ಪುಟ:Vimoochane.pdf/೧೨೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ನೀನೂ ಕೂಡಾ ಯಾರನ್ನಾದರೂ ಗುರ್ತು ಮಾಡ್ಕೊ೦ಡು ಮನೆಗೆ ಕರ್ಕೊಂಡು ಬಾ. ಅದರಿಂದ ನಿನ್ನ ಮನಸ್ಸಿಗೆ ಸಮಾಧಾನವಾದರೂ ಆಗ ಬಹುದು.ನೀನು ವಿದ್ಯಾವಂತ,ಇಂಗ್ಲಿಷ್ ಬರತ್ತೆನಿಂಗೆ.ನಿನ್ನಂಥ ವರು ನಮ್ಮ, ವೃತ್ತೀಲಿ ಪಳಗಿದರೆ, ಏನು ಬೇಕಾದರೂ ಮಾಡಬಹುದು. ನೀನು ಹೀಗೆ ಕರಗಿ ಹೋಗೋದನ್ನ ಸಹಿಸೋದು ನನ್ನ ಕೈಲಾಗೋದಿಲ್ಲ. ಏನಪ್ಪಾ ಶೇಖರ್ ?"

ಆ ಮಾತುಗಳನ್ನು ಹೇಳುತ್ತಾ ಆತನೇ ಕರಗುತ್ತಿದ್ದ. ಅವನ ಸ್ವರ ಕಂಪಿಸುತಿತ್ತು. ನನ್ನನ್ನು ಆತ ಬಲುವಾಗಿ ಪ್ರೀತಿಸುತ್ತಿದ್ದ ನೆಂಬುದರಲ್ಲಿ ಸಂಶಯವೇ ಇರಲಿಲ್ಲ. ಪ್ರಾಯಶಃ ನಾನು ವೃತ್ತಿಯ ಬಗ್ಗೆ ಪೂರ್ಣ ಆಸಕ್ತಿ ವಹಿಸದೆ ತಪ್ಪು ಮಾಡುತ್ತಿರುವನೋ ಏನೋ ಅನಿಸಿತು. ಹಿಂದೆ ಬೇಡ ಬೇಡವೆಂದು ಅಜ್ಜಿ ಹೇಳುತ್ತಿದ್ದಾಗ ಮನೆ ಬಿಟ್ಟು ಹೊರಟ ನಾನು, ಹೀಗೆ ಮಾಡುವುದು ತಪ್ಪೇನೊ ಎಂದು ಯೋಚಿಸಿದೆ ಹಾಗೆ , ನಾನು ಹೇಳಿದೆ :"

ಆಮೀರ್, ನೀನು ನನಗೊಬ್ಬ ಅಣ್ಣ ಇದ್ದಹಾಗೆ ನಾನು ಏನೇನೋ ಆಗಬೇಕೊಂತ ಆಸೆ ನಿನಗೆ. ನಮ್ಮಪ್ಪನೂ ಹಾಗೆಯೇ. ನಾನು ದೊಡ್ಡ ಮನುಷ್ಯನಾಗಬೇಕೊಂತ ಬಯಸಿದ್ದ. ನಾನು ಹಾಗಾಗ ಲಿಲ್ಲ. ಈಗ ಇನ್ನೇನಾಗುತ್ತೋ ಏನೋ."

ಯಾಕೆ, ನಿನ್ನ ಜೀವ ನಿನ್ನ ಕೈಲಿ ಇಲ್ಲವೇನು?"

ನನ್ನ ಜೀವ ನನ್ನ ಕೈಲಿ ಇತ್ತೆ ? ದೈವ ಭೀರುವಾಗಿ ನಾನು ಬೆಳೆದು ಬಂದಿರಲಿಲ್ಲ ನಿಜ. ಹೇಮಾವತಿ ನದಿಯಲ್ಲಿ ದೇವರು ತೇಲಿ ಹೋದ ಮೇಲೆ, ಸರ್ವಾಂತರ್ಯಾಮಿಯಾದ ಅವನ ಸಾಕಾರ ಮೂರ್ತಿಯನ್ನು ನಾವು ಪೂಜಿಸಿರಲಿಲ್ಲ. ಗುಡಿಗಳಿಗೆ ಹಗಲೆಲ್ಲಾ ಹೋಗಿ ಪ್ರದಕ್ಷಿಣೆ ಬರುತ್ತಿರಲಿಲ್ಲ. ನನ್ನ ಓದು ನನ್ನನ್ನು ಸಂಶಯ ಪ್ರವೃತ್ತಿಯವನನ್ನಾಗಿ ಮಾಡಿತ್ತು, ಆದರೂ-

ಈಗ ನನ್ನ ಜೀವ ನನ್ನ ಕೈಯಲ್ಲಿ ಇದೆ ಎಂದು ಹೇಳಬಲ್ಲೆ. ಆದರೆ ಆಗ ಹಾಗೆ ಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಯಾವುದೋ ಅಗೋಚರ ಶಕ್ತಿಯೊಂದು ನನ್ನ ಜೀವನ ಗತಿಯ ಮೇಲೆ ಪ್ರಭುತ್ವ