ಪುಟ:Vimoochane.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಾಳ್ವೆ ನನ್ನ ಬಗ್ಗೆ ಕಟುವಾಗಿ ವರ್ತಿಸಿಕೊಂಡೀತ್ತು. ಆ ಭಾವನೆ ಸರಿ ಯಲ್ಲವೆಂದು ತೋರಿಸುವಂತಹ ಯಾವ ಸಂಬದಕ್ಕು ನಾನು ಸಿದ್ಧ ನಿರಲಿಲ್ಲ......

....ನನ್ನ ಆ ರೀತಿಯ ಮನೋವೃತ್ತಿಗೆ ಇನ್ನೂ ಒಂದು

ಕಾರಣವಿದ್ದಿರಬೀಕೂ. ಪ್ರಾಯಶಃ ಬಾಳಿನ ಜತೆಗಾತಿಯೊಬ್ಬಳಿಗಾಗಿ ನಾನು ಹಂಬಲಿಸುತಿದ್ದೆನೇನೊ. ಚಲಂ ನಡೆಸುತ್ತಿದ್ದ ಕುಟುಂಬ ಜೀವನ ನನ್ನಲ್ಲಿ ಅವ್ಯಕ್ತವಾದ ಆಗ ಹೇಳಿದ್ದರೆ, ನಾನು ಖಂಡಿತ ವಾಗಿಯೂ ನಕ್ಕುಬಿಡುತಿದ್ದೆ. ಸೋದರನಂತಿದ್ದ್ದ ಚಲಂ ವಿಷಯವಾಗಿ ನಾನು ಅಸೂಯಾಪರನಾಗುವುದೆಂದರೇನು? ನನಗಿಂತಲೂ ವಯಸ್ಸಿನಲ್ಲಿ ಬಲು ದುಡ್ದವನಾದ ಆತನ ಬಗ್ಗೆ ನಾನು ಇಂತಹ ಕಾರಣಕ್ಕಾಗಿ ಅಗೌರವ ಸೂಚಿಸುವುದೆಂದರೇನು?

ಆ ಸಂಜೆ ಮೋಡ ಕವಿದಿತ್ತು. ಮಳೆ ಬರುವ ಮುನ್ ಸೂಚನೆ.

ಹೊರಗೆ ಹೋಗಲೊ ಬೇಡವೊ ಎಂದು ಹಿಂದುಮುಂದು ನೋಡಿದೆ. ಅಂತೂ ಬಾಹ್ಯ ಜಗತ್ತಿನ ಆಕರ್ಷಣೆಗೇ ಜಯವಾಯಿತು. ಬಟ್ಟೆ ಹಾಕಿಕೊಂಡೆ.

ಹೊಸತಾಗಿ ಹೊಲಿಸಿಕೊಂಡಿದ್ದ ಆ ಗ್ಯಾಬರ್ಡೀನ್ ಸೂಟು

ನನಗೆ ಚೆನ್ನಾಗಿ ಒಪ್ಪುತಿತ್ತೆಂದು ಚಲಂ ಮತ್ತು ಉಳಿದವರೆಲ್ಲಾ ಹೇಳಿ ದ್ದರು.

"ನೀನು ನಿಜವಾಗ್ಲೂ, ಅಂದವಾದ ಬಟ್ಟೆ ಉಡೋಕೇ

ಹುಟ್ದೋನು ಶೇಖರ್. ಏನೋ ಅಪ್ಪಿತಪ್ಪಿ ಬಡವರ ಹಟ್ಟೇಲಿ ಮುಖ ತೋರಿಸ್ದೆ."

ಆ ರೀತಿ ಹೇಳಿ ಚಲಂ ನನ್ನನ್ನು ಪರಿಹಾಸ್ಯ ಮಾಡುವುದಿತ್ತು.

ಆ ಪರಿಹಾಸ್ಯದ ಜತೆಯಲ್ಲೇ ಪ್ರಾಯೋಗಿಕವಾದ ಇನ್ನೊಂದು ಮಾ ತನ್ನೂ ಅವನು ಹೇಳುತ್ತಿದ್ದ.

"ನಿನಗಿರೋ ಈ ರೂಪು ನಮ್ಮ ವೃತ್ತಿಗೆ ಎಷ್ಟೊಂದು ಅನು