ಪುಟ:Vimoochane.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾದ ತುಟಿಗಳು, ಒಣಗಿದ ತೊಂಡೇ ಕಾಯಿಯಾಗಿದ್ದುವು. ಅವನು ಹಳೆಯ ಸ್ನೇಹಿತನಂತೆ ನಕ್ಕ. ಆ ರೀತಿ ನಕ್ಕಾಗ ಒಂದು ರೀತಿಯ ಮೃದುತನ ತೋರಿಸಿಕೊಳ್ಳುತಿತ್ತು. ಆ ಹಲ್ಲುಗಳು ದೊಡ್ಡವಾಗಿ ದ್ದುವು–ಅವುಗಳಲ್ಲೆರಡು ಬಂಗಾರದ ಹಲ್ಲುಗಳು.

"ಗಾಬರಿಯಾಯ್ತಾ?”

"ಈವರೆಗೆ ಹಾಗಂದರೇನೂಂತ ತಿಳಿದಿಲ್ಲ."

ಆವನ ಪದೋಚ್ಚಾರಣೆ ಸರಳವಾಗಿರಲಿಲ್ಲ. ಅವನದು ಕಲಿತ

ಕನ್ನಡ, ಸ್ವಲ್ಪ ರಾಗವಾಗಿರುತಿತ್ತು. ಆತ, ತಮಿಳನೊ ತೆಲುಗನೊ ಮಲೆಯಾಳಿಯೊ ಸುಲಭವಾಗಿ ಹೇಳುವುದು ಸಾಧ್ಯವಿರಲಿಲ್ಲ.

ನನ್ನನ್ನು ಸೂಕ್ಷ್ಮವಾಗಿ ಆತ ನಿರೀಕ್ಷಿಸುತ್ತಿದ್ದ.

ತಿಂಡಿ ಮತ್ತು ನೀರು ಬಂದುವು.

"ಕಾಫಿ" ಎಂದೆ, ಹುಡುಗನನ್ನು ಉದ್ದೇಶಿಸಿ.

ಆ ವ್ಯಕ್ತಿ ಗೊಣಗಿತು.

"ಈ ಬ್ರಾಹ್ಮಣರ ಕಾಫಿ ಕುಡಿದು ಸಾಕಾಯಿತು. ಒಂದಿಷ್ಟು

ಬೀರ್ ಸಿಕ್ಕಿದ್ದರೆ—?”

ನಾನು ಮಾತನಾಡಲಿಲ್ಲ.

ಹೊರ ಹೊರಟಾಗ, ಅವನು ಬಿಲ್ ತೆತ್ತ, ಬಹಳ ದಿನಗಳಿಂದ

ಪರಿಚಯವಿದ್ದವರ ಹಾಗೆ ನಾವು ನಡೆದೆವು. ಒಂದು ಜಟಕಾ ಮಾಡಿ ಕೊಂಡು ನಾಲ್ಕಾರು ಮೈಲಿ ದೂರ ಹೋದೆವು........ನನ್ನ ಮುಂದಿದ್ದ ಹಾದಿ ಸ್ಪಷ್ಟವಾಗಿತ್ತು, ಅದು ಪ್ರಾಯಶಃ ಜನತೆ ಎಲ್ಲಾ ಕಾಲ ದಿಂದಲೂ ತುಳಿದು ಬಂದಿರುವ ಹಾದಿ. ಅದು ವೃತ್ತಿಗೆ ಸಂಬಂಧಿಸಿದ ಸಾಂಘಿಕ ಜೀವನ.

ಆ ಮಟ ಮಟ ಮಧ್ಯಾಹ್ನ; ಉತ್ತರದ ಆಟದ ಬಯಲಿನ

ಮೂಲೆಯಲ್ಲಿ, ಮರದ ನೆರಳಿನಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕುಳಿತೆವು.

"ನಿನಗೇನೂ ಹೇಳಬೇಕಾದ್ದಿಲ್ಲ. ವೃತ್ತಿಯ ನಿಯಮ ನಿನಗೆ

ಗೊತ್ತಿರಬೇಕು. ನೋಡೋದಿಕ್ಕೆ ನೀನು ಹುಡುಗನ ಹಾಗಿದ್ದರೂ ಕಸಬಿನಲ್ಲಿ ಪಳಗಿದ ಕೈಯೇ ಸರಿ."