ಪುಟ:Vimoochane.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೮

ವಿಮೋಚನೆ

ಹೊರಗೆ ನಡೆದು ಆಯಾಸವಾದಾಗ ಮನೆಗೆ ಬಂದು ಮಲಗಿ ಕೊಳ್ಳುತ್ತಿದ್ದೆ . ಹದಿನಾಲ್ಕು ವರ್ಷಗಳಿಂದಲೂ ನಾನು ಕುಡಿದು ಬೆಳೆದಿದ್ದ ಬಾವಿ ನೀರು........ಅದರಿಂದ ನಾಲ್ಕು ಕೊಡ ಸೇದಿ ತಲೆಯ ಮೇಲೆ ಸುರಿದುಕೊಂಡರೆ, ಹಾಯೆನಿಸುತ್ತಿತ್ತು

ಆಗಾಗ್ಗೆ ಅಮಿರನ ನೆನಪಾಗುತ್ತಿತ್ತು ----ಶೀಲಳ ನೆನಪಾಗು ತ್ತಿತ್ತು . ಆದರೆ ಬೊಂಬಾಯಿಯ ಕರೆ ನನಗೆ ಕೇಳಿಸಲಿಲ್ಲ. ಕಟುಕ ನಾಗಿ ಬಾಳಲು ಆ ಮಹಾ ನಗರವೇ ಆಗಬೇಕೆ ? ನಮ್ಮ ಊರು-- ಸಾಲದೆ ? ನಮ್ಮ ಊರು--

........ಆ ದಿನಗಳನ್ನು ಈಗ ಸ್ಮರಿಸಿಕೊಂಡಾಗ ಸಂದೇಹದ ಅಲೆಗಳೇಳುತ್ತವೆ. ಒಂದು ವೇಳೆ ಹಾಗಾಗಿದ್ದರೆ? ಹೀಗಾಗಿದ್ದರೆ? ಆ ಅವಕಾಶದ ಬದಲು ಬೇರೊಂದು ಅವಕಾಶ ದೊರೆಯುತ್ತಿದ್ದರೆ? ಅಂಥ ಕಟು ಅನುಭವದ ಬದಲು ಬೇರೇನೋ ಇರುತ್ತಿದ್ದರೆ?..... ಹೀಗೆ ಚಿಂತಿಸುವುದರಲ್ಲಿ ಅರ್ಥವೇನೂ ಇಲ್ಲ ಎಂಬುದನ್ನು ನಾನು ಬಲ್ಲೆ. ಆದರೂ ಮನಸ್ಸು ಅತ್ತ ಧಾವಿಸುತ್ತಿದೆ. ಗತಕಾಲದ ಬಗೆಗೆ ನನ್ನಲ್ಲಿರುವ ಕನಿಕರ ಕಳವಳವನ್ನೆಲ್ಲಾ ಒಂದೇ ಸಂಜ್ಞೆಯಿಂದ ತೊಡೆದು ಹಾಕುವುದು ಹೇಗೆ ಸಾಧ್ಯ?

ನಾನು ಊರು ಬಿಟ್ಟು ಮತ್ತೊಮ್ಮೆ ಪರದೇಶಿಯಾಗಲಿಲ್ಲ. ತಂದೆಯ ಸಾವಿಗೆ ಮೊದಲು ನನಗಿದ್ದ ಉದ್ಯೋಗದ ಎಳೆಯನ್ನು ಮತ್ತೆ ಎತ್ತಿಕೊಂಡು ಜೀವನದ ಬುಗುರಿಯನ್ನಾಡುವುದು ಅಷ್ಟು ಸುಲಭವಾಗಿರಲಿಲ್ಲ. ಬೊಂಬಾಯಿಯ ಆನುಭವಗಳು ನನ್ನ ಬಾಳಿನಲ್ಲಿ ಹಾಸುಹೊಕ್ಕಾಗಿದ್ದುವು.

ಆದರೂ ನಾನು ಸಮಾಜದ ದೃಷ್ಟಿಯಲ್ಲಿ ಸಂಭಾವಿತನಾಗಿ ಇರುವುದಕ್ಕೋಸ್ಕರ ಉದ್ಯೋಗ ಹುಡುಕಿದೆ.

ಆಮೀರನ ಸ್ವರ ನನ್ನನ್ನು ಆಣಕಿಸುತ್ತಿತು:

" ಒಬ್ಬರನ್ನೊಬ್ಬರು ಸುಲಿದು ತಿನ್ನೋದೇ ಈ ಪ್ರಪಂಚದ ಸೂತ್ರ ಶೇಖರ."