ಪುಟ:Vimoochane.pdf/೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

ಸೂಚಿತವಾದರೆ ಸಾಹಿತ್ಯ ಕೃತಿ ಯಾವಾಗಲೂ ಜೀವಂತವಾಗ್ತದೆ."
"ಅದೂ ನಿಜವೇ."
"ಇಲ್ಲಿ ೧೯೩೦ರ ಸ್ವಾತಂತ್ರ್ಯ ಹೋರಾಟ, ೧೯೪೯ರ ಮಹಾ
ಸಮರ, ನಾಲ್ವತ್ತೇಳರ ಸ್ವಾತಂತ್ರ್ಯದ ಹಿನ್ನಲೆಯ ಸಣ್ಣ ಪುಟ್ಟ ಚಿತ್ರ
ಗಳನ್ನೂ ಕಾಣಬಹುದು. ನಾನು ಚಿತ್ರಿಸಿರುವ ಚಂದ್ರಶೇಖರ ಮತ್ತಿ
ತರ ವ್ಯಕ್ತಿಗಳ ಮೇಲೆ ಆ ಸಂಭವಗಳಿಂದಾದ ಪರಿಣಾಮವನ್ನು
ತೋರಿಸಿ ಕೊಡುವುದಕ್ಕಾಗಿಯೇ ಆ ಘಟನೆಗಳು ಬಂದಿವೆ. ನಿಜ
ಜೀವನದಲ್ಲಿ ಯಾವ ವ್ಯಕ್ತಿಯೂ ಸಮಾಜದಲ್ಲಾಗುತ್ತಿರುವ ಮಾರ್ಪಾ
ಟುಗಳ ಸೂತ್ರದಿಂದ ಬಾಹಿರನಾಗುವುದು ಸಾಧ್ಯವಿಲ್ಲ ಅಲ್ಲವೆ?
ಅಂದ ಮೇಲೆ ಜೀವನದೊಡನೆ ನಿಕಟ ಸಂಬಂಧವಿರಿಸಿಕೊಂಡು ಸೃಷ್ಟಿಯಾ
ಗುವ ಸಾಹಿತ್ಯವೂ ಅಷ್ಟೆ."
ನಾನು ಮಾತನಾಡುತ್ತಲೇ ಇದ್ದೆ. ಭೈರಿಗೆ ಕೊರೆದ ಹಾಗೆ
ಆಗುತ್ತಿದೆಯೆನೋ ಎ೦ದು ಭಯನಾಯಿತು ನಡುವೆ. ಆ ವ್ಯಕ್ತಿ
ಯನ್ನು ದಿಟ್ಟಿಸಿ ನೋಡಿದೆ. ಆದರೆ ಅವರು ಆಸಕ್ತಿಯಿಂದ ಕಿವಿ
ಗೊಡುತಿದ್ದರು.
ನಾನು ಸುಮ್ಮನಾದಾಗ ಅವರೊಂದು ಪ್ರಶ್ನೆ ಕೇಳಿದರು:
"ಇದನ್ನ ದುರಂತ ಕಥೆಯಾಗಿ ಯಾಕೆ ಮಾಡಿದೀರಿ?'
"ದುರಂತ ಯಾವುದು? ಚಂದ್ರ ಶೇಖರನ ಆತ್ಮಹತ್ಯೆಯೆ?
ನೀವು ಓದಿನೋಡಿ ದುರಂತವನ್ನು ಸುಖಾಂತ ಮಾಡುವುದು ಸುಲಭ.
ಪಶ್ಚಾತ್ತಾಪದ ಬೆಂಕಿಯಲ್ಲಿ ಸುಟ್ಟು ಪುನೀತನಾದ ಆತ, ಜೀವಿತ
ಧ್ಯೇಯವೊಂದನ್ನು ಅಪ್ಪಿಕೊಂಡು, ಭವ್ಯ ಬಾಳ್ವೆ ನಡೆಸುವುದು...
ಆದರೆ ಅದು ಕೃತಕವಾಗುವುದಲ್ಲವೆ? ನಿಮಗೆ ಗೊತ್ತಾದೀತು... ಚಂದ್ರ
ಶೇಖರನಂತಹ ಬಾಳ್ವೆ ನಡೆಸಿದವರು ಕೊನೆಗಾಣುವ ರೀತಿಯೇ
ಅಂಥದು ಕಡಿಮೆ. ತನ್ನ ಬಾಳ್ವೆ ಯಾಕೆ ಹಾಗಾಯಿತೆಂದು ಚೆನ್ನಾಗಿ
ತಿಳಿದ ಚಂದ್ರಶೇಖರ, ತನ್ನ ಹಾಗೆಯೇ ಇನ್ನೊಂದು ಜೀವ ಈ
ಸಮಾಜದಲ್ಲಿ ಬೇಯದಿರಲೆಂದು ಹಾರೈಸುತ್ತಾನೆ. ಆತನನ್ನು ಕೆಲವರು