ಪುಟ:Vimoochane.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಮುಖರು. ಅವರಿಗೆ ಈ ಕೃತಿಯನ್ನು ಆರ್ಪಿಸುವುದು ನ್ಯಾಯೋಚಿತ".
ನನ್ನ ವಿವರಣೆ, ಅವರ ಸಂತೋಷವನ್ನು ಹೆಚ್ಚಿಸಿದಂತೆ ತೋ"
ರಿತು. ಮುಂದೆ ಹಾಳೆಗನ್ನು ಅವರು ತಿರುವಿದರು.
"ಇದು,'ನಾನು' ಹೇಳಿದ ಕತೆಯಾಗಿದೆಯಲ್ಲ!"
"ಈ ಕಾದಂಬರಿಯ 'ನಾನು' ನಾನಲ್ಲ!‍ ಓದಿ ನೋಡಿ
. ನಿಮಗೇ ಗೊತ್ತಾಗ್ತದೆ."
"ಅದು ಸ್ಪಷ್ಟವಾಗಿಯೇ ಇದೆ. ತಮಾಷೆಗೆ ಹೇಳಿದೆ ಅಷ್ಟೆ.
ಆ ಪತ್ರಿಕೆಯಲ್ಲಿ ಬರೆದಿದ್ದರು: ಸನ್ಮಾರ್ಗದಲ್ಲಿ ಸಾಗಲಾಗದೆ ಅಡ್ಡದಾರಿ
ಹಿಡಿದ ವಿದ್ಯಾವಂತ ಯುವಕನೋರ್ವನ ದುರಂತ ಕಥೆ -ಆಂತ.
ಹೌದೆ?"
"ನೀವೇ ಓದಿ ನೋಡಿ. ತೋರಿಕೆಗೆ ಹಾಗಿದೆ. ಆದರೆ---?"
"ಹಾಗಾದರೆ ಇದು ಒಬ್ಬ ವ್ಯಕ್ತಿಯ ಜೀವನಕಥೆ ಆಲ್ಲವೆ?"
"ಆಲ್ಲ, ಇದು ನಮ್ಮೆಲ್ಲರ ಸುತ್ತುಮುತ್ತಲಿನ ಜೀವನದ ಕಥೆ.
ಇಲ್ಲಿ ಬರುವ ಮುಖ್ಯ ಪಾತ್ರವಾದ ಚಂದ್ರಶೇಖರ-ಒಬ್ಬ medium.
ಆತನೊಬ್ಬ, ಜಗತ್ತನ್ನು ನಾವು ನೋಡುವುದಕ್ಕೋಸ್ಕರ ಇರುವ
ಕಿಟಿಕಿ. ಸ್ವಲ್ಪ ವಿಚಿತ್ರವಾದ ಕಿಟಿಕೀಂತಲೇ ಅನ್ನಿ. ಅವನ ಜೀವನ
ಕಥೆಯನ್ನು ನಾವು ತಿಳಿಯುವುದರ ಮೂಲಕ, ಇಡಿಯ ಜೀವನದ.
ಕಥೆಯನ್ನೇ ಓದಿದಂತಾಗಬೇಕೆಂಬುದು ನನ್ನ ಅಪೇಕ್ಷೆ......"
"ಈ ಪ್ರಯೋಗ ಯಶಸ್ವಿಯಾಗಬಹುದು ಅನ್ನುತ್ತೀರಾ?"
"ಯಾಕಾಗಬಾರದು?"
"ನಿಮಗೆ ತೃಪ್ತಿಯಾಗಿದೆಯೆ?"
"ಆಗಿದೆ-ಬಹಳಮಟ್ಟಿಗೆ. ಇದು ಚಂದ್ರಶೇಖರನೋಬ್ಬನ
ಕತೆಯೇ ಅಲ್ಲ. ಹಳ್ಳಿಯಿಂದ ಅನ್ನಾನ್ನಗತಿಕರಾಗಿ ನಗರಕ್ಕೆ ಬರುವ"
ರೈತರು, ಮಗ ದೊಡ್ಡವ್ಯಕ್ತಿಯಾಗಬೇಕೆಂಬ ಹಂಬಲದಿಂದ ತನ್ನನ್ನು"
ತಾನು ಹಗಲಿರುಳೂ ತೇಯುವ ತಂದೆ, ಅನ್ಯ ಜಾತಿಯವರನ್ನೂ ಆತ್ಮೀ"
ಯತೆಯಿಂದ ಕಾಣಬಲ್ಲ ಹಳೆಯ ತಲೆಮಾರಿನ ಅಜ್ಜಿ, ಬಿಟ್ಟಿ ಬೇಗಾರಿ"
ಮಾಡಿಸುವ ಬಡ ಉಪಾದ್ಯಯರು, 'ದಾನಶೀಲ'ರಾದ ಲೋಕ"