಅಜ್ಜಿಯಿಂದ ಕಾಗದ ಬಂದಾಗಲೆಲ್ಲ ನಾನು ಅಂತರ್ಮುಖಿ ಯಾಗುತ್ತಿದ್ದೆ. ನನಗೆ ಆತ್ತೀಯರಾಗಿದ್ದ ಆ ವ್ಯಕ್ತಿಗೆ ನಾನೇನು ಸುಖ ವನ್ನು ಕೊಟ್ಟಿದ್ದೆ ? ಏನು ಕೊಟ್ಟಿದ್ದೆ ?

ಒಮ್ಮೆ ಆಮೀರನಿಗೆ ಹೇಳಿ ಐವತ್ತು ರೂಪಾಯಿಗಳನ್ನು ಅಜ್ಜಿಗೆ ಕಳುಹಿಸಿಕೊಟ್ಟಿ.

"ಬೇಗನೆ ಬರ್ತೀನಿ ಅಜ್ಜಿ. ಏನೂ ಚಿಂತಿಸಬೇಡಿ ಔಷಧಿ ತಗೊಳ್ಳಿ. ಯಾವ ಯೋಚನೇನೂ ಮಾಡಬೇಡಿ. ನಾನು ಖಂಡಿತ ಬರ್ತೀನಿ" ಎಂದ ಬರೆದೆ.

ನನ್ನ ಮನಸ್ಸಿನ ಹೊಯ್ದಾಟಗಳನ್ನು ಆಮೀರ್ ಸೂಕ್ಷ್ಮವಾಗಿ ನಿರೀಕ್ಷಿಸುತ್ತಿದ್ದ. ಮೊದಮೊದಲು ಅವನು ಮೃದುವಾಗಿದ್ದ ಆದರೆ ಬರಬರುತ್ತ.......

"ಶೇಖರ್. ಮುಂದೇನಾದೀತು ಹೇಳೋದು ಸಾಧ್ಯವಾ? ನಾವು ಮುಂದೆ ಏನ್ಮಾಡಬೇಕೂಂತ ನಿನ್ನ ಯೋಚನೆ? ನಿನ್ನ ಮನಸ್ಸು ಬರೇ ಬೆಣ್ಣೆ ಆಂತ ನನಗೆ ಗೊತ್ತಿರಲಿಲ್ಲ. ಅಜ್ಜಿ ಅಜ್ಜಿ ಅಂತ ಬಡ ಕೊಳ್ಳೋದು ಎಲ್ಲಾದ್ರೂ ಉಂಟೆ? ಅದೂ ನಿನ್ನ ವಯಸ್ಸಿನಲ್ಲಿ? ಏನೋಪ್ಪ, ನೀನು ಹೀಗಾಗ್ತಿ ಅಂತ ತಿಳಿದಿರಲಿಲ್ಲ."

"ಈಗ ಏನಾಗಿದೆ ಆಮೀರ್?"

"ಆಗಿರೋದೇನು? ಅದು ನಾನು ಕೊಡಬೇಕಾದ ಉತ್ತರವೆ? ಉತ್ತರಿಸಬೇಕಾದವನು ನೀನು---ನಾನಲ್ಲ."