ಪುಟ:Vimoochane.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಲ್ಲೊಂದು ಕಪ್ಪಗಿನ ಮಚ್ಚೆಯಿತ್ತು. ಹಿಂದಕ್ಕೆ ಬಾಚಿದ್ದ ಕ್ರಾಪು ಶಿರಸ್ತ್ರಾಣದ ಒತ್ತಡಕ್ಕೆ ಸಿಲುಕಿ ಧೋಬಿ ಇಸ್ತ್ರಿ ಒರೆಸಿದಂತೆ, ತಲೆ ಅಂಟಿಕುಳಿತಿತ್ತು.

ಒಮ್ಮೆಲೆ ನಾನೊಂದು ಪ್ರಶ್ನೆ ಕೇಳಿದೆ:

“ಸಾರ್ ನಿಮಗೆ ಮಕ್ಕಳಿದಾರ?”

ಭಾವನಾರಹಿತವಾಗಿದ್ದ ಆತನ ಗಾಜಿನಂತಹ ಕಣ್ಣುಗಳು ಕ್ಷಣ ಕಾಲ ಚಲಿಸದೆ ನಿಂತುವು. ಎರಡು ಕ್ಷಣ ಸ್ಟೇಷನ್ನಿನ ಆ ಹಳೆಯ ಗಡಿ ಯಾರವೊಂದೇ ಟಿಕಾ ಟಕ್ ಎಂದಿತು.

"ಇದಾರೆ ಚಂದ್ರಶೇಖರ್. ದೊಡ್ಡ ಹುಡುಗನಿಗೆ ನಿಮ್ಮ ವಯಸ್ಸು, ಈ ವರ್ಷ ಬಿ. ಎ. ಪರೀಕ್ಷೆ ಕಟ್ಟಿದ್ದಾನೆ.”

"ಸಂತೋಷ ಸಾರ್. ದೊಡ್ಡ ಹುಡುಗನಿಗೆ ಮುಂದೆ ಏನು ಓದಿಸ್ಬೇಕೂಂತ ಇದೀರಿ ಸಾರ್? ವೈಯಕ್ತಿಕ, ಪ್ರಶ್ನೆ ಕೇಳ್ ಬಾರ್ದು ಆದರೂ..."

"ವಕೀಲಿ ಓದಿಸ್ತೀನಿ. ಆತ ಪೋಲೀಸ್ ಪ್ರಾಸಿಕ್ಯೂಟರ್ ಆಗ ಬೇಕೂಂತ ನನ್ನ ಆಸೆ.”

ನಾನು ಮುಗುಳು ನಕ್ಕೆ, ಹಾಗೆ ನಕ್ಕು ತಲೆಬಾಗಿ ನೆಲವನ್ನೇ ನೋಡಿದೆ. ನನ್ನನ್ನು ತಿಳಿಯಲಾರದೆ ಹೋದ ಆ ಅಧಿಕಾರಿ ಮತ್ತೆ ಮಾತನಾಡಿದ :

"ಅದು ಬೇರೆವಿಷಯ. ಎಲ್ಲರಿಗೂ ಹುಡುಗರ್ನ ಜಾಸ್ತಿ ಓದಿ ಸೋಕೆ ಆಗಲ್ಲ. ಆದರೆ ಇಷ್ಟು ವಿದ್ಯಾಭಾಸ ಇರೋ ನಿಮ್ಮಂಥವರು ಸಂಭಾವಿತರಾಗಿ ಬದುಕೋದು ಸಾಧ್ಯ.”

ನನಗೆ ಸಂಭಾವಿತತನದ ದೀಕ್ಷೆಕೊಡಲು ಆತ ಯತ್ನಿಸುತ್ತಿದ್ದ ನೇನೋ !

"ಸಾರ್, ನನ್ನ ಬಗ್ಗೆ ನಿಮ್ಮ ಅಭಿಪ್ರಾಯವೇನು?”

"ಮತ್ತೆ ಅದೇ ಪ್ರಶ್ನೆ ಹಾಗೆ ಕೇಳಬಾರು ಚಂದ್ರಶೇಖರ್, ಅವೆಲ್ಲಾ ಕೇಳಿ ತಿಳಿದುಕೊಳ್ಳೊ ವಿಷಯಗಳೇ ಅಲ್ಲ."

"ಥಾಂಕ್ಸ್ ನಿಮ್ಮ ಹಿತ ವಚನಗಳಿಗಾಗಿ ಕೃತಜ್ಞ.”