ಪುಟ:Vimoochane.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಡಮಾಡುವುದರಲ್ಲಿ ಅರ್ಥವಿರಲಿಲ್ಲ. ಉಪವಾಸ ಸಾಯು ವುದರಲ್ಲಂತೂ ಯಾವ ಅರ್ಥವೂ ಇರಲಿಲ್ಲ. ಕೂಲಿಯಾಗಿದ್ದು ಬಾಳ ಬೇಕಿತ್ತೆಂದು ನೀತಿ ಬೋಧಕರು ಹೇಳುವುದು ಸಾಧ್ಯ. ಆದರೆ ಕೂಲಿ ಯಾಗಿ ನನ್ನ ತಂದೆ, ಕ್ಷಯರೋಗ ಸಂಪಾದಿಸಿದ.....ಆ ಸಂಪಾದನೆ ನನಗೆ ಇಷ್ಟವಿರಲಿಲ್ಲ. ಇಲ್ಲ, ಯಾವ ತೊಂದರೆಯೂ ಇಲ್ಲದೆ ನಾನು ಬಾಳಬೆಕು........

ನನ್ನ ಫೈಲನ್ನು ಸಿದ್ಧಗೊಳಿಸಿದ ಅಧಿಕಾರಿಯ ಕ್ಷೇತ್ರದಿಂದ ದೂರವಾಗಿ, ನಗರದ ಇನ್ನೊಂದು ಭಾಗದಲ್ಲಿ ಆ ಸಂಜೆ ಬೀಡು ಬಿಟ್ಟೆ. ಆ ಥಿಯೇಟರಿನ ಹೊರ ಭಾಗದಲ್ಲಿ, ಎಲ್ಲರೂ ನನಗೆ ಕಾಣುವ ಒಂದು ಜಾಗದಲ್ಲಿ ನಿಂತೆ. ಆರೂವರೆಗೆ ಆ ಇಬ್ಬರು ಜಟಕಾದಲ್ಲಿ ಬಂದಿಳಿ ದರು- ಹುಡುಗ ಮತ್ತು ಯುವತಿ. ಅಕ್ಕ ತಮ್ಮ ಇದ್ದ ಹಾಗಿದ್ದರು. ಮೂರೆಳೆಯ ಬಂಗಾರದ ಸರ ಬಲು ಮಾಟವಾಗಿ ಅವಳ ಕತ್ತಿನ ಸುತ್ತಲೂ ತೂಗಾಡುತ್ತಿತ್ತು. ಆ ಸರಕ್ಕಿಂತಲೂ ಹೆಚ್ಚಾಗಿ, ತನ್ನ ವಕ್ಷ ಸ್ಥಳದ ಪ್ರದರ್ಶನವೇ ಅವಳಿಗೆ ಮುಖ್ಯವಾಗಿತ್ತು. ಬಾರಿ ಬಾರಿಗೂ ಜಾರುತ್ತಿದ್ದ ಬೆಲೆ ಬಾಳುವ ರೇಶ್ಮೆ ಸೀರೆ. ಆಗರ್ಭ ಶ್ರೀಮಂತಿಕೆಯ ಸರಳತನವನ್ನು ತೋರುವ ತೆಳು ಚಪ್ಪಲಿ. ದೇಹ, ಎತ್ತರಕ್ಕೆ ಬೆಳೆ ಯುವುದನ್ನು ನಿಲ್ಲಿಸಿ ಸುತ್ತಲೂ ಜಾಗ ಆಕ್ರಮಿಸಿಕೊಳ್ಳತೊಡಗಿತ್ತು. ಊದಿಕೊಳ್ಳುತ್ತಿದ್ದ ಮುಖದಿಂದ ಕಾಡಿಗೆ ತುಂಬಿದ ಎರಡು ಕಣ್ಣುಗಳು ಬಲು ಆತುರದಿಂದ ಇದ್ದವರನ್ನೆಲ್ಲಾ ನೋಡುತ್ತಿದ್ದುವು. ಅಂಥ ವರ್ಗದ ಆ ಪಾತ್ರ ನನಗೆ ಅಪರಿಚಿತವಾಗಿರಲಿಲ್ಲ. ನಿಂತಲ್ಲಿಂದ ಮುಂದೆ ಬಂದು ಅವರ ಹಿಂಭಾಗದಲ್ಲೆ ನಡೆದು, ನಾನೂ ಅದೇ ಟಕೆಟು ಪಡೆದೆ. ಮೊದಲ ತರಗತಿಯ ಒಂದೊವರೆ ರೂಪಾಯಿ ಟಿಕೆಟು.

ತನ್ನ ಹಿಂದೆಯೇ ನಿಂತಿದ್ದ ನನ್ನನ್ನು ಆಕೆ ಅರೆ ಕ್ಷಣ ನೋಡಿ ದಳು. ಆ ತುಟಿಗಳು ಏನನ್ನೋ ಮಾತನಾಡಲು ಬಯಸುತ್ತಿದ್ದವು. ನಿನ್ನ ಸಂಕಟವನ್ನು ನಾನು ಬಲ್ಲೆ ಎನ್ನುವ ಹಾಗೆ, ಹೌದೋ ಅಲ್ಲವೋ ಅನ್ನುವಷ್ಟು ಸೂಕ್ಷ್ಮವಾಗಿ, ನಾನು ಮುಗುಳು ನಕ್ಕೆ.

ಅವರಿಬ್ಬರೂ ತಮ್ಮಸ್ಥಾನಗಳಲ್ಲಿ ಕುಳಿತರು. ಅವರ ಹಿಂದಿ