ಪುಟ:Vimoochane.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ನಿಮ್ಮ ಹೆಸರು ?"

ಮತೊಮ್ಮ ನನ್ನ ನಾಲಿಗೆ ಸರಳವಾಗಿ ಮಗುಚಿತು.

"ರಾಘವ".

ಅತ ಮಗುಳ್ನಕ್ಕ ಅದು ಸುಳ್ಳಿರಬಹುದೆ೦ದು ಅವನು ತಿಳಿದು

ಕೊಂಡನೇನೋ.

ಇನ್ನೂರ ಐವತ್ತು ರೂಪಾಯಿಗಳ ಒಡಯನಾಗಿ ನಾನು

ಬೀದಿಗಳಲ್ಲಿ ಸುತ್ತಾಡಿದೆ. ಮನೆ ತುಂಬಿಸುವ ಸದ್ಗೃಹಸ್ಥನಾಗಿ, ನಾನು ಸಾಮಗ್ರಿಗಳನ್ನು ಕೊಂಡುಕೊಂಡೆ. ನನಗೆ ನೂರು ರೂಪಾ ಯಿಯ ನೋಟಿಗೆ ಚಿಲ್ಲರೆ ಕೊಡಲು ಯಾವ ಅಂಗಡಿಯವರೂ ಹಿಂಜರಿ ಯಲಿಲ್ಲ. ನನ್ನ ನಡೆ ನುಡಿ, ನನ್ನ ದೊಡ್ಡಸ್ತಿಕೆಗೆ ಸಾಕ್ಷಿಗಳಾಗಿದ್ದವು. ಹೀಗೆ ಜೀವನದ ಅಧ್ಯಾಯದೊಂದು ಹಾಳೆಮುಗುಚಿಕೊಂಡಿತು.

ಎಷ್ಟೋ ದಿನಗಳ ಮೇಲೆ, ಮನಸ್ಸಿನ ಚಿಂತೆ ನನ್ನನ್ನು ಕೊರೆ

ದುದುಂಟು. ಅದು ಕ್ಷಣಿಕ ಮಾನಸಿಕ ದೌರ್ಬಲ್ಯಕ್ಕೆ ತುತ್ತಾದಾಗ, ಬೊಂಬಾಯಿಯ ಬೀದಿಯ ಬದಿಗಳಲ್ಲಿ ಬಾಯ್ತೆರೆದು ಮಲಗಿದ್ದಾಗ ಹಸಿವು ಎಷ್ಟು ಕ್ರೊರವೆಂಬುದನ್ನು ನಾನು ಪುರ್ಣವಾಗಿ ಮನಗಂಡಿದ್ದೆ. ಬಡತನವನ್ನು ಎಲ್ಲರೂ ತುಚೀಕರಿಸುತ್ತಿದ್ದರು. ಬಡವ, ಮಾನವಂತ ನಾಗಿ ಬಾಳ್ವೆ ನಡೆಸುವುದು ಬರಿಯ ಭ್ರಮೆಯಾಗಿತ್ತು. ಹಸಿವೆಯಿಂದ ತೊಳಲಾಡಲು ನಾನೆಂದೂ ಇಚ್ಛಿಸಲಿಲ್ಲ. ನಾನು ದ್ವೇಷಿಸುತ್ತಿದ್ದ ಬಡತನದಲ್ಲಿ ನರಳಲು ಎಂದೂ ಆಪೇಕ್ಷಿಸಲಿಲ್ಲ.

ಕಾವೇರಮ್ಮನ ಚೀಟಿ. ಆ ಚಿಲ್ಲರೆ ರೂಪಾಯಿ

ಆಣೆಗಳು..... ಆ ದಿನ ನನ್ನ ಮನಸ್ಸಿಗೆ ನೆಮ್ಮದಿಯೇ ಇರಲಿಲ್ಲ. ಆದರೆ, ಮಾನವತೆಯ ಗಡಿ ದಾಟಿ ಮೃಗವಾಗಿ ಮಾರ್ಪಡುತ್ತಿದ್ದ ಶ್ರೀಮಂತ ಯುವತಿಯೊಬ್ಬಳಿಂದ ಆ ಹಾರವನ್ನು ನಾನು ಕೈವಶಪಡಿಸಿಕೊಂಡಿದ್ದೆ. ಅದು ಸರಿಯೆ? ತಪ್ಪೆ? ಆ ಹಾರ ಅವಳಿಗೆ ಹೇಗೆ ದೊರಕಿತು? ಆಕೆಯ ಅಪ್ಪ ಬೇರೆ ಯಾರನ್ನೋ ನೂರಾರು ಜನರನ್ನು ಸುಲಿದುದರ ಫಲವೇ ಅಲ್ಲವೆ? ಅಂಥ ಸುಲಿಗೆಯ ವಸ್ತುವನ್ನು ನಾನು ಎತ್ತಿ ಹಾಕಿದ್ದ್ದು ತಪ್ಪೆ?