ಪುಟ:Vimoochane.pdf/೧೫೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ನನಗೆ ಸುಲಭವಾಗಿ ನಿದ್ದೆ ಬರುತ್ತಿತ್ತು. ಮುಂದಿನ ಕೆಲಸದ ಯೋಚನೆ ಯಿಂದ ನಾನು ನಿದ್ದೆಯ ಹೊತ್ತಿನಲ್ಲಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಯಾವ ಗಂಡಾಂತರವೇ ಕಾದು ನಿಂತಿರಲಿ, ತೋಳನ್ನು ಮಡಚಿ ದಿಂಬಾಗಿ ಮಾಡಿ, ಅದರ ಮೇಲೆ ತಲೆ ಇರಿಸಿದೊಡನೆ, ನನಗೆ ನಿದ್ದೆ ಬರುತ್ತಿತ್ತು. ಆದರೆ ಸಾಮಾನ್ಯವಾಗಿ ಸಣ್ಣ ಸಪ್ಪಳವಾದರೂ ಸಾಕು, ಒಮ್ಮೆಲೆ ಎಚ್ಚರವಾಗುತ್ತಿತ್ತು.

ಆ ರಾತ್ರೆ ಮಾತ್ರ ನನಗೆ ಎಚ್ಚರವಾಗಲಿಲ್ಲ. ಸಣ್ಣ ಸಪ್ಪಳ ವಾಗಿತ್ತು.ಆದರೆ ನನಗೆ ಎಚ್ಚರವಾಗಿರಲಿಲ್ಲ

ಬೆಳಗು ಮುಂಜಾನೆ ದೂರದಲ್ಲಿ ಉದಿಸುತ್ತಿದ್ದ ಸುರ್ಯನ ಮೊದಲ ಕಿರಣಗಳನ್ನು ಎದಿರ್ಗೊಳ್ಳಲು ನಾನು ಕಣ್ಣು ತೆರೆದೆ. ಹಿಂದಿನ ರಾತ್ರೆಯ ಘಟನೆಗಳು ನೆನಪಿಗೆ ಬಂದವು. ದಿಗ್ಗನೆ ಎದ್ದು ಕುಳಿತು, ಮನೆಯ ಒಳ ಬಾಗಲಿನತ್ತ ದೃಷ್ಟಿ ಹಾಯಿಸಿದೆ. ಅದು ತೆರೆದಿತ್ತು. ಒಳಿಗೆ ಇಣಿಕಿ ನೋಡಿದೆ. ಆಕೆ ಹೊರಟುಹೋಗಿದ್ದಳು.

ಆಮೇಲೆ ಸ್ವಲ್ಪ ಹೊತ್ತಿನಲ್ಲೆ ಪೋಲೀಸರು ಬಂದರು. ಮನೆಯ ಕೊಠಡಿಗಳನ್ನೂ ಹಿತ್ತಿಲನ್ನೂ ಶೋಧಿಸಿದರು. ಒಳಗೆ ಪಾತ್ರೆಗಳನ್ನು ಚೆಂಡಾಡಿದರು. ಇಬ್ಬರು ನನ್ನ ಎಡ ಬಲಗಳನ್ನು ಹಿಡಿದು ನಿಲ್ಲಿಸಿ, "ಬೊಗಳು ಎಲ್ಲಿದಾಳೆ?" ಎಂದರು.ಅವರೊಡನೆ ಮಾತನಾಡುವುದು, ನನ್ನ ಗೌರವಕ್ಕೆ ಕುಂದು ಎಂಬುದನ್ನು ನಾನು ಚೆನ್ನಾಗಿ ತಿಳಿದು ಮೌನ ವಾಗಿದ್ದೆ.ನನ್ನನ್ನು ಆ ದಫೇದಾರ ದುರದುರನೆ ನೋಡಿದ. ನನ್ನ ಕೈಗಳಿಗೆ ಬೇಡಿತೊಡಿಸಲು ಆಙ್ಞೆ ಯನ್ನಿತ್ತ.

ಆ ಪೋಲೀಸರ ಹಿಂಬದಿಯಲ್ಲೆ ಒಂದು ಮುಖ ಕಾಣಿಸಿತು. ಯಾರಿರಬಹುದೆಂದು ಊಹಿಸುವುದು ಕಷ್ಥವಾಗಲಿಲ್ಲ.ಆ ಬಡ ಹೆಣ್ಣನ್ನು ಸಾಯಬಡೆಯಲು ಮುಂದೆ ಬಂದಿದ್ದ ಧೀರರಲ್ಲಿ ಆತನೊಬ್ಬ. ಒಬ್ಬ ಪೋಲೀಸನೊಡನೆ ಆತ ಒಂದೇ ಸಮನೆ ಪಿಸುಮಾತನಾಡುತ್ತಿದ್ದ. ಎಡಗೈಗೂ ಬಲಗೈಗೂ ಬೇರೆ ಬೇರೆಯಾಗಿ ಬೇಡಿಹಾಕಿ ಇಬ್ಬರು ಪ್ರತ್ಯ ಪ್ರತ್ಯೇಕವಾಗಿ ಅದನ್ನು ಹಿಡಿದಿದ್ದರು.ನನ್ನನ್ನು ಹೊರಕ್ಕೆ ಒಯ್ಯಲು ಆಙ್ಞೆಯಾಯಿತು.