ಪುಟ:Vimoochane.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಾಗೆ ಮಾಡಿದ್ದರೆ, ನಾನು ಮಹಾ ಮೂರ್ಖನಾಗುತ್ತಿದ್ದೆ. ನನ್ನನ್ನು ನೋಡಿ, ಸದಾ ಕಾಲವೂ ಗೇಲಿ ಮಾಡುತ್ತಿದ್ದ ಅಮೀರನನ್ನೆದುರು ಬಂದ. ನನ್ನದು ಹೆಣ್ಣು ಕರುಳಂದು ಆತ ಹೇಳುತ್ತಿದ್ದ. ಅದು ಅರ್ಥವಿಲ್ಲದ ಮಾತು. ಕರುಳು ಹಣ್ಣಿನದಿರಲಿ ಗಂಡಿನದಿರಲಿ ಎಲ್ಲರದೂ ಒಂದೇ ತರಹೆ. ಆದರೆ ದುಡಿಮೆಗೆ ಅನುಸಾರವಾಗಿ ಆ ಕರುಳು ಕಲ್ಲಾಗುತ್ತದೆ.....ಆದರು ಅಮೀರನನ್ನು ನೆನೆಸಿಕೊಂಡು ನನ್ನ ಮೃದುತನದ ಬಗ್ಗೆ ನಾನು ನಕ್ಕೆ. ಆ ಔಷಧಿ ಚೀಟಿಯನ್ನು ಎರಡು ಚೂರಾಗಿ ಹರೆದು, ಗಾಳಿಗೆ ತೊರಿದೆ. ಪಾಕೀಟನ್ನು ಮೋರಿಗೆ ಎ ಸೆದೆ...........

ಆ ಮೇಲೆ ಮತ್ತೊಮ್ಮೆ ಏನನ್ನಾದರೂ ಕುಡಿಯಬೇಕೆನಿಸಿತು ಆ ಹಾದಿಯಲ್ಲಿ ಒಂದೇ ಒಂದು ತೆರೆದಿದ್ದ ಇಸ್ಲಾಮಿಯಾ ಹೋಟೆಲಿತ್ತು. ಒಲಹೋಗಿ ಕುಳಿತು, " ಚಾ ಲಾವ್," ಎಂದೆ. ಆ ಹುಡುಗ ನನ್ನನ್ನೆ ನೋಡಿದ. ನಾನು ಹಿಂದುವೆ? ಮುಸಲ್ಮಾನನೆ? ಮತ್ತೆ ಸಿಗರೇಟು ಉರಿಸಿ ಮುಖದ ಎದುರು ಹೊಗೆಯ ತೆರೆಯೆಬ್ಬಿಸುತ್ತಾ, ನನ್ನನ್ನೆ ದಿಟ್ಟ ಸುತ್ತಿದ್ದ ಆ ಹುಡುಗನನ್ನು ನೋಡಿದೆ. ನನ್ನ ಕಿವಿಗಳಲ್ಲಿ ತೂತುಗಳಿರಲಿಲ್ಲ. ನನ್ನ ನಡಿಗೆಯಲ್ಲಿ ಹಿಂದುತನ ವಿರಲಿಲ್ಲ. ನಾನು ಮುಸಲ್ಮಾನ ನಿದ್ದರೂ ಇರಬಹುದು......... ಆ ಹುಡುಗ ಅಂತಹ ಸಂದೇಹದಲ್ಲಿ ತೇಲಿ ಮುಳುಗುತಿದ್ದ. ಅವನನ್ನು ಗೊಂದಲದಲ್ಲಿ ಕೆಡವಿದ ನಾನು ಸಮಾಧಾನದಲ್ಲಿದ್ದೆ. ಹೌದು ಯಾಕಾಗಬರದು? ನಾನು ಯಾವ ಜಾತಿಯವನೂ ಆಗಬಹುದು. ಮುಖ್ಯ ವಿಷಯವೆಂದರೆ ನನ್ನನ್ನಿವರು, ಮನುಷ್ಯಜಾತಿಯವನೆಂದು ಒಪ್ಪಿಕೊಂಡಿದ್ದಾರೆ........ ಚಹದ ಲೋಟ ವನ್ನು ಎರಡು ಗುಟುಕಿಗೆ ಬರಿದು ಮಾಡಿದೆ....... ಇದೇ ಆಶ್ಚರ್ಯ! ನಾನು ಮನುಷ್ಯ ಜಾತಿಯವನೆಂದು ಇವರು ಒಪ್ಪಿಕೊಂಡಿದ್ದಾರೆ. ಸುತ್ತಲೂ ಕಾಣುವವರೆಲ್ಲಾ, ಮನುಷ್ಯರೆಂದು ಒಪ್ಪಿಕೊಳ್ಳಲು, ನಾನು ಸಿದ್ಧನಿರಲಿಲ್ಲ ಅದು ನನಗೆ ಅವಮಾನದ ಮಾತಾಗು ತಿತ್ತು. ಈ ಸಮಾಜದಲ್ಲಿ, ಮನುಷ್ಯರು ಹಲವರಿದ್ದರು ನಿಜ. ಆದರೆ ಎಲ್ಲರೂ ಮನುಷ್ಯರಾಗಿರಲಿಲ್ಲ.