ಪುಟ:Vimoochane.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಧ್ಯವಾಗಲಿಲ್ಲ. ನಿರೀಕ್ಷಿಸದೇ ಇದ್ದೊಂದು ಘಟನೆ ಸಂಭವಿಸಿ ನನ್ನನ್ನು ಕಾತರಕ್ಕೆ ಗುರಿಮಾಡಿತು.

ಒಂದು ಸಂಜೆ, ನಮ್ಮೂರಿನ ಪ್ರಮುಖ ವಜ್ರ ವ್ಯಾಪಾರಿ

ಯೊಬ್ಬನ ಮಗನು ನಾಪತ್ತೆಯಾಗಿರುವನೆಂಬ ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾಯಿತು.ವಿಹಾರಕ್ಕೆಂದು ಕಾರಿನೊಡನೆ ಹಿಂದಿನ ಸಂಜೆ ಹೋದವನು ವಾಪಸು ಬಂದಿರಲಿಲ್ಲವಂತೆ. ಅದನ್ನು ಕುರಿತು ತುಸು ಯೋಚಿಸಿದೆನಾದರೂ ವನಜಳ ನೆನಪು ಉಳಿದುದೆಲ್ಲವನ್ನೂ ತೊಡೆದು ಹಾಕಿತು.

ಮರುದಿನ ಸಂಜೆ ಅದೇ ಪತ್ರಿಕೆಯಲ್ಲಿ ವಾರ್ತೆ ಬಂತು. ಹುಡುಗ

ಊರ ಹೊರಗೆ ಹತ್ತು ಮೈಲುಗಳಾಚೆ ಗಾಯಗೊಂಡು ಬಿದ್ದಿದ್ದ. ಧಾವಿಸುತ್ತಿದ್ದ ಕಾರಿನಿಂದ ಉರುಳಿಬಿದ್ದು ಗಾಯವಾಗಿತ್ತು. ರಕ್ತ ಕೋಡಿ ಕಟ್ಟಿ ಹರಿದು ಪ್ರಜ್ನಾಹೀನನಾಗಿದ್ದ. ಅವನ ಜೀವ ಆಸ್ಪತ್ರೆ ಯಲ್ಲಿ ಬದುಕು ಸಾವುಗಳ ನಡುವೆ ತೂಗಾಡುತಿತ್ತು.

ಮೂರನೆಯ ದಿನ ಸಂಜೆಯ ಪತ್ರಿಕೆ ನೋಡಿ ನನ್ನ ಹೃದಯ

ಸ್ವಲ್ಪ ಹೊತ್ತು ಹೊಡೆತ ನಿಲ್ಲಿಸಿತು. ಮದರಾಸಿನಲ್ಲಿ ಕಾರನ್ನು ಮಾರಲೆತ್ನಿಸುತಿದ್ದಾಗ ಚಲಂನನ್ನು ಹಿಡಿದಿದ್ದರು. ಇತ್ತ ಆ ಹುಡುಗ ಸತ್ತಿದ್ದ.

ಹಾಗೆಲ್ಲ ಸುಲಭವಾಗಿ ಎಡವಿ ಬೀಳದ ಹಳೆಯ ಹುಲಿ ಚಲಂಗೆ

ಆ ದುರವಸ್ಥೆ ಒದಗಿತ್ತು.

ರಾತ್ರೆ ಕಳೆದು ಬೆಳಗಾಗುವ ಹೊತ್ತಿಗೆ ಚಲಂ ಬಳಗದವನೊಬ್ಬ

ಸಾವಿತ್ರಿಯೊಡನೆ ನಮ್ಮ ಮನೆಗೆ ಬಂದಿದ್ದ. ಕೈ ಹಿಡಿದ ಹೆಣ್ಣಿಗಿಂತಲೂ ಹೆಚ್ಚಾಗಿ ಸಾವಿತ್ರಿ ಅಳುಮೋರೆ ಹಾಕಿದಳು.

"ಏನಾದರೂ ಮಾಡಿ ಅವರ್ನ ಬಿಡಿಸ್ಕೊಂಡು ಬರಬೇಕಪ್ಪ."

"ಹೂನಕ್ಕ."

"ಹಣದ ಯೋಚ್ನೆ ಮಾಡಬಾರ್ದು."

"ಇಲ್ಲಕ್ಕ. ಈಗ್ಲೇ ಹೊರಡ್ತೀನಿ."

ಆಕೆ ಕೊರಳ ಹಾರ ಕೈಬಳೆಗಳನ್ನು, ತೆಗೆದು ಕಟ್ಟಿಕೊಂಡೆ