ಮಾತನಾಡಿದುದನ್ನು ಕಂಡ ಮೇಲೆ, ನನ್ನನ್ನು ಅವಮಾನಿಸಲಿಲ್ಲ. ಇನ್ನು ಮುಂದೆ ನಾನು ಗುಮಾನಿ ವ್ಯಕ್ತಿ. ಆದರೆ.ಸಾಮಾನ್ಯ ಪೋಲೀ ಸರು ನನಗೆ ಗೌರವ ನೀಡುವರು. ಒಂದು ಕಟ್ಟು ಬೀಡಿಗಾಗಿ ನಾನು ಅವರಿಗೆ ಆರೆಂಟು ಕಾಸು ಕೊಟ್ಟರೂ ಕೊಡಬಹುದು. ಇನ್ನು ಮುಂದೆ ಹೊರಗಿಳಿದಾಗ ಬೀದಿಯಲ್ಲಿ ಅವರು ನನ್ನನ್ನು ಸೆಲ್ಯೂಟು ಹೊಡೆದು ಮಾತನಾಡಿಸುವರು. ಈ ರಾಜ್ಯರಚನೆಯಲ್ಲಿ ಅವರ ಶಾಖೆಗೂ ನನಗೂ ನೆಂಟಸ್ಥನವಿನ್ನು........
ಹೊತ್ತು ಕಳೆಯಿತು. ಅಧಿಕಾರಿ ನನಗಾಗಿ ಇಡ್ಲಿ ಕಾಫಿ ತರಿಸಿದ.
"ಸಿಗರೇಟ್ ಬೇಕೆ ಚಂದ್ರಶೇರ್?"
"ಕ್ಷಮಿಸಿ. ಸೇದೋ ಅಭ್ಯಾಸವಿಲ್ಲ."
"ಏಚಿತ್ರ ! ನಿಜವಾಗ್ಲೂ ವಿಚಿತ್ರ!"
ಅವನ ತುಟಿಗಳ ಕೊನೆಯಲ್ಲಿ ಅಪನಂಬುಗೆಯ ನಗುವಿತ್ತು. ನಾನು ಹೇಳಿದುದೊಂದನ್ನೂ ಎಂದಿಗೂ ನಂಬಲಾರದ ವ್ಯಕ್ತಿಯಾತ. ನಾನು ಆ ನಗುವನ್ನು ಲೆಕ್ಕಿಸಲಿಲ್ಲ.
ಕಾವಲಿನ ಪೋಲೀಸರನ್ನು ಹೊರಗೆ ಕಳುಹಿಸಿ ಆತ್ಮೀಯತೆಯ ನಟನೆ ಮಾಡುತ್ತಾ ಅಧಿಕಾರಿ ಮಾತನಾಡಿದ:
"ನೋಡಿ ಚಂದ್ರಶೇಖರ್, ನಿಮ್ಮನ್ನು ಆ ದಿನ ನೋಡ್ದಾಗ ಲಿಂದ ಮರೆಯೋಕೇ ಆಗಿಲ್ಲ."
ನಾನು ಸ್ವರಕ್ಷಣೆಯ ಮುಖವಾಡ ಧರಿಸಿ ಆ ಮಾತುಗಳನ್ನು ತೂಗಿ ನೋಡಿದೆ.
"ಚಂದ್ರಶೇಖರ್, ಈ ಹಾದಿ ಬಿಟ್ಟು ನೀವು ಎಲ್ಲರ ಹಾಗೆ ಯಾಕಿರಬಾರ್ದು?"
"ಯಾವ ಹಾದಿ ಸಾರ್?"
"ನೋಡಿ, ಅಂಥ ಪ್ರಶ್ನೆ ಕೇಳ್ಬಾರ್ದು. ಅದೆಲ್ಲಾ ಬಿಚ್ಚಿ ಹೇಳ್ಬೇ ಕಾದ ವಿಷಯವೆ?"
ಆ ಅಧಿಕಾರಿಯ ಕುಡಿ ಮೀಸೆ ಕುಣಿಯುತ್ತಿತ್ತು. ಕತ್ತಿನ