ಪುಟ:Vimoochane.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಂದು ನನ್ನನ್ನು ಗೌರವಿಸುತ್ತಿದ್ದ. ಅವನ ಪಾಲಿಗೆ ನಾನೊಬ್ಬ ಅಮೀರನಾದ ವ್ಯಕ್ತಿ. ಕುಡಿದು, ಗಂಭೀರನಾಗಿದ್ದವನ ಸೋಗು ಹಾಕಿ, ನಾನು ನಮ್ಮ ಹಿಂದೆ ಹಾದು ಹೋದ ದೀಪದ ಕಂಬ ಗಳನ್ನು ಎಣಿಸಿದೆ-ಜನರನ್ನು ಎಣಿಸಿದೆ.

ಮನೆ ಸೇರಿದ ಮೇಲೆ, ಮಲಗುವ ಯೋಚನೆ. ನಾನು ಹಿತ್ತಿಲ

ಬಾಗಿಲು ತೆರೆದು ಆ ಕೊಟ್ಟಿಗೆಯ ಮುಖ ನೋಡಲಿಲ್ಲ. ಹಾಸಿ ಕೊಳ್ಳಲು ನನ್ನಲ್ಲಿ ಬಟ್ಟೆ ಚೂರಿರಲಿಲ್ಲ, ಹೊದ್ದುಕೊಳ್ಳಲೂ ಇರಲಿಲ್ಲ. ನಾಳೆಯೇ ಅಷ್ಟನ್ನೂ ಕೊಂಡು ತರಬೇಕು. ಹೊಸ ದೀಪ, ಎಣ್ಣೆ, ಕೊಡ ಹಗ್ಗ, ಬಟ್ಟೆ ಬರೆ—ಇವೆಲ್ಲವನ್ನೂ ಭದ್ರವಾಗಿಡಲು ಬೀಗ, ಇವಿಷ್ಟನ್ನೂ ಹೊಸದಾಗಿ ತರಬೇಕು. ಅದಕ್ಕೆ ಹಣ?...ತಡ ಮಾಡದೆ ಆ ಸರವನ್ನು ನಾನು ಮಾರಬೇಕು.

......ಆ ಮಾರಾಟ ಸುಲಭವಾಗಿರಲಿಲ್ಲ, ನನ್ನ ಪಾಲಿಗೆ

ಅಂತಹ ಮಾರಾಟ ಹೊಸದು. ಬೊಂಬಾಯಲ್ಲಿ ಆ ರೀತಿಯ ಕೆಲಸ ಕಾರ್ಯಗಳನ್ನು ಅಮಿಾರ ವಹಿಸಿಕೊಳ್ಳುತ್ತಿದ್ದ, ಅದಕ್ಕೆ ಬಲು ಭದ್ರ ವಾದ ವ್ಯವಸ್ಥೆಯಿತ್ತು ಎಂತಹ ವಸ್ತುವೂ ಒಂದೆರಡು ಗಂಟೆಗಳ ಹೊತ್ತಿನೊಳಗಾಗಿ ಹಣವಾಗಿ ಮಾರ್ಪಡುತ್ತಿತು. ತಡವಾಗುವ ಲಕ್ಷಣವಿದ್ದರೆ, ಸ್ವಲ್ಪ ಹಣ ಮುಂಗಡವಾಗಿ ದೊರೆಯುತ್ತಿತ್ತು, ನಮ್ಮ ಊರು ಬೊಂಬಾಯಿಯಲ್ಲ, ಕಳ್ಳತನ ಇಲ್ಲಿ ಯಾವತ್ತೂ ಇರಲಿಲ್ಲ ವೆಂದಲ್ಲ. ಆದರೆ ಇಲ್ಲಿನ ಕಳ್ಳರಿಗೆ, ಆಧುನಿಕ ವ್ಯವಹಾರ ಚಾತುರ್ಯ ಗಳು ತಿಳಿದಿರಲಿಲ್ಲ.

ಹೀಗೆ ಬಲು ತೊಡಕಿನ ಸಮಸ್ಯೆಯನ್ನು ಮರುದಿನ ನಾನು.

ಎದುರಿಸಬೇಕಾಯಿತು.ಅಂಗಡಿ ಬೀದಿಗಳಲ್ಲಿ, ಎರಡು ಸಾರೆ ಬಲು ನಿಧಾನವಾಗಿ ನಡೆದು ಹೋದೆ. ಸರಾಫ ಕಟ್ಟೆಯ ಅಂಗಡಿಗಳಿಗೆ ಎರಡು ಸುತ್ತು ಬಂದೆ. ಹಣ ಸಾಲ ಕೊಡುವ ಮಾರವಾಡಿಗಳನ್ನೂ ದೂರದಿಂದ ಪರೀಕ್ಷಿಸಿದೆ. ಯಾವ ಆಧಾರದ ಬೆಂಬಲವೂ ಇಲ್ಲದೆ, ನಾನು ಹೆಜ್ಜೆಯನ್ನು ಮುಂದಿಡಬೇಕಾಗಿತ್ತು. ಸಾಮಾನ್ಯವಾಗಿ ಇಂಥ ವರಲ್ಲಿ ನಾಯವಾದಿಗಳು ಯಾರೂ ಇಲ್ಲವೆಂಬುದನ್ನು ನಾನು ತಿಳಿದಿದ್ದೆ.