ಪುಟ:Vimoochane.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಡಿಫೆನ್ಸ್‌‌ಗೆ ನಿಮ್ಮನ್ನ ಗೊತ್ಮಾಡ್ಭೇಕೂ೦ತ ಚಲ೦ ಹೇಳಿ ಕಳ್ಸಿ

ದಾರೆ."

ಅವರ ಸ್ವರದಲ್ಲಿ ಕೃತಕ ಕಾಠಿನ್ಯ ಬೆರೆತುಕೊ೦ಡಿತು:

"ಪಾತಕಿಗಳ ಡಿಫೆನ್ಸ್ ನಾನು ಮಾಡೋದಿಲ್ಲ."

"ಪೋಲೀಸರಿನ್ನೂ ಆರೋಪ ಕೂಡಾ ಹೊರಿಸಿಲ್ಲ. ನೀವು

ತೀಪೇ೯ ಕೊಡ್ತಾ ಇದೀರಲ್ಲ ಸಾರ್."

ಅವರ ಕಿವಿಗಳು ಕೆ೦ಪಗಾದುವು.

"ಇದ್ದೀತು....ಈಗ ನೀವು ಹೋಗ್ಬಹುದು."

ನಾನೆದ್ದು ನಿ೦ತು, ಕೊನೆಯ ಬಾಣವನ್ನೆ ಸೆದೆ.

"ಡಿಫೆನ್ಸ್ ವೆಚ್ಚಕ್ಕೆಲ್ಲಾ ನಾನೇ ಜವಾಬ್ದಾರ. ಎಷ್ಟಾದರೂ

ಸರಿಯೆ. ನೊಡಿ, ನಿಮಗಿಷ್ಟವಿಲ್ಲವಾದರೆ ಬೇರೆ ಎಲ್ಲಿಗಾದರೂ ಹೋಗ್ತೀನಿ."

ಫೈಲುಗಳನ್ನು ಬದಿಗೆ ಸರಿಸುತ್ತಾ ಅವರೆ೦ದರು;

"ಸೆಷನ್ಸ್ ಮುಗಿಯೋವರೆಗೂ ಹತ್ತು ಸಾವಿರ ಕೊಡ್ತೀರೋ."

"ಆಗಲಿ, ಕ೦ತುಗಳಲ್ಲಿ ಹಣ ತಗೊಳ್ಳಿ. ಚಲ೦ನನ್ನ ಪಾರು

ಮಾಡಿ."

"ಪ್ರಯತ್ನ ಮಾಡೋಣ."

"ಇನ್ನೊ೦ದು ವಿಷಯ. ಬಹಿರ೦ಗವಾಗಿ ನನಗೂ ಈ

ಡಿಫೆನ್ಸ್ ಗೂ ಸ೦ಬ೦ಧವಿಲ್ಲ."

"ಅಥ೯ವಾಯ್ತು."

ಹತ್ತರ ಐವತ್ತು ನೋಟೂಗಳನ್ನು ಅವರ ಮೇಜಿನ ಮೇಲಿಟ್ಟೆ.

ಆಗ ಯುವಕ ವಕೀಲರು ಹಸನ್ಮುಖರಾದರು.

"ಆಗಲಿ ಮಿಸ್ಟರ್ ಕೇಶವ್ ನಾಳೆ ಲಾಕಪ್ನಲ್ಲಿ ಚಲ೦ನ ಭೇಟಿ

ಯಾಗ್ನೀನಿ."

ಬಳಗದವನೊಬ್ಬ ನೋಡಿ ಬ೦ದ. ಬೇಡಿ ತೊಡಿಸಿ ಕಟ್ಟಿ

ಚಲ೦ನನ್ನು ನಮ್ಮೂರಿಗೆ ಕರೆದು ತ೦ದಿದ್ದರು. ಆ ಹಗಲು ಬಲು ಮೆಲ್ಲನೆ ಕಳೆಯಿತು.