ವಿಷಯಕ್ಕೆ ಹೋಗು

ಪುಟ:Vimoochane.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಹೇಡಿಯೆನ್ನಬಹುದು; ದುರ್ಬಲನೆನ್ನಬಹುದು. ನಾನು ಮಾತ್ರ
ಅವನ ಬಗ್ಗೆ ಕನಿಕರ ಪಡಲು ಬಯಸುವೆ. ಎಷ್ಟೋ ಓದುಗರಿಗೂ ಹಾಗೆಯೇ ಅನಿಸುವುದರಲ್ಲಿ ಸಂಶಯವಿಲ್ಲ."
ಅವರ ತುಟಿಗಳಲ್ಲೆ ಅಡಗಿರಲಾರದೆ ನಗು ಹೊರಸೂಸುತಿತ್ತು.
"ಯಾಕೆ ನಗುತ್ತೀರಿ ?"
"ಕತೆಗಾರರೂ ವಿಮರ್ಶಕರೂ ಅದ ನಿಮ್ಮನ್ನಿನ್ನು ಕಾದಂಬರಿ
ಕಾರನೆಂದೂ ಕರೆಯುತ್ತಾರೆ."
"ನಾಟಕವನ್ನೂ ಬರೆಯಬೇಕೆಂದಿದ್ದೇನೆ!"
"ಹಾಗಲ್ಲ; ವಿಮರ್ಶೆ ಮತ್ತು ಸೃಷ್ಟನೆಯ ಸಾಹಿತ್ಯ, ಎರಡನ್ನು
ಒಬ್ಬನೇ ಮಾಡುವುದು ಸಾಧ್ಯ ಅಲ್ಲವೆ?"
"ಯಾಕಾಗದು? ಎರಡನ್ನೂ ಚೆನ್ನಾಗಿಯೇ ಮಾಡುವ ದೇಶ
ವಿದೇಶಗಳ ಸಾಹಿತಿಗಳ ನಾಮಾವಳಿಯನ್ನು ಜಸಿಸಿ ನಿಮ್ಮನ್ನು
ಬೆರಗುಗೊಳಿಸಲೇನು ?"
"ದಮ್ಮಯ್ಯ, ಅಷ್ಟು ಮಾಡಬೇಡಿ."
"ತಮಾಷೆಗೆ ಹೇಳಿದೆ. ವಿಮರ್ಶೆಯ ಪ್ರಕಾರ ಕನ್ನಡದಲ್ಲಿ
ಬೆಳೆದೇ ಇಲ್ಲ. ವಿಮರ್ಶೆ ಪರಸ್ಪರ ಪ್ರಶಂಸೆಯಾಗುವುದೂ ಉಂಟು;
ದ್ವೇಷ ಸಾಧನೆಯ ರೀತಿಯಾಗುವುದೂ ಉಂಟು. ಆಧುನಿಕ ಕನ್ನಡ
ಸಾಹಿತ್ಯವೀಗ ಸಂಧಿಕಾಲದಲ್ಲಿದೆ. ನಾನಾ ಪ್ರವೃತಿಗಳು ತಲೆ
ಎತ್ತುತ್ತಿವೆ. ಜನ ಸಾಮುದಾಯದ ಅಭ್ಯುದಯ ಸಾಧ್ಯವಾಗುವಂತಹ
ಹಾದಿಯಲ್ಲಿ ನಮ್ಮ ಸಾಹಿತ್ಯ ಮುನ್ನಡೆಯುವಂತೆ ನಾವೆಲ್ಲ ಮಾಡಬೇಕು.
ವಜ್ರ ಕಠೋರತೆಯ ಹಾಗು ಕುಸುಮ ಕೋಮಲತೆಯ ಯೋಗ್ಯ
ಸಮ್ಮಿಶ್ರಣವನ್ನು ಸಮರ್ಥನಾದ ಸಹೃದಯಿ ವಿಮರ್ಶಕ ಸಾಧಿಸಬಲ್ಲ.
...ನಮ್ಮ ಸಾಹಿತ್ಯ ಅಭಿವೃದ್ಧಿ ಹೊಂದಬೇಕಾದರೆ ಎಲ್ಲ ಓದು
ಗರಲ್ಲೂ ವಿಮರ್ಶನ ಬುದ್ಧಿ ಜಾಗೃತವಾಗುವುಧು ಅಗತ್ಯ. ಯಾವನೇ
ಬರೆಹಗಾರ ವಿಮರ್ಶಕರನ್ನು ನಿಂದಿಸುವುದರಲ್ಲಿ ಅರ್ಥವಿಲ್ಲ ....
ನನ್ನ ಈ ಕಾದಂಬರಿಯ ದೃಷ್ಟಾಂತವನ್ನೆ ತೆಗೆದುಕೊಳ್ಳಿ. 'ವಿಮೋಚನೆ'
ಯನ್ನೆತ್ತಿಕೊಂಡು ಕನ್ನಡ ವಿಮರ್ಶಕರೆಲ್ಲ ನಿರ್ದಾಕ್ಷಿಣ್ಯವಾದ ನಿಷ್ಪಕ್ಷ.