ಪುಟ:Vimoochane.pdf/೨೩೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಡುತ್ತಿರಲಿಲ್ಲ. ಆ ಬಳಿಕ ಮಾಧವರರಾಯರೊಂದು ಮಾತು ಹೇಳಿ ದರು

"ನಿಮ್ಮ ಒಳ್ಳೇದಕ್ಕೆ ಹೇಳ್ತೀನಿ ಕೇಶವ. ಇನ್ನು ನೀವು ಆವರ ಮನೆಗೆ ಕಾಲಿಡ್ಬೇಡಿ."

ನಾನು ಆ ಮೇಲೆ ಶ್ರೀನಿವಾಸಯ್ಯ ನವರ ಮನೆಗೆ ಕಾಲಿಡಲಿಲ್ಲ. ಆದರೆ ವನಜಳನ್ನು ಕಾಣಲು ಯತ್ನಿಸಿದೆ. ನೀರು, ಮೂಗು ಕಿವಿ ಗಳನ್ನು ಹೂಗುತಿದ್ದರೂ ಆಸೆಯಿಂದ ನಾನು ಸಿಳಿಸಿಳಿ ಕಣ್ಣು ಬಿಡು ತಿದ್ದೆ. ನನ್ನ ಪಾಲಿನ ದೇವಿಯಾಗಿ ಬಂದಿದ್ದ ಹೃದಯದ ಸಿರಿಸಂಪತ್ತು ಅಷ್ಟು ಬೇಗನೆ ಮಾಯವಾಗುವುದೆಂದು ನಾನು ನಂಬಿರಲಿಲ್ಲ.

ಆ ಸಂಜೆ ಆರು ಘಂಟೆಗೆ ಅವಳನ್ನು ನಗರದ ಉದ್ಯಾನವನಕ್ಕೆ ಬರಹೇಳಿದೆ. ಎಲ್ಲವನ್ನೂ ಹೃದಯ ತೆರೆದು ಹೇಳಬೇಕು; ನನ್ನ ಬಾಳ್ವೆಯ ಹೊಸ ಆಧ್ಯಾಯದ ಓಂ ಶ್ರೀಯನ್ನು ಆವಳಿಂದ ಬರೆಸ ಬೇಕು; ಅವಳ ಮಡಿಲಲ್ಲಿ ಮುಖವಿಟ್ಟು ಎಲ್ಲ ವನ್ನೂ ಮರೆಯಬೇಕು; ಕತ್ತಲಾದ ಮೇಲೆ ಅವಳ ತೋಳ ತೆಕ್ಕೆಯಲ್ಲಿ ಮೈಮರೆತು ಸಮಾಧಿ ಸ್ಥನಾಗಬೇಕು--ಎಂಬುದು ನನ್ನ ನಿರ್ಧಾರವಾಗಿತ್ತು.

ಆ ಕಲ್ಲು ಬೆಂಚು. ಅಲ್ಲಿಯೇ ಆರು ತಿಂಗಳ ಹಿಂದೆ ನಾನು ಮುರಲಿಯನ್ನು ಕಂಡಿದ್ದೆ. ಆ ಬಳಿಕ ವನಜಳನ್ನು....

ಆದೇ ಬೆಂಚಿನ ಮೇಲೆ ನನು ಕುಳಿತು ಸಿಗರೇಟಿಗೆ ಕೈಹಾಕಿದೆ. ಹಿಂದೊಮ್ಮೆ ವನಜ ಕೇಳಿದ್ದಳು:

"ನೀವು ಪ್ಲೇಯರ್ಸ ಯಾಕೆ ಸೇದ್ತೀರಾ? ಗೋಲ್ಡ್ ಪ್ಲೇಕ್ ಮೇಲಲ್ವಾ?" ಅದು 'ನೀವು' 'ನೀನು' ಆದುದಕ್ಕೆ ಮುಂಚೆ. ಆ ಮೇಲೆ ಅವಳೇ ಹೇಳಿದ್ದಳು:

"ಒಂದ್ಸಾರಿ ನಾನೂ ಸೇದ್ಬೇಕು. ಹೇಗಿರತ್ತೋ ನೋಡ್ಬೇಕು."

ಹಾಗೆ ಹೇಳಿದಾಗ, ಮಾದಕತೆ ಅವಳ ಕಣ್ಣಾಲ್ಲಿಗಳಲ್ಲಿ ತೇಲಿ ಬಂದಿತ್ತು....ಎಷ್ಟು ಕಠಿನ! ಈ ಬಾಳ್ವೆ ಎಷ್ಟೊಂದು ಕಠಿನ!