ಪುಟ:Vimoochane.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಾರ್ಯರೂಪಕ್ಕೆ ಇಳಿಯಲಿಲ್ಲ. ಅವನ ತಂದೆ ನಿವೃತ್ತ ಗುಮಾಸ್ತೆ, ಇನ್ನು ಯಾವುದೋ ಅಂಗಡಿಯಲ್ಲಿ ಲೆಕ್ಕ ಬರೆದು ಮನೆಯ ಸಂಸಾರ ಸಾಗಿಸಲು ಆತ ಸಂಪಾದಿಸಬೇಕಾಗಿತ್ತು, ನಾರಾಯಣ ಕೆಲಸಕ್ಕೋ ಸ್ವರ ಅಲೆದ. ಅವನು ಹೋದಲ್ಲಿ ಅದು ಇರಲಿಲ್ಲ....

... ಹೊರಡುವ ಹೊತ್ತಿಗೆ ನಾಣಿ ಕೇಳಿದ:

"ಇದೇ ಊರಲ್ಲಿ ಇರ್ತಿ ಏನು?”

"ಇಲ್ಲ ಬೊಂಬಾಯಲ್ಲಿ ಇದ್ದೀನಿ. ಯಾವತ್ತಾದರೂ ಇಲ್ಲಿಗೆ

ಬರ್ತೀನಿ ಅಷ್ಟೆ."

ಅದು ಸುಳ್ಳಾಗಿತ್ತು, ಆದರೆ ಸುಳ್ಳು ಸತ್ಯಗಳ ನಡುವಿನ

ವ್ಯತ್ಯಾಸ ನನ್ನ ಪಾಲಿಗೆ ಎಷ್ಟೋ ಕಡಿಮೆಯಾಗಿತ್ತಲ್ಲವೆ?

“ಹೂಂ. ನೋಡಿದರೆ ಗೊತ್ತಾಗುತ್ತೆ. ಬೊಂಬಾಯಿ ಒಗ್ಗಿದೆ

ಯೇನೋ ? "

“ಪರವಾಗಿಲ್ಲ.”

"ಯಾವತ್ತಾದರೂ ಇಲ್ಲಿದ್ದಾಗ ನಮ್ಮನೇ ಕಡೆ ಬಾ. ಇನ್ನೂ

ನಮ್ಮಾಯಿ ಉಪ್ಪಿಟ್ಟು ಚೆನಾಗಿಯೇ ಮಾಡ್ತಾರೆ.”

“ ಬರ್ತೀನಿ.”

ನನ್ನ ಕೈಯಲ್ಲಿದ್ದ ಕೆಲವು ರೂಪಾಯಿಗಳನ್ನು ಆತನಿಗೆ

ಕೊಡೋಣವೇ ಎನಿಸಿತು.ಆದರೆ ಅದೆಂತಹಹ ದಾನಶೀಲತೆ ? ಅಂತಹ ದಾನಕ್ಕೆ ಅರ್ಥ ಉಂಟೆ? ಹಾಗೆ ದುಡ್ಡು ಕೊಟ್ಟು ಅವನ ಹೃದಯ ವನ್ನು ಘಾಸಿಗೊಳಿಸಲೇ?

ನಾನು ಹಾಗೆ ಮಾಡಲಿಲ್ಲ. ಮನಸ್ಸನ್ನು ಕಲ್ಲಾಗಿ ಮಾರ್ಪಡಿಸಿ

ನನ್ನ ಹಾದಿ ಹಿಡಿದಿದೆ....

....ಆದರೆ ಮತ್ತೆ ಮನಸ್ಸು ಹಿಂಡುವ ಯೋಚನೆಗಳು ಧಾವಿಸಿ

ಬರುತ್ತಿದ್ದವು. ಎಲ್ಲದರಲ್ಲಾ ಅತೃಪ್ತಿ, ವಿವರಿಸಲಾಗದ ಅಶಾಂತಿ. ನಾನು ಸಾಗುತ್ತಿದ್ದ ಹಾದಿ ಎಲ್ಲಿ ಮುಕ್ತಾಯವಾಗುವುದು? ಅದರ ಮೈಲುಗಲ್ಲಾವುದು, ಯಾವುದು? ಹೀಗೆಯೇ ಬೆಳೆಯುತ್ತಾ ಹೋಗು ವುದೇ ಮಾನವ ಜೀವನವೆ ?