ಪುಟ:Vimoochane.pdf/೨೧೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಸಾದ ಕಾಫಿ. ಮುರಲಿ ಕಾಫಿಯನ್ನು ಕುಡಿದ.

"ಬನ್ನಿ, ಲೈಬ್ರೆರಿ ತೋರಿಸ್ತೀನಿ," ಎಂದು ವನಜ ಕರೆದಳು.

ನಾನು ಅವಳನ್ನು ಹಿಂಬಾಲಿಸಿದೆ.

ಪುಸ್ತಕಗಳಿಗೋಸ್ಕರವೇ ಸಿಂಗರಿಸಿದ್ದ ವಿಶಾಲವಾದೊಂದು

ಕೊಠಡಿ. ಒಂದೇ ಒಂದು ದೊಡ್ಡ ಭಾವ ಚಿತ್ರ ಆ ಗೋಡೆಗಳನ್ನು ಅಲಂಕರಿಸಿತ್ತು. "ನಮ್ಮ ತಾಯಿ," ಎಂದಳು ವನಜ . . ನನಗೆ ತಾಯಿ ಇರಲಿಲ್ಲ ಆಕೆಯ ಭಾವಚಿತ್ರವೂ ನನ್ನಲ್ಲಿರಲಿಲ್ಲ. ತಂದೆಯ ಭಾವ ಚಿತ್ರವೂ ನನ್ನಲ್ಲಿ ಇರಲಿಲ್ಲ. ನಾನಿರುವವರೆಗೂ ನನ್ನ ಕಲ್ಪನೆ ಯಲ್ಲಿ ಅವರನ್ನು ಚಿತ್ರಿಸಿಕೊಳ್ಳಬಹುದು. ಆ ಮೇಲೆ ನನ್ನೊಡನೆ ಅವರ ಕಲ್ಪನೆಯ ಚಿತ್ರಗಳೂ ಮಣ್ಣು ಗೂಡುವುವು .........

" ಏನು ಯೋಚಿಸ್ತಿದೀರಿ ?"

"ತಾಯಿಯ ನೆನಪಾಯ್ತು."

"ಓ, ನೀವೂ ನಮ್ಮ ಹಾಗೇನೆ ಹಾಗಾದರೆ."

"ಅದಕ್ಕಿಂತ್ಲೂ ಸ್ವಲ್ಪ ಹೆಚ್ಚು. ನನಗೆ ತಂದೆಯೂ ಇಲ್ಲ."

"ಅವರೇನು ಕೆಲಸದಲ್ಲಿದ್ರು?

"

ಅವರೇನು ಕೆಲಸದಲ್ಲಿದ್ದರು? ನನ್ನ ತಂದೆಗೆ ಏನು ಕೆಲಸವಿತ್ತು ?

"ಕೆಲಸ ? ಬೊಂಬಾಯಿಯ ಒಂದು ದೊಡ್ಡ ಫರ್ಮ ನಲ್ಲಿ

ಪಾರ್ಟ್ನ‌ರ್ ಆಗಿದ್ರು. ನಾನು ಚಿಕ್ಕ ಮಗುವಾಗಿದ್ದಾಗ್ಲೇ ಆ ಊರಿಗೆ ಹೊರಟು ಹೋಗಿದ್ವಿ."

"ಸೋ ಸಾರಿ,"

ಹಾಗೆ ಸಹಾನುಭೂತಿ ತೋರಿಸಿದಳು ವನಜ. ಮೌನವಾಗಿಯೇ ಹಲವು ನಿಮಿಷಗಳು ಕಳೆದುವು. ಆದರೆ ಆ ಮೌನಕ್ಕೆ ಅರ್ಥವಿತ್ತು. ನಮ್ಮಿಬ್ಬರ ಯೋಚನೆಗಳನ್ನು ಪರಸ್ಪರ ಸಮೀಪಕ್ಕೆ ತರುವ ಸಾಮರ್ಥ್ಯ ವಿತ್ತು.

"ನಿಮ್ಮ ತಂದೆ ಒಳ್ಳೊಳ್ಳೆ ಪುಸ್ತಕಗಳನ್ನು ಕೂಡಿಸಿಟ್ಟಿದಾರೆ."

"ಅವರಿಗಿನ್ನೇನು ಕೆಲಸ ಹೇಳಿ ? ತಾಯಿ ತೀರ್ಕೊಂಡ್ಮೇಲೆ

ಹೆಚ್ಚಾಗಿ ಈ ಕೊಠಡೀಲೇ ಇರ್ತಾರೆ."