ಪುಟ:Vimoochane.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾತ್ರೆ ಆ ವಕೀಲರು ಹೇಳಿದರು:

"ನೋಡಿ ಕೇಶವ್. ನಿಮ್ಮ ಸ್ನೇಹಿತರು ಚೆನ್ನಾಗಿದ್ದಾರೆ. ನೀವು ಬ೦ದಿದ್ದ ವಿಷಯ ಹೇಳ್ಡೆ."

"ಯಾರೂ೦ತ ಅವರಿಗೆ ಗೊತ್ತಾಯ್ತೆ ಸಾರ್?"

"ಯಾಕೆ?"

"ಸುಮ್ನೆ ಕೇಳ್ದೆ,ಅಷ್ಟೆ."

ಕೇಶವ ಎ೦ದರೂ ಚಲ೦ಗೆ ಗೊತ್ತಾಗಿತ್ತು.

ವಕೀಲರು ಇನ್ನೊ೦ದು ವಿಷಯ ಹೇಳಿದರು:

"ಇದು ಚಿಲ್ಲರೆ ಕೇಸಲ್ಲ.ಅದರಲ್ಲಿ ಸೋತರೆ ನನಗೆ ಕೆಟ್ಟ ಹೆಸರು ಬರುತ್ತೆ. ಸೀನಿಯರ್ ಲಾಯರೊಬ್ಬರ ಸಹಾಯ ತಗೋತೀನಿ."

"ಹಾಗೇ ಮಾಡಿ."

"ನಾಳೆ ಇಲ್ಲಿಗೆ ಬರೋ ಬದುಲು ನಮ್ಮನೇಗೆ ಬನ್ನಿ."

ಅವರು ಮನೆಯ ವಿಳಾಸಕೊಟ್ಟರು.

ಆ ಮರುದಿನ,ನನ್ನ ಜೀವನದ ನಾವೆಯನ್ನೇ ತಿರುಗಿಸುವ ಚುಕ್ಕಾಣಿಯಾಗಲಿತ್ತೆ೦ಬ ವಿಷಯ ಯಾರಿಗೆ ಗೊತ್ತಿತ್ತು?

ವಕೀಲರ ಮನೆ ಸಮೀಪಿಸಿದಾಗ ಎ೦ಟು ಘ೦ಟೆ ಹೊಡೆದಿತ್ತು. ಅಲ್ಲಿ ಕಾಲ್ ಬೆಲ್ಲಿರಲಿಲ್ಲ. ಅವರ ಅವಶ್ಯತೆಯೇ ಇಲ್ಲದ೦ತೆ ಆಫೀಸು ಕೊಠಡಿ ತೆರೆದೇ ಇತ್ತು.ಯಾರೋ ಒಬ್ಬರು ಬಾಗಿಲಿಗೆ ಬೆನ್ನು ಹಾಕಿ ಕುಳಿತಿದ್ದರು.ಆ ಬಿಳಿಗೂದಲು--ನಾನು ಗಾಬರಿಯಾಗಿ ಹಿ೦ತರು ಗಲು ಅಣಿಯಾಗಿದ್ದೆ.ವನಜಳ ತ೦ದೆಗೆ ಅ೦ಥದೇ ಕ್ರಾಪು ಇತ್ತಲ್ಲವೆ? ಆತ ಈ ಯುವಕ ವಕೀಲರ ಸ್ನೇಹಿತನಾಗಿರಬಹುದೆ೦ಬ ವಿಷಯ ನನ್ನ ಗಮನಕ್ಕೆ ಬರದೇ ಹೋಯಿತಲ್ಲ....ಆದರೆ ಅವರು ತಿರುಗಿನೋಡಿಯೇ ನೋಡಿದರು.ಹೀಗಿದ್ದರೂ ನಾನು ಹೊರಟು ಬಿಡಬಹುದಾಗಿತ್ತು. ನನ್ನ ಹಿ೦ಬದಿಯಿ೦ದ "ಹಲೋ ಬನ್ನಿ" ಎನ್ನುತ್ತ ಯುವಕ ವಕೀಲರು ಬರದೇ ಇದ್ದಿದ್ದರೆ,ನಾನು ಹೊರಟೇ ಬಿಡಬಹುದಾಗಿತ್ತು.

ಉಡುಗಿಹೋಗಿತ್ತು ನನ್ನ ಜ೦ಘಾಬಲ. ನಾನು ತೊದಲಿದೆ:

"ಕಮಿಸಿ ಸಾರ್.ಈಗ ಬಿಡುವಿಲ್ಲ.ನಾಳೆ ಬತೀ೯ನಿ."