ನಾನು ಸುರಕ್ಷಿತನೆ? ನನ್ನನ್ನು ಯಾರೂ ಹಿಂಬಾಲಿಸುತ್ತಿಲ್ಲ, ಅಲ್ಲವೆ? ಆ ಬಗ್ಗೆ ನನ್ನಲ್ಲಿ ಬಗೆಹರಿಯದ ಶಂಕೆಗಳಿದ್ದುವು. ಆ ವ್ಯಕ್ತಿ–ಆ ವ್ಯಕ್ತಿ........
ಆಲ್ಲಿದ್ದೊಂದು ಹೋಟೆಲು ನನಗೆ ಆಹ್ವಾನವಿತ್ತಿತು. ಆದಷ್ಟು ಗಂಭೀರವಾದ ನಡಿಗೆಯಲ್ಲಿ ಒಳ ಪ್ರವೇಶಿಸಿ, ಖಾಲಿಯಾಗಿದ್ದೊಂದು ಮೇಜಿನ ಬಳಿ ಸಾಗಿದೆ
"ಏನು ಕೊಡ್ಲಿ ಸಾರ್?"
"ಏನಪ್ಪಾ ?"
ಆ ಹುಡುಗನಿಗೆ ಸ್ವಲ್ಪ ನಗು ಬಂತು. ವಿಚಾರದಲ್ಲಿ ಮುಳುಗಿದ್ದ ನನಗೆ ಆ ಪ್ರಶ್ನೆ ಕೇಳಿಸಿರಲಿಲ್ಲ. ನನ್ನ ತಪ್ಪು ನನಗೆ ಮನವರಿಕೆ ಯಾಗಿ ಮುಗುಳ್ಳಕ್ಕೆ.
"ಬಿಸಿ ಏನಾದರೂ ಇದೆಯೊ?"
"ವಾಂಗಿ ಭಾತ್ ಇದೆ ಸಾರ್."
"ಸರಿ, ತಗೊಂಡು ಬಾ." ಹುಡುಗ ಹೊರಟನೋ ಇಲ್ಲವೊ.. ಆಗಲೆ ಆ ಸ್ವರ ಕೇಳಿಸಿತು:
"ಎರಡು ಪ್ಲೇಟು."
ಹುಡುಗ ಮುಖ ತಿರುಗಿಸಿ ನನ್ನನ್ನು ನೋಡಿದ.
ಇಲ್ಲ, ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆ ವ್ಯಕ್ತಿ ಹಿಂಬಾ ಲಿಸಿಕೊಂಡು ಬಂದಿದ್ದ.ಪೋಲೀಸರಾಗಿದ್ದರೆ ಹಿಂಬಾಲಿಸಲಾರದೆ, ಯಾವುದೊ ಗಲ್ಲಿಯಲ್ಲಿ ದಾರಿ ತಪ್ಪಿ ಬೇಸತ್ತು ಹೋಗುತ್ತಿದ್ದರು. ಅವನು ಪೋಲೀಸರಪನಾಗಿರಲಿಲ್ಲ.
ನಾನು ಮುಗುಳು ನಗಲು ಯತ್ನಿಸಿದೆ :
"ಹೌದು, ಎರಡು ಪ್ಲೇಟು."
ಆತ ನನಗಿಂತಲೂ ಹತ್ತು ಹದಿನೈದು ವೆರ್ಷಗಳ ಮಟ್ಟಿಗೆ
ದೊಡ್ಡವನಾಗಿದ್ದ.
ಎತ್ತರವಾದ ಕಪ್ಪು ಬಣ್ಣದ ದೇಹ. ಮುಖದ ಮೇಲೆ ಸಿಡುಬಿನ ಕಲೆಗಳಿದ್ದುವು. ಗೆರೆ ಮೀಸೆ, ಕ್ರೌರ್ಯದ ನೋಟ ವನ್ನು ಮುಖಕ್ಕೆ ಕೊಟ್ಟತ್ತು. ಕೆಂಪಗಿದ್ದುವು ಕಣ್ಣುಗಳು. ರಕ್ತ ಹೀನ