ಪುಟ:Vimoochane.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊರಗೆ ಎಲ್ಲವೂ ಶಾಂತವಾಗಿತ್ತು. ಆದರೆ ಒಳಗೆ, ನನ್ನೊಳಗೆ, ಗುಡುಗು ಮಿಂಚುಗಳು ಆರ್ಭಟಿಸುತಿದ್ದುವು. ಹೃದಯ ಸೀದು ಹೋಗುತಿತ್ತು ಬಾರಿ ಬಾರಿಗೂ.

ಆ ರಾತ್ರಿ ನನಗೆ ನಿದ್ದೆ ಹತ್ತಲೇ ಇಲ್ಲ. ನಾನು ಮಾಧವ ರಾಯರ ಮನೆ ಬಿಟ್ಟ ಮೇಲೆ ಅಲ್ಲಿ ನಡೆದಿರಬಹುದಾದ ಸಂಭಾಷಣೆ; ಆ ಬಳಿಕ ವನಜಳ ಮನೆಯಲ್ಲಿ ತಂದೆ ಮಕ್ಕಳ ಮಾತುಕತೆ;..... ಇಲ್ಲ, ಯವೂದನ್ನೂ ಊಹಿಸಿಕೊಂಡು ಯೋಚಿಸುದು ನನ್ನಿಂದಾಗ ಲಿಲ್ಲ. ಮೆದುಳು ಚೀಂಯ್ ಗುಡುತಿತ್ತು. ಅದು ಎಚ್ಚರವೊ ನಿದ್ರಾ ವಸ್ಥೆಯೊ ನನಗೆ ತಿಳಿಯದು.

.....ಮತ್ತೆ ಸೂರ್ಯೋದಯ, ಹೊಂಬಿಸಿಲು, ಬಿಸಿಲು.

"ಸಾರ್..."

ನನ್ನ ಸ್ವರ ನಡುಗುತಿತ್ತು. ನಾನು ಮಾಧವರಾಯರ ಮನೆ ಸೇರಿದ್ದೆ.

ಕಂಡೂ ಕಾಣದ ಹಾಗೆ ಮುಗುಳ್ನಗುತ್ತ ಅವರೆಂದರು:

"ನಮಸ್ಕಾರ ಮಿಸ್ಟರ್ ಕೇಶವ್ ಉರುಫ್ ರಾಧಾಕೃಷ್ಣ್. ಆಭಿನಂದನೆಗಳು. ನೀವು ಇಷ್ಟು ಸಾಹಸಿ ಆಂತ ಗೊತ್ತಿರಲೀಲ್ಲ."

ನನಗೆ ಬೇಕಾಗಿದ್ದ ಉತ್ತರಕ್ಕಾಗಿ ನಾನು ಅವರ ಮುಖವನ್ನೆಲ್ಲ ಹುಡುಕುತಿದ್ದೆ.

"ಹೋಗಲಿ ಬಿಡಿ. ಅವರವರ ಕಷ್ಟ-ಸುಖ ಅವರವರಿಗೆ." ತತ್ವಜ್ಜಾನಿಯ ಹಾಗೆ ಅವರು ಆಡಿದ ಮಾತು ಅರ್ಥವಾಗಲಿಲ್ಲ. "ಶ್ರೀನಿವಾಸಯ್ಯ ಏನೆಂದರು ಸಾರ್?" "ಅನ್ನೋದೇನು? ನೀವು ನನ್ನ ಕಕ್ಸಿದಾರರಲ್ಲದೇ ಇರುತಿದ್ದರೆ, ಹಿಡಿದು ಪೋಲೀಸರಿಗೆ ಕೊಡುತ್ತಿದ್ದರು."

"ದಿಗಿಲು ಬೀಳ್ಬೇಡಿ.ನನಗೋಸ್ಕರ ಅವರು ಅಂಥಾದ್ದು ಮಾಡೋಲ್ಲ."

ನನ್ನ ತುಟಿಗಳು ಚಲಿಸುತಿದ್ದುವು. ಅದರೆ ನಾನು ಮಾತನಾ