ಪುಟ:Vimoochane.pdf/೨೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು
೨೦೭
ವಿಮೋಚನೆ

ಆ ಲೋಕದೊಳಗಿನ ವ್ಯವಹಾರಗಳನ್ನು ಕಾಣಲು—ಕ್ಷಣ ಕಾಲ
ವಾದರೂ ಕಾಣಲು–ನನಗೆ ಅವಕಾಶ ದೊರೆತಾಗ, ಹೃದಯ ನೋವಿ
ನಿಂದ ತತ್ತರಿಸುತಿತ್ತು. ಚಲಂ ಬಳಗದ ಆ ಸದಸ್ಯರೇ ವಾಸಿ. ಅವ
ರಿಗೆ ಯಾವ ಚಿಂತೆಯೂ ಇರಲಿಲ್ಲ. ಅವರಲ್ಲಿಬ್ಬರು ಸಂಸಾರಗಳನ್ನೇ
ಬಿಟ್ಟು ಬಂದಿದ್ದರು. ಅಂದ ಮೇಲೆ, ನಾನು ಯಾಕೆ ಈರೀತಿ ಸಂಕಟ
ಅನುಭವಿಸಬೇಕು? ಇದು, ನನಗೆ ದೊರೆತಿರುವ ಸಂಸಾರದ ಫಲವೆ?
ಸ್ವಯಂಪ್ರೇರಣೆಯಿಂದ ನಾನು ಸಂಪಾದಿಸಿದ ವಿದ್ಯೆಯ ಫಲವೆ?
ಆಕಸ್ಮಿಕವಾಗಿ ಆ ಮುರಲಿ ಕಾಣಲು ದೊರೆತ ಬಳಿಕ ಅನಿರೀಕ್ಷಿತ
ವಾಗಿ ನಡೆದ ಘಟನೆಗಳು........ ವನಜಳ ಭೇಟಿ........ ನಾಳೆ ಮತ್ತೆ....
ಸಂಜೆ ಐದು ಘಂಟೆಗೆ ಬರ್ತೀರ?"........ “ ಬರ್ತೀನಿ ”........
ನನ್ನ ಯೋಚನೆಗಳು ಸರಾಗವಾಗಿ ಏಕ ಪ್ರಕಾರವಾಗಿ ಹರಿಯು
ತ್ತಿರಲಿಲ್ಲ. ನಿದ್ದೆ ಬಲು ಪ್ರಯಾಸದಿಂದ ನನ್ನೆಡೆಗೆ ಬಂತು.
ಮರು ದಿನ ಹೊತ್ತಾರೆ ಚಲಂ ನಮ್ಮ ಮನೆಗೆ ಬಂದ.
"ಶೇಖರ್, ಒಂದು ಹತ್ತು ದಿನ ಮದ್ರಾಸಿಗೆ ಹೋಗಿರ್ತೀನಿ....
ನನ್ನಲಿರೋ ಚಿಲ್ಲರೆ ಹಣ ಖರ್ಚಿಗೆ ಸಾಲದು. ಏನಾದರೂ