ಪುಟ:Vimoochane.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವರ ಸಂಗದಲ್ಲಿ ಒಂದು ರೀತಿಯ ಸಮಾಧಾನವನ್ನು ಪಡೆದೆ. ಅಲ್ಲಿ ಅವರೊಡನೆ ಮುಖವಾಡ ಧರಿಸಿ ಮಾತನಾಡಬೇಕಾಗಿರಲಿಲ್ಲ. ಮಾತು ಮಾತಿಗೂ ರಹಸ್ಯ ಜೀವಿಯಾಗಿ ಸುಳ್ಳಿನ ಸರಮಾಲೆ ನೇಯಬೇಕಾಗಿರ ಲಿಲ್ಲ.

ಅವರು ಬಲು ಸುಲಭವಾಗಿ ನನ್ನನ್ನು ಪ್ರೀತಿಸಿದರು. ನಾನು

ಅವರೆಲ್ಲರಿಗಿಂತ ಚಿಕ್ಕವನಾಗಿದ್ದೆ. ಆದರೆ ನನಗೆ ಬರುತಿದ್ದ ಓದು ಬರೆಹ ವಯಸ್ಸಿನ ಅಂತರವನ್ನು ಕಡಿಮೆ ಮಾಡಿತ್ತು. ಅಕ್ಷರಗಳ ಮಾತು ಬಂದಾಗ, ನನ್ನ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಅವರು ಚಕಾರವೆತ್ತುತ್ತಿರಲಿಲ್ಲ.

ಅವರಲ್ಲೊಬ್ಬ ಮುಸಲ್ಮಾನರವನಿದ್ದ, ಅವನೂ ಒಂದು ಕಾಲ

ದಲ್ಲಿ ಬೊಂಬಾಯಿಯಲ್ಲಿದ್ದನಂತೆ. ನಾನು ದೇಶ ಪರ್ಯಟನ ಮಾಡಿ ದವನೆಂದು ತಿಳಿದ ಮೇಲೆ ನನ್ನ ಬಗ್ಗೆ ಅವನಿಗಿದ್ದ ಗೌರವ ಇಮ್ಮಡಿ ಯಾಯಿತು. ತನ್ನ ವಿಶಿಷ್ಟ ಹಿಂದೂಸ್ಥಾನಿಯಲ್ಲಿ ಅವನು ಹೇಳಿದ:

"ಶೇಖರ್ ಸಾಹೆಬ್ . ನಾನು ನಿಮ್ಮನ್ನು ಬಾಷ ಎಂತಲೇ

ಕರೀತೀನಿ."

"ಅದು ಹ್ಯಾಗಾದೀತು? ಬಾಷ ಎನ್ನೋದು ನನ್ನ ಸ್ನೇಹಿತ

ಅಮಿಾರನ ಹೆಸರು."

"ಅದಕ್ಕೇನಂತೆ? ಅವನು ಬೊಂಬಾಯಿ ಬಾಷ. ನೀವು ಇಲ್ಲಿ

ಯುವರು."

ಹೀಗೆ ನನ್ನ ಹಲವು ಹೆಸರುಗಳಿಗೆ ಮತ್ತೊಂದು ಸೇರಿತು.

ಆದರೆ, ಯಾವ ಹೆಸರಾದರೇನು? ನಾವೆಲ್ಲ ಒಂದೇ ರೀತಿ ಯಾಗಿದ್ದೆವು. ಹೆಸರುಗಳಲ್ಲಿ ವೈವಿಧ್ಯವಿದ್ದರೂ ನಮ್ಮ ಮನೋ ಪ್ರವೃ ತ್ತಿಯಲ್ಲಾ ವ್ಯಕ್ತಿತ್ವದಲ್ಲಾ ಏಕರೂಪತೆ ಇತ್ತು. ಅಷ್ಟೇ ಅಲ್ಲ, ನಮ್ಮ ಬಾಲ್ಯದ ಇತಿಹಾಸದಲ್ಲೂ ಸಾಮ್ಯವಿತ್ತು.

ಆ ಚಲಂ, ನನಗಿಂತ ಹೆಚ್ಚು ಚಳ್ಳೇಕಾಯಿ ತಿಂದವನು.

ಅವನು ತಂದೆಯ ಮುಖವನ್ನೂ ಕಂಡವನಲ್ಲ; ತಾಯಿಯ ಮುಖ ವನ್ನೂ ಕಂಡವನಲ್ಲ. ಅವನು ತೊಟ್ಟಿಲ ಮಗುವಾಗಿರಲಿಲ್ಲ. ಕಸದ