ಪುಟ:Vimoochane.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆತ ನಗಲು ಯತ್ನಿಸಿದ-ಸಿನಿಕತನದ ನಗು.

"ಯಾಕೆ,ಏನಾಯ್ತು ನಾಣಿ?"

"ನನ್ನ ತಂಗಿ ನಿನ್ನೆ ತೀರ್ಕೊಂಡ್ಲು."

ಆರು ವರ್ಷಗಳ ಹಿಂದೆಯೊಮ್ಮೆ ಅವರ ಮನೆಗೆ ಹೋಗಿದ್ದಾಗ

ಆ ಪುಟ್ಟ ತಂಗಿಯನ್ನು ನೋಡಿದ್ದೆ. ಆಗ ಆಕೆಗೆ ಹತ್ತೋ ಹನ್ನೊಂದೋ ಇರಬೀಕು. ಲಂಗ ತೊಟ್ಟು ಓಡಾಡುತ್ತಿದ್ದಳು. ಅಣ್ಣನಂತೆಯೇ ಮನೆ ಬೆಳಗುವ ನಗು ನಗುತ್ತಿದ್ದ ಆ ಹುಡುಗಿಯನ್ನು ಸ್ಮರಿಸಿಕೊಳ್ಳುತ್ತಾ ಕುಳಿತೆ.

"ಹೆರಿಗೆಗೆ ಬಂದಿದ್ಲು. ಹೆರಿಗೆ ಏನೋ ಆಯ್ತು. ಮಗುವೂ

ಇಲ್ಲ, ಅವಳೂ ಇಲ್ಲ, ಅಷ್ಟೆ."

ಲಂಗ ತೊಟ್ಟಿದ್ದ ಹುಡುಗಿ ಬೆಳೆದು ದೊಡ್ಡವಳಾಗಿದ್ದಳು. ಸೀರೆ

ಯುಟ್ಟು ಗಂಡನ ಮನೆಗೆ ಹೋಗಿದ್ದಳು. ಗರ್ಭಿಣಿಯಾಗಿ ಅಲ್ಲಿಂದ ಹೆರಿಗೆಗೆಂದು ತವರಿಗೆ ಬಂದಿದ್ದಳು. ಆಗ ಸಾವು-

ನನ್ನ ಯೋಚನೆಯ ಸರಣಿ ಕಡಿದು ಹೋಯಿತು.

"ಎಲ್ಲಾಯ್ತು ಹೆರಿಗೆ? ಆಸ್ಪತ್ರೇಲೊ?"

"ಆಸ್ಪತ್ರೆ ಎಲ್ಬಂತು? ಎಲ್ಲಾ ನಮ್ಮನೇಲೆ...., ನೋಡಿ

ದ್ಯಲ್ಲಾ ನಮ್ಮ ಹಟ್ಟೀನಾ."

ಆ ಮೇಲೆ ಮುರುಕು ಮುರುಕಾಗಿ ಅವನ ಬಾಯಿಂದ ಕೆಲವು

ಮಾತುಗಳು ಹೊರಬಿದ್ದವು.ಒಂದಕ್ಕೊಂದು ಜೋಡಿಸಿ ಅವುಗಳಿಗೆ ಅರ್ಥ ಕಲ್ಪಿಸಿದೆ.

ಆತನ ತಂದೆ ಬಲು ಪ್ರಯಾಸ ಪಟ್ಟು ಇಂಟರ್ ತನಕ ಅವನನ್ನು

ಓದಿಸಿದರು. ತಂಗಿಗೆ ಮದುವೆ ಮಾಡಿಕೊಡುವ ಪ್ರಶ್ನೆ ದೊಡ್ಡದಾಗಿ ಎದುರು ಬಂದುದರಿಂದ ನಾರಾಯಣನ ವಿದ್ಯಾಭ್ಯಾಸ ಅಲ್ಲಿಗೇ ನಿಂತಿತು. ಅಲ್ಲಿ ಇಲ್ಲಿ ಸಾಲ ಮಾಡಿ ಅವನ ತಂದೆ, ಮಗಳ ಮದುವೆ ನೆರವೇರಿಸಿ ದರು. ನಾರಾಯಣನಿಗೆ ಹೆಣ್ಣು ಕೊಡುವವರು ಬರಬಹುದು. ಅವ ರಿಂದ ವರದಕ್ಷಿಣೆ ಪಡೆದು ಅವನ ಓದು ಮುಂದುವರಿಸಬೇಕು-ಎನ್ನು ವುದು ಅವನ ತಂದೆಯ ಯೋಜನೆಯಾಗಿತ್ತು.ಆದರೆ ಆ ಯೋಜನೆ