ಪುಟ:Vimoochane.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಕಾಹಿಲೆ ಏನು ಅನ್ನೋದು ನನಗೆ ಗೊತ್ತಿದೆ.”

"ಗೊತ್ತಿದ್ದೂ ಯಾಕೆ ಹಿಂಸೆ ಕೊಡ್ತೀಯಾ?"

"ಹಿಂಸೆ?

ಅಲ್ಲಿಗೆ ಮಾತು ನಿಂತಿತು.

ಆ ಸಂಜೆ ನಾನು ವನಜಳನ್ನು ನೋಡಬೇಕಾಗಿತ್ತು, ಆದರೆ

ಮನಸ್ಸಿನ ಯಾತನೆ ನನ್ನನ್ನು ನಿಜವಾಗಿಯೂ ಕಾಹಿಲೆಯವನಾಗಿ ಮಾಡಿತು. ಈ ಪ್ರೀತಿ-ಪ್ರೇಮ-ಬಲು ಕಠಿನವಾಗಿತ್ತು. ಕತೆ ಕಾದಂಬರಿಗಳಲ್ಲಿ ನಾನು ಓದಿದ್ದ ಪ್ರೇಮದ ಪ್ರಕರಣಗಳಿಗಿಂತಲೂ ವಾಸ್ತವ ಜೀವನದ ಪ್ರೇಮ ಹೆಚ್ಚು ಕಠಿನವಾಗಿತ್ತು.

ವನಜಳನ್ನು ನಾನು ಪ್ರೀತಿಸುತಿದ್ದೆ, ಅವಳಿಗೋಸ್ಕರ ಎಂತಹ

ತ್ಯಾಗ ಮಾಡುವುದಕ್ಕೂ ಸಿದ್ಧವಾಗಿದ್ದೆ..ನನ್ನ ಬಾಳ್ವೆಯ ಕರ್ಮ ಕಥೆ ಅವಳಗೆ ತಿಳಿದಿರಲಿಲ್ಲ. ತಿಳಿಸುವ ಇಚ್ಛೆಯೂ ನನಗಿರಲಿಲ್ಲ. ಅದು ತಿಳಿದರೆ ಏನಾಗುವುದೋ ಯಾರಿಗೆ ಗೊತ್ತಿತ್ತು? ಯಾರ ಆತಂಕವೂ ಇಲ್ಲದೆ ಕನಸಿನಲ್ಲೆ ಕಟ್ಟುತಿದ್ದ ಸುಂದರ ಸೌಧವನ್ನು ನಿಷ್ಕಾರಣವಾಗಿ ಕುಸಿದು ಕೆಡವಲು ನಾನು ಬಯಸಲಿಲ್ಲ.ಆದರೂ ಅದೊಂದು ಪ್ರಶ್ನೆ ನನ್ನನ್ನು ಕಾಡುತಿತ್ತು, ಮುಂದೇನಾಗುವುದು? ಮುಂದೇನು ? ವನಜ ಹೆಚ್ಚಿನ ವಿದ್ಯಾಭ್ಯಾಸದ ಮಾತನ್ನೆ ಬಿಟ್ಟಿದಳು. ಬೇಸಗೆಯ ರಜ ಬಂದ ಮೇಲೆ ನಾವಿನ್ನು ಅಗಲಿರುವುದು ಸಾಧ್ಯವಾಗ ದೆಂದು ಅಂತಿಮ ನಿರೂಪ ಕೊಟ್ಟಿದ್ದಳು. ಆ ಅಗಲಿಕೆ ದುಸ್ಸಾಧ್ಯ ವಾಗಿದುದು ಅವಳಿಗೊಬ್ಬಳಿಗೆ ಅಲ್ಲ, ಪ್ರತಿ ದಿನವೂ ಆಕೆಯನ್ನು ಕಾಣದೇ ಇದ್ದರೆ, ಪರಸ್ಪರ ಆತುಕೊಂಡು ಕ್ಷಣ ಕಾಲ ನಿಲ್ಲದೇ ಇದ್ದರೆ, ನಾನು ಹುಚ್ಚನಾಗುತಿದ್ದೆ ....... ನಾನು ಮತ್ತು ವನಜ ಜತೆಯಾಗಿ ಜೀವನ ಮಾಡುವುದು ಸಾಧ್ಯವೆ ? ನನ್ನ ಸಹಪಾಠಿ ಶ್ರೀಕಂಠನ ಹಾಗೆ ಸಾನು ವಿವಾಹಿತನಾಗುವುದು ಸಾಧ್ಯವೆ? ಅಮಿಾರ-ಶೀಲರ ಹಾಗೆ, ಚಲಂ-ಸಾವಿತ್ರಿಯರ ಹಾಗೆ, ನಾನು ಮತ್ತು ವನಜ ಬಾಳ್ವೆನಡೆಸುವುದು ಸಾಧ್ಯವೆ?....ಇಲ್ಲ,ವನಜ ಎಂದೆಂದಿಗೂ ಶೀಲಳಾಗುವುದು ಸಾಧ್ಯ ವಿರಲಿಲ್ಲ; ಸಾವಿತ್ರಿಯಾಗುವುದು ಸಾಧ್ಯವಿರಲಿಲ್ಲ. ವನಜ ಸಂಭಾವಿತ