ವಿಷಯಕ್ಕೆ ಹೋಗು

ಪುಟ:Vimoochane.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ನಿಂಗೆ ಎಚ್ಚರವಿತ್ತೇನೋ ?"

"ಎಲ್ಲೋ ಓಂದ್ಸಾರಿ ಉಚ್ಚೆ ಹುಯ್ಯೋಕೆ ಅಂತ ಎದ್ದಿದ್ದೆ, ಆಗ

ಬೆಳಕು ಕಾಣಿಸ್ತಿತ್ತು”

ನಿಜವಿರಬಹುದು.

ನಾನು ಬಂದ ಮೊದಲಿನಲ್ಲಿ ಒಮ್ಮೆ “ಬುದ್ದೀ?” ಎಂದು ನನ್ನನ್ನು

ಸಂಬೋಧಿಸಿದ್ದ, ಬಾಲ್ಯದಿಂದಲೇ ಅವನಿಗೆ ಅಂಟಿಕೊಂಡಿದ್ದ ಅಭ್ಯಾಸ. ಹಾಗೆ ಕರೆಯಬಾರದೆಂದು ನಾನು ಪುಟ್ಟ ಭಾಷಣವನ್ನೇ ಕೊಟ್ಟಿದ್ದೆ. ಅಂದಿನಿಂದ ನಮ್ಮೊಳಗೆ ಆತ್ಮೀಯ ಸಂಬಂಧ ನೆಲೆಸಿತ್ತು, ಆದರೂ ನನ್ನನ್ನು ಗೌರವದ ಬಹು ವಚನದಿಂದ ಆತ ಕರೆಯುತ್ತಿದ್ದ.

"ರಾಯರೇ-ರಾಯರೇ......"

ನಾನು ರಾಯನಾಗಿರಲಿಲ್ಲ. ಆದರೆ, ಈ ಮೂವತ್ತೆಂಟು

ವರ್ಷಗಳ ಅವಧಿಯಲ್ಲಿ ಎಷ್ಟೊಂದು ಹೆಸರುಗಳಿಗೆ ನಾನು ಒಡೆಯ ನಾಗಿದ್ದೆ! ಅದರ ಜತೆಯಲ್ಲಿ ಇದೊಂದು!

ನಾಲ್ಕು ಜನರಿದ್ದಲ್ಲಿ ನಾನು ಯಾವಾಗಲೂ ಅವರ ಗಮನ ಸೆಳೆ

ಯುತಿದ್ದೆ; ಅವರ ಮಾತು ಕತೆಯ ಕೇಂದ್ರವಾಗುತಿದ್ದೆ, ಮೊದಲಿ ನಿಂದಲೂ ಅದು ನನ್ನಲ್ಲಿ ಬೆಳೆದು ಬಂದ ಗುಣ ಇಲ್ಲವೆ ದೋಷ. ಇಪ್ಪತ್ತೊಂದು–ಇಪ್ಪತ್ತೆರಡು–ಇಪ್ಪತ್ತಮೂರು ವರ್ಷಗಳ ವಯಸ್ಸಿನ ಆ ಅವಧಿಯಲ್ಲಾ ಇತರರ ಮಾತು ಕತೆಗಳಿಗೆ ನಾನು ಕೇಂದ್ರವಾಗು ತಿದ್ದೆ, ನನ್ನ ವೃತ್ತಿಯಲ್ಲಿ ಏಕಾಕಿ ಜೀವನ ಸಾಧ್ಯವಿರಲಿಲ್ಲ, ನಾನು ಎಷ್ಟು ಪ್ರಯತ್ನಪಟ್ಟರೂ ವೃತ್ತಿಬಾಂಧವರ ಬಳಗದಿಂದ ದೂರವಿರುವು ದಕ್ಕಾಗಲಿಲ್ಲ.

ಒಂದು ದಿನ ನಮ್ಮನಗರದ ದೊಡ್ಡ ಬೀದಿಯಲ್ಲಿ ಆ ಮಾರವಾಡಿ

ಯನ್ನು ಕಂಡೆ. ಕಂಡವನೇ ಅವನನ್ನು ಹಿಂಬಾಲಿಸಿದೆ. ಆತ ಒಂದು ಹೋಟೆಲಿನ ಒಳ ಹೊಕ್ಕು ಮೂಲೆಯಲ್ಲಿ ಕುಳಿತು ಕಾಫಿ ತರಿಸಿದ. ಆವನು ನನಗೆ ಕಾಣಿಸುವಷ್ಟು ದೂರದಲ್ಲಿ ಕುಳಿತು, ಅವನನ್ನೆ ನಾನು ದಿಟ್ಟಿಸುತಿದ್ದೆ, ಆತ ಕೋಟಿನ ಒಳಜೇಬಿನಿಂದ ಒಂದು ಪುಟ್ಟ ಗಂಟನ್ನು