ಪುಟ:Vimoochane.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನನಗೂ ಅವನಿಗೂ ಇರುವ ಅಂತರ. ಆಕೆ, ಅವನ ಶಾರದಾ

ದೇವಿ...ಬೇಡ ಬೇಡವೆಂದರೂ ನನಗೆ ಶೀಲಳ ನೆನಪಾಗುತ್ತಿತ್ತು. ಆ ಬಳಿಕ ಬೀದಿಯಿಂದ ನಾನು ರಕ್ಷಣೆ ಕೊಟ್ಟ ಕರೆದೊಯ್ದಿದ್ದ ಆ ಹೆಣ್ಣ. ಆ ಸರದ ಯಜಮಾನಿತಿ....ನಾನು ಚಲಿಸತೊಡಗಿದೆ. ಎದುರು ಭಾಗದಿಂದ ಇಬ್ಬರು ಬಿನ್ನಾಣಗಿತ್ತಿಯರು ಬರುತ್ತಿದ್ದರು. ನಾನು ತಲೆಯೆತ್ತಿ ಅವರನ್ನು ನೋಡಿದೆ. ಆ ನಾಲ್ಕು ಕಣ್ಣುಗಳೂ ನನ್ನನ್ನು ನೋಡಿದುವು. ಆ ಇಬ್ಬರಲ್ಲೂ ನನ್ನ ಬಗ್ಗೆ ಒಂದೇ ರೀತಿಯ ಪ್ರತಿ ಕ್ರಿಯೆ ಇತ್ತು. ನಗೆ ಮಿಂಚುತ್ತಿತ್ತು-ಆ ಇಬ್ಬರ ತುಟಿಗಳಲ್ಲಿ...... ಅದಕ್ಕೆ ಅರ್ಥವೇನೂ ಇರಲಿಲ್ಲ. ಆಧುನಿಕತೆಯ ಪರೀಕ್ಷೆಯಲ್ಲಿ ನಾನು ಸೋತಿಲ್ಲ ಎನ್ನುವುದಕ್ಕೆ ಬೇಕಾದ ಪ್ರಮಾಣ ಪತ್ರವನ್ನು ಅವರು ಕೊಡುತ್ತಿದ್ದರು, ಅಷ್ಟೆ.

ಹೊತ್ತು ಕಳೆದಂತೆ, ಜನಜಂಗುಳಿ ಕರಗಿತು. ಕತ್ತಲಾಯಿತು.

ಸಂಜೆಯಿದ್ದ ಉತ್ಸಾಹ ನನ್ನಲ್ಲಿ ಆಗ ಉಳಿದಿರಲಿಲ್ಲ. ಇನ್ನು ಊಟ ಮುಗಿಸಿದ ಬಳಿಕ ಮನೆಗೆ. ಎಲ್ಲರಿಗಿಂತ ದೂರವಾದ ಒಂಟಿಯಾದ ಬಾಳ್ವೆ. ಅದರ ಅರ್ಥವೇನು? ಅದರ ಗುರಿ ಏನು?.. ಹಾಗೆ ಯೋಚಿಸಿ ಹೊರಟಾಗ, ನನಗೆ ನಗು ಬರುತ್ತಿತ್ತು. ಕಸಾಯಿ, ತಾನು ಮಾಂಸದ ತುಣುಕಾಗಿ ಮಾರ್ಪಡಿಸಬೇಕಾದ ಮೂಕ ಜೀವಿಗಳ ಹೃದಯದಲ್ಲಿ ಎಂಥ ಭಾವನೆಗಳಿವೆ ಎಂದು ಯೋಚಿಸುವ ವಿಷಯ ಎಂದಾದರೂ ಕೇಳಿದ್ದೀರಾ? ಸಾಮಾನ್ಯ ಸಾಮಾಜಿಕ ಜೀವನವನ್ನು ಬಿಟ್ಟು ಕೊಟ್ಟ ನಾನು, ಬಾಳ್ವೆಯ ವಿಶಾಲ ಸ್ವರೂಪದ ಬಗ್ಗೆ ಯೋಚಿಸುವುದರಲ್ಲಿ ಅರ್ಥವಿರಲಿಲ್ಲ.

ಮನೆಯ ಕಡೆಗೆ ಹೊರಟವನು ನಡೆಯುತ್ತಾ ಆ ಹೈಸ್ಕೂಲನ್ನು

ಸಮೀಪಿಸಿದೆ. ಅದು ಹಲವಾರು ರಾತ್ರೆ ನನಗೆ ಆಸರೆ ಒದಗಿ ಸಿದ್ದ ವಿದ್ಯಾಛತ್ರ, ಎರಡು ನಿಮಿಷ ಆ ಜಗುಲಿಯ ಮೇಲೆ ವಿರಮಿಸಿ ಮುಂದೆ ಪ್ರಯಾಣ ಬೆಳೆಸುವುದೇ ವಿಹಿತವೆನಿಸಿತು. ಕರವಸ್ತ್ರವನ್ನು ಹಾಸಿ ಅದರೆ ಮೇಲೆ ಕುಳಿತು, ಜಗುಲಿಯ ಕೆಳಕ್ಕೆ ಕಾಲುಗಳನ್ನು ಇಳಿ ಬಿಟ್ಟು ಆಕಾಶವನ್ನೇ ದಿಟ್ಟಸಿದೆ.