ಪುಟ:Vimoochane.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

• • • ಶನಿವಾರ

ನಿತ್ರಾಣನಾದ ನಾನಿಂದು, ಬರೆಯುವ ಮಹಾ ಯಜ್ಞದ

ಇನ್ನೊಂದು ದಿನವನ್ನು ಆರಂಭಿಸುತ್ತಿದ್ದೇನೆ. ಕಳೆದ ರಾತ್ರೆ ನನಗೆ ಪ್ರತಿಕೂಲವಾಗಿತ್ತು, ನಿದ್ದೆ ನನಗೆ ಕೈ ಕೊಟ್ಟಿತು. ನಿನ್ನೆ ಹಗಲೆಲ್ಲಾ ಒಂದೇ ಸಮನೆ ವಿಶ್ರಾಂತಿಯ ಯೋಚನೆ ಇಲ್ಲದೆ ಬರೆದುದರ ಫಲವಿರ ಬೇಕು. ಮೈ ಮನಸ್ಸು ಮೆದುಳು ಕಾದು ನನಗೆ ನಿದ್ದೆ ಬರಲಿಲ್ಲ. ಕರುಳು ವಿಕೃತವಾಗಿ ಕೆರಳಿಕೊಂಡು ಹೊತ್ತು ಕಳೆಯುವುದನ್ನು ಅಸಹ ನೀಯಗೊಳಿಸಿತು. ಒಂದು ಕಾಲದಲ್ಲಿ ಡಾಕ್ಟರು ಅದನ್ನು ఆಪೆಂಡಿ ಸೈಟಿಸ್ ಎಂದು ಕರೆದರು. ಬೇರೊಬ್ಬ ವಿಚಕ್ಷಣರು ಬರಿಯ ಕ್ರಿಮಿ ಷವೆಂದರು. ಮೂರನೆಯವರು ಹುಣ್ಣಿರಬೇಕು ಎಂದು ಅಭಿ ಪ್ರಾಯಪಟ್ಟರು. ಅವರು ಯಾರೂ ಆ ಬಗ್ಗೆ ಏಕಾಭಿಪ್ರಾಯವನ್ನು ಕೊಟ್ಟುದಿಲ್ಲ. ಕೊನೆಯ ತೀರ್ಮಾನವನ್ನಿತ್ತುದಿಲ್ಲ. ನಾನು ನರ ಳುತ್ತಾ ಬಂದಿದ್ದೇನೆ—ನಗು ನಗುತ್ತ ನರಳುತ್ತಾ ಬಂದಿದ್ದೇನೆ. ಇಷ್ಟು ವರ್ಷಗಳಾದ ಮೇಲೆ ಈಗ?

ಬೆಳಗು ಮುಂಜಾವದ ಮುಂಚೆ ಚುಮು ಚುಮು ಎನ್ನುವ

ಹಾಗೆ ಕಣ್ಣಿಗೊಂದಿಷ್ಟು ಜೊಂಪು ಹತ್ತಿತು. ಆದರೆ ಅದು ಸ್ವಲ್ಪ ಹೊತ್ತು ಮಾತ್ರ, ಬಿರಿದು ಬಂದ ಕರುಳಿನ ನೋವು ಮತ್ತೆ ನನ್ನನ್ನು ಈಗ ಎಚ್ಚರಗೊಳಿಸಿದೆ.

.... ಸರಳುಗಳ ಎಡೆಯಿಂದ ಸ್ವರ ಹೊರ ಹಾಕಿ ಕರಿಯ ಕೇಳಿದ :

"ರಾತ್ರೆ ನಿದ್ದೆ ಮಾಡ್ಡಂಗೇ ಇಲ್ಲ ನೀವು.”

ಕತ್ತಲಾದರೆ ಸಾಕು, ಗೊರಕೆ ಹೊಡೆಯಲು ತೊಡಗುವ

ಕರಿಯ ನನಗೆ ಆ ಪ್ರಶ್ನೆ ಕೇಳುತ್ತಾನೆ!