ಪುಟ:Vimoochane.pdf/೧೯೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ತೋರಗೊಡದೆ ಮಗುವಿನತ್ತ ಕೈ ಬಾಚಿದೆ. ಆದರೆ ಅದು ನನ್ನ ಮುಖ ನೋಡಿ ಅಳತೊಡಗಿತು. ಚಲಂನ ವಿರೂಪ ಮುಖಕ್ಕೇ ತೆಕ್ಕೆ ಬಿದ್ದು ರಕ್ಷಣೆ ಪಡೆಯಿತು.

ಆ ಮನೆಯತನಕ ನನ್ನನ್ನು ಕರೆದುಕೊಂಡು ಬಂದಿದ್ದವನು

ಹೊರಟು ಹೋಗಿದ್ದ. ನಾನೊಬ್ಬನೇ ಚಲಂ ಜತೆಯಲ್ಲಿ ಕುಳಿತೆ.

"ಏನು ವಿಷಯ? ಎಂದ ಚಲಂ,

ನಾನು, ಹೇಳಲು ಅನುಮಾನಿಸುವವನಂತೆ, ತೆರೆದಿದ್ದ ಒಳ

ಬಾಗಿಲಿನತ್ತ ನೋಡಿದೆ.

"ಪರವಾಗಿಲ್ಲ ಹೇಳು."

ನಾನು ನನಗೆ ದೊರೆತಿದ್ದ ಮಾಹಿತಿಯನ್ನು ಅವನ ಮುಂದಿಟ್ಟೆ.

ಆ ರಾತ್ರೆಯ ಕಾರ್ಯಕ್ರಮವನ್ನು ಇಬ್ಬರೂ ಗೊತ್ತುಮಾಡಿದೆವು.

ಒಮ್ಮೆಲೆ ಚಲಂ, ಮಗುವನ್ನು ಎತ್ತರಕ್ಕೆ ಎತ್ತುತ್ತಾ, ಮೈ

ಕೊಡವಿ ಎದ್ದು ನಿಂತ.. ಮಗು ಸದ್ದಿಲ್ಲದೆ ಇಶ್ಶಿ ಮಾಡಿತ್ತು.

"ಧೂ ಮುಂಡೇ ಗಂಡ! ಏ ಸಾವಿತ್ರಿ, ಇಲ್ನೋಡು.. ನಿನ್ನ

ಮಗ ಏನ್ಮಾಡಿದಾನೆ ನೋಡು!”

ತಮಿಳು ಮಾತು ಕೇಳಿ, ಮಗನನ್ನು ಎತ್ತಿಕೊಳ್ಳಲು ಸಾವಿತ್ರಿ

ಬಂದಳು-ಮನೆಯಡತಿ. ವಯಸ್ಸಿನಲ್ಲಿ ನನಗಿಂತ ನಾಲ್ಕು ವರ್ಷ ದೊಡ್ಡವಳಿದ್ದಿರಬೇಕು. ಮಗುವಿನದೇ ಬಣ್ಣ, ನುಣುಪಾದ ಕೇಶ 'ರಾಶಿಯೊಂದು, ಮಾಟವಾಗಿ, ನಡುವಿನಿಂದಲೂ ಕೆಳಕ್ಕೆ ಇಳಿದಿತ್ತು. ಆಕೆ ನನ್ನನ್ನು ನೋಡಿ, "ನಿನ್ನ ವಿಷಯ ಕೇಳಿ ಬಲ್ಲೆ” ಎನ್ನುವ ಹಾಗೆ ಮುಗುಳ್ನಕ್ಕಳು. ನಾನು ಸುಮ್ಮನಿರಲಾರದೆ, ನನ್ನ ಹಣೆಯ ಕೆಳಕ್ಕೆ ಇಳಿದು ಬರುತಿದ್ದ ಕಾಪನ್ನು ಬದಿಗೆ ತೀಡುತ್ತಾ ಕುಳಿತೆ.

ಚಲಂ ಬಟ್ಟೆ ಬದಲಾಯಿಸಿದ.

ಆ ಮೇಲೆ ಚಹಾ ಬಂತು.

ಅಲ್ಲಿಂದ ಇಬ್ಬರೂ ಜತೆಯಾಗಿಯೇ ಹೊರಟೆವು. ಹಾದಿ ನಡೆ

ಯುತ್ತಾ ಚಲಂ, ತನ್ನ ಮತ್ತು ಸಾವಿತ್ರಿಯ ಕತೆ ಕೇಳಿದ.

"ಹೆಸರೂ ಸಾವಿತ್ರಿ, ಗುಣದಲ್ಲೂ ಸಾವಿತ್ರಿ, ನಿನಗೆ ಗೊತ್ತಾ