ಪುಟ:Vimoochane.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ವಲ್ಪ ಹೊತ್ತಿನಲ್ಲೆ ನನ್ನ ಸಮೀಪದಲ್ಲಿ ಇನ್ನೊಂದು ಜೀವ

ವಿದ್ದುದು ನನಗೆ ಅರಿವಾಯಿತು. ಒಮ್ಮೆಲೆ ಆ ರಾತ್ರೆಯ ನೀರವತೆ ಯನ್ನು ಭೇದಿಸುತ್ತಾ ಅಲೆಯಲೆಯಾಗಿ ಬಂದ ಆ ಕೆಮ್ಮು...ಈ ರೀತಿಯ ಕೆಮ್ಮು ನನಗೆ ಪರಿಚಿತವಾದುದಲ್ಲವೆ? ನನ್ನ ಆತ್ಮೀಯರಾದ ವರೊಬ್ಬರು ಹಾಗೆಯೇ ಕೆಮ್ಮತ್ತಿದ್ದರಲ್ಲವೆ?...

ಕೆಮ್ಮ ನಿಂತು, ಮತ್ತೆ ಮೌನ್ಮನೆಲೆಸಿದ ಮೇಲೆ ನಾನು ಕೇಳಿದೆ.

"ಯಾರಪ್ಪ ನೀನು?"

ಉತ್ತರ ಬರಲಿಲ್ಲ.

"ಯಾವೂರಪ್ಪಾ ? "

ಪ್ರಾಯಶಃ, ನನ್ನ ಸ್ವರವನ್ನು ಕೇಳಿ ಆತ ಧೈರ್ಯ ತಳೆದಿರಬಹುದು.

"ಕ್ಯಾತನಹಳ್ಳಿ ಬುದ್ಧಿ"

"ಏಟ್ ದಿವ್ಸ ಆಯ್ತ ಇಲ್ಲಿಗೆ ಬಂದು?"

ಆತ ಉತ್ತರವೀಯುವುದರ ಬದಲು ಮತ್ತೊಮ್ಮೆ ವಿಕಾರವಾಗಿ

ಕೆಮ್ಮಿದ. ಎರಡು ಮೂರು ನಿಮಿಷಗಳ ಮೇಲೆ ಮತ್ತೆ ನೀರವತೆ ನಿಲಿಸಿದ.

"ಔಷಧ ಗಿವ್ಷಧ ತಗೊಂಡಿಲ್ಲಾ ?”

"ಇಲ್ಲ ಬುದ್ಧಿ.....ನಮ್ಗೆಂಥಾ ಔಷಧ ಬಿದ್ಧಿ ? "

"ಬಾಳಾ ದಿವ್ಸದಿಂದ ಹಿಂಗೇ ಐತ?"

"ಹೌದು ಬುದ್ಧಿ. ಎಂಟು ತಿಂಗ್ಳಾಯ್ತು ಹಳ್ಳಿ ಬಿಟ್ಟು ಬಂದು

ಮಿಲ್ನಲ್ಲಿ ಕೆಲ್ಸ ಸಿಕ್ತು, ಆದರೆ ಜ್ವರ ಬಂದ್ದಿಡು, ಆಮೇಕೆ ಕೆಲ್ಲಾನೇ ಇಲ್ಲ. ಬಿಕ್ಸ ಎತ್ತಾ ಇವ್ನಿ ಬುದ್ಧ"

ಆ ಮಾತುಗಳನ್ನು ಕೇಳಿಕೊಂಡು ಮೆಲುಕು ಹಾಕುತ್ತಾ

ಇರಲು ನಾನು ಸಿದ್ಧನಿರಲಿಲ್ಲ, ಷರಾಯಿಯ ಜೇಬಿಗೆ ಕೈ ಹಾಕಿ ಅಲ್ಲಿದ್ದ ಚಿಲ್ಲರೆ ದುಡ್ಡನ್ನೆಲ್ಲಾ ನಾನು ಹೊರಕ್ಕೆ ತೆಗೆದೆ. ಅಷ್ಟನ್ನೂ ಕತ್ತಲಲ್ಲಿ ಕೈ ಚಾಚಿ ಆತನ ಬಳಿಯಲ್ಲಿಟ್ಟೆ, ಆ ಬಳಿಕ ಅಲ್ಲಿಂದೆದ್ದು ಹಾದಿ ಹಿಡಿದೆ............ ಆತ ಹೇಳಿದ ಮಾತುಗಳನ್ನು ನಾನು ನಂಬಬೇಕೆ? ಆ ಮಾತುಗಳೆಲ್ಲಾ ನಿಜವೆ? ನಾನು ಹೃದಯ ಹೀನ