ಪುಟ:Vimoochane.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ನೋಡಿದಿರಾ ರಾಧಾ? ಹ್ಯಾಗಿದೆ ತಮಾಷೆ?"

ವನಜಳಿಗೆ ತನ್ನ ತಪ್ಪು ತಿಳಿದು ಆಕೆಯ ಮುಖ ಕೆಂಪಗಾ

ಯಿತು. ನಿರ್ಲಜ್ಞನಾಗಿ ಅವಳನ್ನೆ ನೋಡಿದೆ. ಆ ಮುಖ ನಿಜವಾ ಗಿಯೂ ಸುಂದರವಾಗಿತ್ತು. ಮೇಕಪ್ ಮಾಡಿಕೊಂಡಿರಲಿಲ್ಲ. ಮುಂಗುರುಳಿನ, ಸೀರೆಯ ಸೆರಗಿನ, ಜಡೆಯ ಬಗ್ಗೆ, ಅವಳು ತೋರು. ತಿದ್ದ ಅಲಕ್ಷ್ಯ ,ಆ ಸೊಬಗಿನ ತೂಕವನ್ನು ಹೆಚ್ಚಿಸಿತ್ತು.

"ಹೊತ್ತಲ್ಲದ ಹೊತ್ತು, ಆದರೂ ಒಂದಿಷ್ಟು ಹಣ್ಣು ತಗೊಳ್ಳಿ."

ವನೂ, ಅವರಿಲ್ಲೇ ಊಟಕ್ಕೇಳ್ತಾರೆ ಕಣೇ."

ಒಲ್ಲೆ ನೆನ್ನ ಬೇಡ–ಎನ್ನುವ ಒತ್ತಾಯದ ಭಾವ ಆಕೆಯ ಕಣ್ಣು

ಗಳಲ್ಲಿತ್ತು. ಆದರೆ ನಾನೊಪ್ಪಲಿಲ್ಲ.

"ಇಲ್ಲ, ಇಲ್ಲ, ಕ್ಷಮಿಸಿ. ನಾನು ಹೋಗ್ವೇಕು."

ವನಜ ಕತ್ತು ಕೊಂಕಿಸುತ್ತ ಕೇಳಿದಳು.

ಮನೇಲಿ ಕಾದಿರ್ತಾರೇನೊ?

ನನ್ನ ಇರುವಿಕೆಯನ್ನು ತಿಳಿದುಕೊಳ್ಳುವ ಸೂಕ್ಷ್ಮ ಯತ್ನ ಅದು.

'ಕಾದಿರೋರು ಯಾರೂ ಇಲ್ಲ, ನಾನೊಬ್ನೇ ಇದೀನಿ.

ಆದರೂ ಎಂಟು ಘಂಟೆಗೆ ಬರ್ತೀನಿ ಆಂತ ಸ್ನೇಹಿತರಿಗೆ ಮಾತು ಕೊಟ್ಟಿದ್ದೆ.'

'ಒಬ್ಬನೇ ಇದ್ದ ' ನನ್ನನ್ನು ವನಜ ಅರಳುಗಣ್ಣಗಳಿಂದ

ನೋಡಿದಳು. ಊಟಕ್ಕೇಳಲಿಲ್ಲವೆಂದು ಅವಳಿಗೆ ನಿರಾಸೆಯಾಗಿತ್ತು ನಿಜ.ಆದರೂ—

“ಹೋಗ್ಲಿ, ಹಣ್ಣನಾದರೂ ತಗೊಳ್ಳಿ."

ಸೋಫದ ಮೇಲೆ ಕುಳಿತಿದ್ದ ನಾನು, ಎದುರಿಗಿದ್ದ ಆಣ್ಣ ತಂಗಿ

ಯರನ್ನು ನೋಡುತ್ತ, ನಿಧಾನವಾಗಿ ಒಂದೊಂದೆ ಹೋಳನ್ನು ತೂಗಿ. ನೋಡುತ್ತ, ತಿಂದೆ ಹಣ್ಣು ಬಲು ಸಿಹಿಯಾಗಿತ್ತು.

"ಹುಳಿಯೇನೊ? ಇಂಥ ಹಣ್ಣ ನಿಮಗೆ ಅಭ್ಯಾಸವಿದೆಯೊ

ಇಲ್ಲವೊ?"

“ಪರವಾಗಿಲ್ಲ. ತಕ್ಕ ಪಟ್ಟಿಗೆ ಚೆನ್ನಾಗಿಯೇ ಇದೆ,” ಎನ್ನುತ್ತ