ಪುಟ:Vimoochane.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊರತೆಗೆದು ತೆರೆದು, ನೂರು ನೂರರ ಅದೆಷ್ಟೋ ನೋಟುಗಳನ್ನು ಮೇಜಿಗೆ ಮರೆಯಾಗಿ ತೊಡೆಯ ಮೇಲಿರಿಸಿಕೊಂಡು ಎಣಿಸತೊಡಗಿದ. ಅವನ ತುಟಿಗಳು ಎಣಿಕೆಯ ಸಂಖ್ಯೆಯೊಡನೆ ಚಲಿಸುತ್ತಿದ್ದರೂ ದೃಷ್ಟಿ ಸುತ್ತಮುತ್ತಲಿನ ಜನರ ಮೇಲೆಲ್ಲಾ ಓಡಾಡುತ್ತಿತ್ತು.

ಕಾಫಿ ಮುಗಿಯಿತು. ಬ್ಯಾಂಕಿನ ಕಡೆಗೆ ಆತ ಹೊರಟಿರ

ಬೇಕೆಂದು ನಾನು ಊಹಿಸಿಕೊಂಡೆ. ಹಿಂದೂ ಮುಂದೂ ದೃಷ್ಟಿ ಹಾಯಿಸುತ್ತ ಆ ಮಾರವಾಡಿಯನ್ನು ಹಿಂಬಾಲಿಸಿದೆ. ವಯಸ್ಸಾಗಿದ್ದ ವ್ಯಕ್ತಿ, ಬೆನ್ನು ಸ್ವಲ್ಪ ಬಾಗಿತ್ತು, ಆದರೂ ಇನ್ನೂ ಇಪ್ಪತ್ತು- ಮೂ ವತ್ತು ವರ್ಷಗಳ ಕಾಲ ನಮ್ಮ ಊರಿನಲ್ಲೆ ಆತ ವ್ಯಾಪಾರ ಮಾಡುವು ದರಲ್ಲಿ ಸಂಶಯವಿರಲಿಲ್ಲ, ಐದು ನಿಮಿಷಗಳ ಕಾಲ ನಡೆದ ಮೇಲೆ ಬ್ಯಾಂಕು ಬಂತು. ನಾನು ವೇಗವಾಗಿ ಹೆಜ್ಜೆ ಇಟ್ಟೆ. ಆತ ಒಳ ಹೋಗಿ ಡಿಪಾಜಿಟ್ ಕೌಂಟರಿನ ಬಳಿ ನಿಂತು, ಹಣವನ್ನು ಹೊರ ತೆಗೆದ....

ಒಂದು ಕ್ಷಣದಲ್ಲೆ ಆ ಕೆಲಸವಾಗಿತ್ತು, ಆ ನೋಟುಗಳ ಮೇಲೆ

ನಾನು ಕೈ ಇರಿಸಿದ್ದೆ, ಆದರೆ ಒರಟಾದ ಇನ್ನೊಂದು ಕೈ ನನ್ನದನ್ನು ಬಿಗಿಹಿಡಿದಿತ್ತು. ನಾನು ಗಾಬರಿಗೊಂಡು ಮುಖವೆತ್ತಿದೆ. ಆ ಕೈ ಸರ ಕ್ಕನೆ ಹಿಂದಕ್ಕೆ ಸರಿಯಿತು. ಆತ ನನಗೆ ಅಡ್ಡಿಯಾಗಲಿಲ್ಲ, ಮಾರ ವಾಡಿಯ ಗಂಟಲಿನಿಂದ ಪ್ರಾಣಹೋಯಿತೇನೋ ಎಂಬಂತೆ ಆರ್ತ ನಾದ ಹೊರಟಿತು. ಅದನ್ನು ಕೇಳಲು ನಾನು ಅಲ್ಲಿರಲಿಲ್ಲ.

ಕೈಯನ್ನು ಷರಾಯಿಯ ಜೇಬಿನೊಳಕ್ಕೆ ಇಳಿಬಿಟ್ಟಿದ್ದೆ. ಇಷ್ಟು

ಅನುಭವಿಯಾದರೂ ಹೃದಯ ಡವಡವನೆ ಹೊಡೆದುಕೊಳ್ಳುತಿತ್ತು. ಆ ಇನ್ನೊಂದು ಕೈ—. ಆ ವ್ಯಕ್ತಿ ಪೋಲೀಸು ಖಾತೆಗೆ ಸಂಬಂಧಿಸಿದವ ನಾಗಿತಲಿಲ್ಲ . ಹಾಗೇನಾದರೂ ಆಗಿದ್ದರೆ, ಸೆಂಟ್ರಲ್ ಜೈಲಿನಲ್ಲಿ ವಿರಮಿಸುವ ಅವಕಾಶ ನನಗೆ ದೊರೆಯುತ್ತಿತ್ತು,

ಹಿಂತಿರುಗಿ ನೋಡದೆ ನಾನು ಸಂದಿಗೊಂದಿಗಳಲ್ಲಿ ಹಾದು

ಹೋದೆ. ಹೆಚ್ಚು ಹೊತ್ತು ನಾನು ನಡೆಯುತ್ತಿರಬಾರದು. ಯಾವು ದಾದರೂ ಹೋಟೆಲಿನ ಒಳಹೊಕ್ಕು ಸ್ವಲ್ಪ ಕಾಲ ಅಲ್ಲಿ ಕುಳಿತಿರಬೇಕು.