ಎಂಬ ಘೋಷಣೆ ಇತ್ತು. ಆ ನೋಟ ನಾನು ಮಾಡಬೇಕಾದ ಕಾರ್ಯ ವೇನೆಂಬುದನ್ನು ತಿಳಿಯಹೇಳಿತು.
ಆ ಗುಂಪಿನವರಲ್ಲೊಬ್ಬ ನನ್ನ ಮೈ ಮೇಲೆ ಕೈ ಮಾಡಿದ. ಕೈಲಿದ್ದ ದೊಣ್ಣೆಯನ್ನು ಬೀಸಿದೆ. ಅವನು ಕುಂಟುತ್ತಾ ದೂರ ಹೋದ ___ಕಾಲುಗಳೆಡೆಯಲ್ಲಿ ಬಾಲ ಮಡಚಿ ಹೋಗುವ ಪುಕ್ಕಲು ನಾಯಿಯ ಹಾಗೆ.
"ಯಾರು ಬರ್ತ್ತಿರ ಇನ್ನು? ಬನ್ನಿ........ಬಂದ್ಬಿಡಿ........" ಯಾರು ಬರಲಿಲ್ಲ. ಅವರಲ್ಲಿ ವಯಸ್ಸಾದವನೊಬ್ಬ ತೀರ್ಪು ಕೊಡುವ ಧ್ವನಿಯಲ್ಲಿ ಹೇಳಿದ.
"ಅಂಥ ಸಾಹಸಿಯಾಗಿದ್ದರೆ ಕರ್ಕೊಂಡು ಹೋಗೋ ಆವಳ್ನ. ನೋಡ್ಕೋತೀವಿ........"
"ಏಳಮ್ಮ,"ಎಂದೆ ನಾನು___ಆ ಹೆಂಗಸನ್ನು ಉದ್ದೇಶಿಸಿ.
ಆಕೆ ಪ್ರಯಾಸದಿಂದ ಎದ್ದಳು . ಆ ಜನ ಮತ್ತೆ ಕಿರಿಚಿಕೊಂಡರು. ಅವರ ನಡುವೆ ಇದ್ದ ವೃದ್ದೆ, ಲೊಬೋ ಲೊಬೋ ಎಂದು ಬಾಯಿ ಬಡೆದುಕೊಂಡಳು.
ಏನಾಗುತ್ತಿದೆ ಎಂದು ನಾನು ಊಹಿಸುವುದೂ ಸಾಧ್ಯವಿಲ್ಲದ ಹಾಗೆ ಘಟನೆ ನಡೆದು ಹೋಗಿತ್ತು. ಅಷ್ಟು ಜನರ ಕೋಪಕ್ಕೆ ಗುರಿ ಯಾಗಿದ್ದ ಹೆಣ್ಣೊಂದು ನನ್ನನ್ನು ಹಿಂಬಾಲಿಸಿ ಬಂತು. ದೊಣ್ಣೆ ಹಿಡಿದು ನಾನದರ ರಕ್ಷಕನಾಗಿ ಮುಂದುವರಿದೆ. ಸ್ವಲ್ಪ ದೂರದ ತನಕ ಯಾರೋ ಒಬ್ಬಿಬ್ಬರು, ಉಗುಳುತ್ತ ನಮ್ಮ ಹಿಂದೆಯೇ ಬಂದರು.
"ಪೋಲೀಸರನ್ನ ತರ್ತೀವಿ. ಕೋರ್ಟಗೆಳೀತೀವಿ ನಿನ್ನ. ಆಗ ಗೊತ್ತಾಗುತ್ತೆ."
ನನ್ನನ್ನು ಕುರಿತಾದ ಬೆದರಿಕೆ ಇದು. ಆ ಮಾನವ ಜಂತು ಗಳು ಬಲು ತುಚ್ಛವಾಗಿ ನನಗೆ ಕಂಡರು. ಒಂದು ಹೆಣ್ಣು ಜೀವ ವನ್ನು ಬೀದಿಗೆಸೆದು ಶೌರ್ಯ ಪ್ರದರ್ಶನ ಮಾಡುತ್ತಿದ್ದವರು, ತಾವೇ ಆನ್ಯಾಯಕ್ಕೆ ಗುರಿಯಾದವರ ಹಾಗೆ, ಪೋಲೀಸರ___ನ್ಯಾಯಾಸ್ಥಾನದ