ಪುಟ:Vimoochane.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನರಗಳು ಬಿಗಿದು ಬಂದಿದ್ದುವು.

ಆಕೆ ಒಮ್ಮೆಲೆ ನನ್ನ ಕೈ ಬಿಟ್ಟು ಸ್ವಲ್ಪ ದೂರ ಸರಿದಳು. ಅಂತ

ರ್ಮುಖಿಯಾಗಿದ್ದ ನಾನು ಅವಳ ಭಾವನೆಗಳನ್ನು ತಿಳಿದುಕೊಳ್ಳಲು ಸಮರ್ಥನಾಗಿರಲಿಲ್ಲ. ಮೌನವಾಗಿ ನಾವು ಕುಳಿತೆವು. ಐಸ್ ಕ್ರೀಮ್ ನಮ್ಮನ್ನೆ ಕನಿಕರದಿಂದ ನೋಡುತ್ತಲಿತ್ತು.

"ಇಷ್ಟವಿಲ್ದಿದ್ರೆ ಏಳ್ಬಾರ್ದ ? ... ಲೈಬ್ರೆರಿಗಾದರೂ ಹೋಗೋಣ."

ಆ ಮಾತು, ಆದರಲ್ಲಿದ್ದ ಬೇಸರದ ಆಸೆಯ ಧ್ವನಿ ,ನನಗೆ

ಅರ್ಥವಾದವು.

ಆದರೆ--?

ನನ್ನ ಪಾಲಿಗೆ ಪ್ರೀತಿ ಆಟದ ವಸ್ತುವಾಗಿರಲಿಲ್ಲ. ಪ್ರೀತಿಯ

ಪ್ರೇಮದ ಆಸರೆಯಲ್ಲಿ, ಬರಡಾಗಿದ್ದ ನನ್ನ ಬಾಳ್ವೆಯನ್ನು ಹಸನು ಗೊಳಿಸಲು ನಾನು ಬಯಸಿದ್ದೆ. ಬಹಳ ದಿನಗಳಿಂದ ನಾನು ಇದಿರು ನೋಡುತಿದ್ದ ಪ್ರಥಮ ಚುಂಬನ....ಎರಡು ಹೃದಯಗಳು ಒಂದಾಗಿ ಎರಕ ಗೊಂದುದಕ್ಕೆ ಸಾಕ್ಷ್ಯವಾದ ಪ್ರಥಮ ಆಲಿಂಗನ....ಯಾವ ನಿಮಿಷಬೇಕಾದರೂ ಅದು ನನ್ನದಾಗುತಿತ್ತು. ಆದರೆ ಯೌವನದ ಬರಿಯ ಹುಚ್ಚಾಟವಾಗಿ ಅದನ್ನು ನಾನು ಬಯಸಲಿಲ್ಲ. ಜೀವನದ ನಿರಂತರ ಪಯಣದ ಮೊದಲ ಮಹಾ ಸಂಭವವಾಗಿ ಅದು ನನಗೆ ಬೇಕಾಗಿತ್ತು.

ನಾನು....ನನ್ನ ಬಾಳ್ವೆ....ಭೂತಕಾಲ, ವರ್ತಮಾನ ಕಾಲ

ಮತ್ತು ಭವಿಷ್ಯತ್ಕಾಲ.

ವನಜ ಮತ್ತು ನನ್ನ ಜೀವನ ಪ್ರವಾಹಗಳ ಮಹಾ ಸಂಗಮ

ಸಾಧ್ಯವೆ?

ಮನಸ್ಸಿನ ದೇಹದ ಬಯಕೆಗಳು ವನಜಳಿಗಷ್ಟೇ ಅಲ್ಲ, ನನಗೂ

ಇದ್ದುವು. ಆದರೆ ಅವು ಈಡೇರಬೇಕಾದ ರೂಪುಗೊಳ್ಳಬೇಕಾದ ಬಗೆ?

.........ನಾನು ಮತ್ತು ವನಜ ಲೈಬ್ರೆರಿಗೆ ಹೋದೆವು. ಮುದ್ದಾ

ಗಿದ್ದ ಅವಳ ಎರಡು ಅಂಗೈಗಳನ್ನೂ ಎತ್ತಿ, ಅವುಗಳಿಂದ ನನ್ನ ಮುಖ