ಪುಟ:Vimoochane.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ವರೆಗೆ ನನ್ನ ಅಜ್ಜಿಗೆ ಆಲ್ಪ ಸ್ವಲ್ಪ ಸಹಾಯ ಮಾಡತ್ತಿದ್ದ ನೆರೆ ಮನೆಯವರು, ನನಗೆ ತಂತಿ ಕಳುಹಿದ್ಡವರು, ನನ್ನ ಓಡಾಟವನ್ನು ತಿರ ಸ್ಕಾರದಿಂದ ನೋಡಿದರು. ಆನ್ಯ ಜಾತಿಯ ಫೋಲಿ ಹುಡುಗನೊಬ್ಬ ಮರಣೋನ್ಮುಖಳಾದ ವೃದ್ದ ಸ್ತ್ರೀಯೊಬ್ಬಳ ಶುಷ್ರೊಷೆ ಮಾಡುವು ದೆಂದರೇನು? ಆದರ ಅರ್ಥವೇನು?

ಅರ್ಥವಿತ್ತು ಅದಕ್ಕೆ. ಅಜ್ಜಿಯ ಅಸ್ತಿಯನ್ನು ಹೊತ್ತು ಹಾಕಲು ನಾನು ಯತ್ನಿಸುತ್ತಿದ್ದೆನೆಂದು ಅವರು ಬಹಿರಂಗವಾಗಿಯೇ ಆರೋಪಿ ಸಿದರು.

ನಾನು ಬಂದ ಮೂರನೆಯ ದಿನ ಅಜ್ಜಿ ಎದ್ದು ಕುಳಿತುಕೊಳ್ಳಲು ಸಮರ್ಥರಾದರು. ತನ್ನನ್ನು ಅದೆ ಕ್ಷಣವೊ ಬಿಟ್ಟಿರಬಾರದೆಂದು ಅಜ್ಞೆ ಕೊಟ್ಟರು. ವಾಂತಿ ಬೇದಿ ನಿಂತು, ಜ್ವರ ಇಳಿಮುಖವಾಗಿತ್ತು. ಲೋಕವನ್ನು ನೋಡಿ ನಗುತಲಿತ್ತು ಮೂಳೆಯ ಹಂದರ......ಆ ನೆರೆಮನೆಯವರು ದೂರವೇ ನಿಂತರು. ತಮ್ಮ ಆಚಾರ ನೀತಿಗಳಿಗೆ ನನ್ನಿಂದ ಆತಂಕವಾಗಬಾರದೆಂದು ದೂರವೇ ನಿಂತರು.

ಆಕೆಯನ್ನು ಬಿಟ್ಟುಹೋಗಿ ನಾನು ಮಾಡಿದ ಅಪರಾಧಕ್ಕೆಲ್ಲಾ ಪ್ರಾಯಶ್ಚಿತ್ತ ಎನ್ನುವಂತೆ, ಹಗಲೂ ರಾತ್ರಿ ನಿಷ್ಟೆಯಿಂದ ಆ ಮುದುಕಿಯ ಸೇವೆ ಮಾಡಿದೆ.

ಆದರೆ ಕಾಹಿಲೆ ಮರಳಿ ಬಂತು.

ನಾನು ದಿಗ್ಮೂಡನಾದೆ. ಈ ರೋಗದಿಂದ ಅಜ್ಜಿಗೆ ಬಿಡುಗಡೆಯೇ ಇಲ್ಲವೆ ಹಾಗಾದರೆ?

ನಾನು ನಮ್ಮ ಬೀದಿಯ ದೊಡ್ಡ ಡಾಕ್ಟರಲ್ಲಿಗೆ ದಾವಿಸಿದೆ.

ಬಂದಿದ್ದ ರೋಗಿಗಳೆಲ್ಲಾ ಹಿಂತಿರುಗಿದ ಮೇಲೆ ಅವರು ನನ್ನನ್ನು ಮಾತನಾಡಿಸಿದರು.

"ಏನಪ್ಪ, ಏನು ವಿಶೇಷ?"

"ನಮ್ಮಜ್ಜಿಗೆ ಸಾರ್, ನಮ್ಮಜ್ಜಿಗೆ ಕಾಹಿಲೆ ಸಾರ್."

"ಏನು ಕಾಹಿಲೆಯೋ?"

"ವಾಂತಿ ಬೇದಿ ಸಾರ್. ನಿಂತಿತ್ತು, ಆದರೆ ತಿರ್ಗಾ ಹತ್ಕೊಂಡು.