ಆ ವಿಷಯ ನನಗೆ ತಿಳಿದ ಬಗೆ ಹೀಗೆ.
ಬೇಸಗೆಯ ವಿಶ್ರಾಂತಿಗಾಗಿ ಹೈದರಾಬಾದಿನಿಂದ ಇಲ್ಲಿಗೆ ಬಂದು
ದೊಡ್ಡದೊಂದು ಬಂಗಲೆಯಲ್ಲಿ ಆಗರ್ಭ ಶ್ರೀಮಂತನೊಬ್ಬ ಇಳಿದು ಕೊಂಡಿದ್ದ ವಿಷಯ ನನಗೆ ತಿಳಿಯಿತು.ಆತ ಬಂದು ಎರಡು ದಿನ ಗಳೂ ಆಗಿರಲಿಲ್ಲ, ಅವನ ಊಳಿಗದವರು ಇನ್ನೂ ಬಂದಿರಲಿಲ್ಲ. ಆ ರಾತ್ರೆಯೇ ಕಾರ್ಯಾಚರಣೆ ಮಾಡಿದರೆ ಸುಲಭವಾಗಿ ಬೇಟೆ ಬಲೆಗೆ ಬೀಳುವ ಹಾಗಿತ್ತು, ನಾನು ಗುಂಪಿನವರಲ್ಲಿ ಒಬ್ಬನನ್ನು ಸಂಧಿಸಿ,"ಈಗಿಂದೀಗ ಚಲಂನನ್ನು ನೋಡಬೇಕು,"ಎಂದೆ.
ಉತ್ತರ ನಿಧಾನವಾಗಿ ಬಂತು:
"ಸಾಯಂಕಾಲ ಐದು ಘಂಟೆಗೇನೇ ಉಸ್ತಾದ್ ಬರೋದು."
"ಇಲ್ಲ, ಅಷ್ಟು ತಡಮಾಡೋದು ಸಾಧ್ಯವಿಲ್ಲ, ಬಹಳ
ಜರೂರು ವಿಷಯ."
"ಇನ್ನೂ ಒಂದು ಘಂಟೆ ಹೊತ್ತು ಇಲ್ಲೇ ಇರಿ. ಹೇಳಿ
ಕಳಿಸ್ತೀನಿ."
ಬೇರೊಬ್ಬನನ್ನು ಆತ ಸೈಕಲಿನ ಮೇಲೆ ಕಳುಹಿಸಿಕೊಟ್ಟ.
ಆ ದೂತ ವಾಪಸು ಬಂದವನು ಸಂದೇಶ ತಂದ.
"ಶೇಖರ್, ನಿಮ್ಮನ್ನು ಅಲ್ಲಿಗೇ ಬರಹೇಳಿದ್ದಾರೆ.”
ಹಾಗೆ ನಾನು, ಚಲಂ ವಾಸವಾಗಿದ್ದ ಮನೆಗೆ ಹೋದೆ. ಪುಟ್ಟ
ದಾಗಿದ್ದರೂ ಸೊಗಸಾದ ಮನೆ, ಮೂವತ್ತು ಮೂವತ್ತೈದು ರೂಪಾಯಿ ಬಾಡಿಗೆ ಬರುವಂಥಾದ್ದು—ಆಗಿನ ಕಾಲದ ಬಾಡಿಗೆ.
ಹೊರಬಾಗಿಲನ್ನು ನಾನು ಸಮಾಪಿಸುತಿದ್ದಾಗಲೇ ಚಲಂ
ಸ್ವರ ಕೇಳಿಸಿತು.
"ಬಾ ಶೇಖರ್, ಒಳಕೈ ಬಾ."
ನಾನು ಒಳಹೋದೆ. ತಪ್ಪು ತಪ್ಪಾಗಿ ಮುದ್ದು ಮುದ್ದಾಗಿದ್ದ
ತೊದಲು ಮಾತಿನ ಎಳೆಯ ಮಗುವೊಂದನ್ನು ಎತ್ತಿಕೊಂಡು ಚಲಂ ನನಗೆ ಸ್ವಾಗತಬಯಸಿದ. ಚಲಂ ಮತ್ತು ಮಗು ! ಇದು ನನ್ನ ಊಹೆಗೆ ನಿಲುಕದ ವಿಷಯವಾಗಿತ್ತು, ಆದರೂ ನನ್ನ ಭಾವನೆಗಳನ್ನು