ಪುಟ:Vimoochane.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

" ಮೈ ಚೆನ್ನಾಗಿಲ್ವೆ ರಾಧಾ ?"

" ಹೂಂ. ಅದಕ್ಕೇ ನಾಲ್ಕು ದಿವಸ್ದಿಂದ ಬರಲಿಲ್ಲ."

ಆಕೆ ನನ್ನ ಕೈ ಮುಟ್ಟಿ ನೋಡಿದಳು; ಹಣೆಯ ಮೇಲೆ ತನ್ನ

ಕೈಯನ್ನಿಟ್ಟಳು.

"ಇಲ್ಲ ವನಜ, ಈಗ ಚೆನ್ನಾಗಿದೀನಿ."

"ನಾನೊಂದು ಪ್ರಶ್ನೆ ಕೇಳಲಾ ರಾಧಾ?"

"ಕೇಳು."

"ನೀನು ನಿಜವಾಗ್ಲೂ ನನ್ನ ಪ್ರೀತಿಸ್ತೀಯಾ?"

"ನೀನು ನಿಜವಾಗ್ಲೂ ನನ್ನ ಪ್ರೀತಿಸ್ತೀಯಾ?"

"ಅದು ನಾನು ಕೇಳಿದ ಪ್ರಶ್ನೆ."

" ಗೊತ್ತು. ನನ್ನ ಉತ್ತರವು ನಿನ್ನ ಪ್ರಶ್ನೇಲೇ ಇದೆ."

ವನಜ ಸೋಲನ್ನೊಪ್ಪಿಕೊಂಡಳು.ಆದರೆ ಆಕೆಯ ಬತ್ತಳಿಕೆ

ಬರಿದಾಗಿರಲಿಲ್ಲ.

"ನೀನು ಯಾತಕ್ಕೋಸ್ಕರ ನನ್ನ ಪ್ರೀತಿಸ್ತೀಯಾ?"

"ನಿನ್ನ ಪ್ರಶ್ನಯೇ ನನ್ನ ಉತ್ತರ."

"ಹೋಗಪ್ಪ."

ಕೃತಕವಾದ ಮುನಿಸು ಅವಳ ರೂಪಕ್ಕೆ ಶೋಭೆ ಕೊಟ್ಟತು.

"ನೀನು ಎಷ್ಟೊಂದು ಸುಂದರಿ ವನಜ !"

ಗಾಳಿಗೆ ಹಾರಾಡುತ್ತಿದ್ದ ಅವಿಧೇಯವಾದ ಮುಂಗುರುಳನ್ನು

ಹತೋಟಿಗೆ ತರುತ್ತಾ ವನಜ ಹೇಳಿದಳು.

"ನಾಳೆ ದಿವಸ ಮುದುಕಿಯಾಗಿ ಕೂದಲು ನರೆತು ಮುಖ

ಸುಕ್ಕು ಗಟ್ಟಿದಾಗ?"

"ಆಗ ಡೈವೋ‍ಸ್‌‌ ಮಾಡ್ಕೊಂಡು ಬಿಡ್ತೀನಿ."

"ಥೂ!"

ಹಾಗೆ ಮಾತನಾಡುತ್ತಾ ಹೃದಯದ ನೋವನ್ನು ಮರೆಯಲು

ನಾನು ಯತ್ನಿಸುತ್ತಿದ್ದೆ. ಆದರೂ ಮನದ ಅವಧಿಯಲ್ಲೆಲ್ಲಾ ನೋವು ಮರುಕಳಿಸುತ್ತಿತ್ತು.