ಪುಟ:Vimoochane.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಪ್ಪಾ, ಇವರೇ ರಾಧಾಕೃಷ್ಣ......ಇವರೇನೆ ಮುರಲೀನ

ಪಾರ್ಕಿನಿಂದ ಕರೆದು ತಂದೋರು."

ಮಿಸ್ಟರ್ ರಾಧಾಕೃಷ್ಣ, ಇವರೇ ನಮ್ತಂದೆ."

ತಂದೆಯ ಪರೀಕ್ಷಕ ದೃಷ್ಟಿ ನನ್ನನ್ನು ತೂಗಿ ನೋಡುತಿತ್ತು.

ನನ್ನ ಸುತ್ತಲೂ ನಿಶ್ಚಲಭಾವಮುದ್ರೆಯ ಭದ್ರವಾದ ಕೋಟೆಯನ್ನು ರಚಿಸಿ ನಾನು ಎದ್ದು ನಿಂತು ಮುಗುಳ್ನಕ್ಕು ವಿನಯದಿಂದ ವಂದಿಸಿದೆ.

"ಕೂತಿರಿ, ಕೂತಿರಿ ಮಿಸ್ಟರ್ ರಾಧಾಕೃಷ್ಣ. ನಿಮ್ಮಿಂದ

ಬಹಳ ಉಪಕಾರವಾಯ್ತೂಂತ ಹುಡುಗರು ಆಗ್ಲೇ ವರದಿ ಮಾಡಿ ದಾರೆ."

ಲಜ್ಞೆಯಿಂದ ಮುಖ ಕೆಂಪೇರಿಸಿಕೊಂಡವರಂತೆ, “ ಅಯ್ಯೋ!

ಅದೇನು ಮಹಾ ! ಎಂದೆ.

ಅವರು ಮಗಳ ಕಡೆಗೆ ತಿರುಗುತ್ತಾ, "ಏನಮ್ಮಾ ಅತಿಥಿಗೆ

ಕಾಫಿ ತಿಂಡಿ ಆಯ್ತೋ?" ಎಂದರು.

ಓಹೋ, ಆಗಲೇ ಆಯ್ತು."

"ನನಗೇನಾದರೂ ಇಟ್ಟಿದೀರೊ?"

"ಬಾ ಪಪ್ಪ. ಬಟ್ಟೆ ಬದಲಾಯಿಸ್ಕೊ. ಕ್ಲಬ್ಬಿಗೆ ಹೋಗಲ್ವ?"

ಅವರ ತಂದೆ ಕ್ಲಬ್ಬಿಗೆ ಹೋದರು......

....ಕತ್ತಲಾಗುವ ತನಕವೂ ಅಲ್ಲಿದ್ದೆ. ಎರಡು ಪುಸ್ತಕಗಳನ್ನು

ಎತ್ತಿಕೊಂಡು ಹೊರಟ ನನ್ನನ್ನು ಬೀಳ್ಕೊಡಲು ವನಜ ಬಂದಳು. ಗೇಟಿನ ಬಳಿ ಮತ್ತೂ ಒಂದಷ್ಟು ಹೊತ್ತು ಮಾತನಾಡಿದೆವು. ಮೂರು ನಾಲ್ಕು ದಿನಗಳ ಬಳಿಕ ಮತ್ತೊಮ್ಮೆ ಬರುವ ಆಶ್ವಾಸನೆ ಯನ್ನಿತ್ತೆ.

"ಪುಸ್ತಕ ವಾಪಸು ಕೊಡೋಕೋಸ್ಕರ ಬರ್ತೀನಿ."

"ಹುಂ.....ಪುಸ್ತಕಕ್ಕೋಸ್ಕರ ಬರ್ತಿರಿ ಅಂತನ್ನಿ."

ನಾನು ನಕ್ಕೆ. ಪ್ರತ್ಯುತ್ತರವಾಗಿ ಅವಳೂ ನಕ್ಕಳು .

......ನಿಮ್ಮ ಜೀವಮಾನದಲ್ಲಿ ಎಂದಾದರೂ ನಿಮಗೆ ಈ ಹುಡುಗ-

ಹುಡುಗಿ ಪ್ರೇಮದ ಅನುಭವವಾಗಿದೆಯೊ ಇಲ್ಲವೊ ನನಗೆ ತಿಳಿಯದು.