ಪುಟ:Vimoochane.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಳುಕುತ್ತ ಆಳುಕುತ್ತ ನಾನು ಆ ಪ್ರಶ್ನೆ ಕೇಳಿದೆ.

"ವನಜ, ನಾಳೆಯೊಂದು ದಿನ ನಾನು ಭಿಕಾರಿಯಾದರೆ?

ನಿರುದ್ಯೋಗಿಯಾದರೆ?"

"ಎಷ್ಟು ಅಸಹ್ಯವಾದ ಮಾತು ಆಡ್ತೀಯಪ್ಪ!"

ಯೋಚನೆಯಿಂದ ನನ್ನ ಮುಖ ಬಾಡಿತು.ಅಂತಹ ಮಾತು

ಆಕೆಗೆ ಅಸಹ್ಯವಾಗಿತ್ತು---ಅಲ್ಲವೇ? "ನೀನು ಏನೇ ಆದರೂ ನನ್ನ ಪಾಲಿನ ರಾಧಾ," ಎಂಬ ಉದ್ಗಾರ ಅವಳಿಂದ ಹೊರ ಬೀಳಲಿಲ್ಲ-- -ಅಲ್ಲವೇ?

" ಬಾ ರಾಧಾ. ಐಸ್ ಕ್ರೀಮ್ ಮಾಡ್ಸಿದೀನಿ. ನಂದೇ

ಮೇಲ್ವಿಚಾರಣೆ. ಮುರಲಿ ಇನ್ನೂ ಮನೆಗೆ ಬಂದಿಲ್ಲ. ಬಾ."

ನಾವು ಒಳ ಹೋದೆವು ಚಮಚ ಐಸ್ ಕ್ರೀಮನ್ನು ಎತ್ತಿ

ಬಾಯಿಯ ಬಳಿ ತಂದಿತು. ನವುರಾಗಿ ಬರುತ್ತಿದ್ದ ಬಾದಾಮಿಯ ಆ ಸುವಾಸನೆ.....ಇಪ್ಪತ್ತು ವಷ‌‍ಗಳ ಹಿಂದೆ, ತಂದೆಯೂ ನಾನೂ ಯಾರದೋ ಮನೆಯ ಹೊಲಸು ಜಗಲಿಯ ಮೇಲೆ ಮಲಗಿ, ಬಡವರ ಬಾದಾಮಿಯಾದ ಕಡಲೆಕಾಯಿ ತಿಂದಿದ್ದೆವು.

"ಏನು ಯೋಚನೆ ರಾಧಾ?"

ನನ್ನ ಹುಬ್ಬು ಗಂಟಿಕ್ಕಿದ್ದರೂ ಮುಗುಳ್ನಗಲು ಯತ್ನಿಸಿದೆ.

ಪಕ್ಕದಲ್ಲೇ ಕುಳಿತಿದ್ದ ಅವಳು ಕುರ್ಚಿಯನ್ನು ನನ್ನ ಬಳಿಗೆ ಸರಿಸಿದಳು. ಚಮಚವನ್ನು ಕೆಳಗಿಟ್ಟು ಬದ್ರವಾಗಿ ನನ್ನ ಬಲಗೈಯನ್ನು ಹಿಡಿದು ಕೊಂಡಳು. ನನ್ನೆದೆ ಡವಡವನೆ ಹೊಡೆದುಕೊಂಡಿತು. ನಾನು ಈ ವನಜಳಲ್ಲಿ ಅಪಾರ ವಿಶ್ವಾಸವಿಟ್ಟಿದ್ದೆ. ನನ್ನ ಹೃದಯದ ಎಲ್ಲವನ್ನೂ ಅವಳಿಗಾಗಿ ಅಪಿಸಿದೆ. ನಾನಿನ್ನೂ ಏಕಾಕಿಯಾಗಿ ಇರುವುದು ಸಾಧ್ಯ ವಿರಲಿಲ್ಲ. ನನ್ನಲ್ಲಿ ಸುಪ್ತವಾಗಿದ್ದ ಮಧುರ ಭಾವನೆಗಳಿಗೆಲ್ಲಾ ಆಕೆ ಜೀವ ತುಂಬಿದ್ದಳು--ನನ್ನನ್ನು ಹೆಚ್ಚು ಮಾನವೀಯವಾಗಿ ಮಾಡಿದ್ದಳು.

ಕ್ಷಣಕಾಲ ಆಕೆ ಕೈ ಬಿಗಿ ಹಿಡಿದೇ ಇದ್ದಳು. ಅವಳ ಮಡಿಲಲ್ಲಿ

ಮುಖವಿಟ್ಟು ಅಳಬೇಕೆಂದು ತೋರಿತು. ಗಂಟಲು ಗೊರಕ್ ಎಂದು ಸದ್ದು ಮಾಡುತ್ತಿತ್ತು. ಆದರೆ ಸ್ವರ ಹೊರಡುತ್ತಿರಲಿಲ್ಲ. ಕುತ್ತಿಗೆಯ