ಪುಟ:Vimoochane.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವನ ಹೊಗಳಿಕೆ ಹಿತಕರವಾಗಿತ್ತು

ಆದರೆ ಅದು ಬೆದರಿಕೆಯ ಗುಡೂಗೂ ಬೆರೆತಿದ್ದ ಧ್ವನಿ.

ನಿನ್ನ ಪಾಲು ತಗೊ, ಎನ್ನುತ್ತಾ, ನೊಟೂಗಳನ್ನು ಎಣಿ

ಸಿದೆ. ಒಬ್ಬೊಬ್ಬರ ಪಾಲಿಗಿ ಆರುನೂರು ಐವತ್ತು ಬಂತು.

ಆತ ಮೌನವಾಗಿ ಆ ಹಣವನ್ನು ತನ್ನ ಕಿಸೆಗೆ ಸೇರಿಸಿಕೊಂಡ

ದುಡ್ಕೊಡ್ಬೇಕಾಯ್ತೂಂತ ಸ್ವಾಮಿಗೆ ದುಃಖವಾಗ್ತಾ ಇರ

ಬೇಕು.

ನಾನು ಸ್ವಾಮಿಯಲ್ಲ. ನನಗೆ ದುಃಖವೂ ಇಲ್ಲ. ನನ್ನ ಹೆಸರು

ಶೇಖರ್.v

ಓ! ನಿಜವಾದ ಹೆಸರಾ?

ಅವಮಾನವಾದವರ ಹಾಗೆ ಅವನನ್ನು ನೋಡಿದೆ.

ಹೌದು, ಪೂರ್ತಿಯಾಗಿ ಚಂದ್ರಶೇಖರ್ ಅಂತ. ಅದು,

ಪೋಲೀಸರು ದಾಖಲೆ ಮಾಡೀಕೊಂಡಿರೋ ಮೂಲ ಹೆಸರು. ಬೇರೆ

ಯೂ ಇವೆ. ಹೇಳ್ಳೇನು?

ಬೇಡ..........ಅಲ್ಲಾ, ಇಷ್ಟಕ್ಕೆಲ್ಲ ಸಿಟ್ಟಾದರೆ ಹೇಗೆ?"

............

ಇನ್ಮುಂದೆಯೂ ನಾವು ಸ್ನೇಹಿತರಾಗಿರೋಣವೊ ?

ಹೂಂ .

ಎಲ್ಲಿ ತಾ ಕೈ."

ಮತ್ತೊಮ್ಮೆ ಅವನು ಬಲಗೈ ನನ್ನದನ್ನು ಸೋಂಕಿತು. ಆ ಬೆರಳು

ಗಳು ನೀಳವಾಗಿ ಕುರೂಪವಾಗಿದ್ದುವು. ಹಿಂಗೈಯ ಮೇಲು ಭಾಗದಲ್ಲಿ

ನರಗಳು ಸಿಕ್ಕುಗಟ್ಟದ್ದುವು.

ನಾನು ಮತ್ತು ಚಲಂ ಸ್ನೇಹಿತರಾದುದು ಹಾಗೆ. ಆ ಗೆಳೆತನ

ಅಲ್ಲಿಗೆ ನಿಲ್ಲಲಿಲ್ಲ. ಅವನಿಗೆ ಮೂವರು ಸಂಗಡಿಗರಿದ್ದರು. ಅವರಿ ಗೆಲ್ಲಾ ಆತನೇ ನಾಯಕ. ಆ ಮೂವರು ಆತ ಹೆಳೇದ್ದನ್ನು ಮಾಡುವ, ಅಕ್ಷರಶ: ಪಾಲಿಸುವ, ಭಟರಾಗಿದ್ದರು.ಒಂಟಿ ಜೀವವಾಗಿದ್ದ ನಾನು