ಪುಟ:Vimoochane.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸದ್ಗೃಹಸ್ಥನ ಮಡದಿಯಾಗಬೇಕು-ಮಿಸೆಸ್ ಸೋ ಅಂಡ್ ಸೋ. ಹಾಗಾದರೆ, ನಾನು ಮೊದಲು ಸಂಭಾವಿತನಾಗಬೇಕು ,ಸದ್ಗೃಹಸ್ಥ ನನಾಗನಬೇಕು. ಅಂದರೆ?

....ಯೋಚನೆಗಳಿಂದ ನನ್ನ ಮೆದುಳು ಸಿಡಿಯುತಿತ್ತು. ಇದು

ಎಂದಾದರೂ ಸಧ್ಯವೆ? ನನ್ನ ಜೀವನದ ಈವರೆಗಿನ ಆಧ್ಯಾಯ ಗಳನ್ನು ಕೊನೆಗಾಣಿಸಿ, ಮತ್ತೆ ಹೊಸ ಪುಸ್ತಕದಲ್ಲಿ ಓಂ ಶ್ರೀ ಎಂದು ಆರಂಭಿಸುವುದು ಸಾಧ್ಯವೆ?

ಇದು ಆಸಂಭವವಾದುದೆಂದೇ ನನಗೆ ಹಲವೂಮ್ಮೆ ತೋರು

ತಿತ್ತು .ಆದರೆ, ಯಾಕಾಗಬಾರದು- ಈ ರೀತಿ ಯಾಕಾಗಬಾರದು -ಎಂಬ ಸಾಧ್ಯತೆಯ ಸಂದೇಹವು ಕೆಲವೊಮ್ಮೆ ನನ್ನನ್ನು ಕಾಡಿಸು ತಿತ್ತು....ಆದರೆ , ಎಂದಾದರೊಮ್ಮೆ ನನ್ನ ಗತಜೀವನ ವನಜಳಿಗೆ ತಿಳಿದಾಗ ? ನನ್ನ ಜಾತಿ ಕುಲ ಗೋತ್ರಗಳ ವಿಷಯ ತಿಳಿದಾಗ? ಹೈಸ್ಕೂಲಿನ ನಿದ್ಯಾಭ್ಯಾಸವನ್ನು ಅರ್ಧದಲ್ಲೆ ಬಿಟ್ಟು ನಾನು ಕೈ ಕೊಂಡ್ ವೃತ್ತಿಯ ಸ್ವರೂಪದ ಪರಿಚಯ ಅವಳಿಗೆ ಆದಾಗ? ಈ ಬೆಲೆ ಬಾಳುವ ಪೋಷಾಕಿನ ಒಳಗೆ ಗ್ರಹಣ ಹಿಡಿದ ಮಾನವ ಹೃದಯ ಇದೆ ಎಂಬುದು ಅವಳಿಗೆ ಅರಿವಾದಾಗ?

ಒಮ್ಮೊಮ್ಮೆ ಆ ಆಸೆಯೂ ತಲೆದೋರುತಿತ್ತು . ಈ ಪ್ರಪಂಚ

ಹುಟ್ಟದಂದಿನಿಂದ ಪ್ರೇಮಕ್ಕಾಗಿ ಪ್ರಣಯಿಗಳು ಎಷ್ಟೊಂದು ತ್ಯಾಗ ಮಾಡಿಲ್ಲ? ನನ್ನ ನಿಜ ಸ್ಥಿತಿ ತಿಳಿದ ಮೇಲು ವನಜ ನನ್ನನ್ನು ಪ್ರೀತಿಸಲಾರಳು ಎನ್ನುವುದಕ್ಕೆ ಆಧಾರವೇನಿದೆ? ನನ್ನ ಕನಸು ಆಗ ಒಡೆದು ಚೂರಾಗಬಹುದೆಂದು ನಾನು ಶಂಕಿಸುತ್ತಿರುವುದು ಪ್ರಾಯಶಃ ತಪ್ಪಲ್ಲವೆ?

ಆದರೆ ಚಲಂ ನನ್ನನ್ನು ಸುಲಭವಾಗಿ ಬಿಟ್ಟುಕೊಡುವ ಹಾಗಿರ

ಲಿಲ್ಲ. ಮಂತ್ತೊಂದು ಸಂಜೆ ಅವನು ನನ್ನನ್ನು ತಡೆ ಹಿಡಿದ

"ಶೇಖರ್, ನಿನಗೆ ಹಿತವಾಗ್ಬೇಕೂಂತ್ಲೇ ನನ್ನ ಮನಸ್ನಲ್ಲಿ

ರೋದು . ನೀನು ಹೆಣ್ಣಿನ ಸಮೀಪ ಹೋಗಕೂಡದು ಅಂತ ಹೇಳೋ ದಿಕ್ಕೆ ನಾನು ಯಾರು? ನಾವು ಸನ್ಯಾಸಿಗಳು ಅಂತ ನಾನು ಯಾವತ್ತೂ