ಪುಟ:Vimoochane.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿರ್ಮಲವಾದ ಆಕಾಶ, ನೆಮ್ಮದಿ ಇಲ್ಲದ ನನ್ನ ಹೃದಯವನ್ನು ನೋಡಿ ನಗುತಿತ್ತು. ಸದ್ಯಃ ಮಳೆ ಬರಲಾರದು....ಓ ದೇವರೇ, ಸದ್ಯಃ ಮಳೆ ಬಾರದಿರಲಿ....

ದೇವರು ? ಎಲ್ಲವೂ ನನ್ನ ಕೈತಪ್ಪಿ ಹೋಗುತಿದ್ದುವು_ತಾವರೆ ಎಲೆಯ ಮೇಲಿನ ನೀರು ಗುಳ್ಳೆಯ ಹಾಗೆ. ನನಗಿಂತ ಹೆಚ್ಚು ಶಕ್ತಿವಂತರಾದವರು ಯಾರಾದರೂ ಅದನ್ನು ಹಿಡಿದು ನಿಲ್ಲಿಸಬಾರದೆ? ಈ ಲೋಕವನ್ನೆಲ್ಲಾ ತನ್ನ ಇಚ್ಛೆಯತೆ ಕುಣಿಸುತ್ತಿರುವನೆಂದು ಹೇಳ ಲಾದ ಆ ದೇವರು ನನಗೆ ನೆರವಾಗಬಾರದೆ?

ಅವರ ಕಾರು ಬಂತು. ಆದರೆ ವನಜ ಇಳಿದು ಬರಲಿಲ್ಲ. ಮುರಲಿಯೊಬ್ಬನೇ ನಡೆದು ನನ್ನೆಡೆಗೆ ಬಂದ. ಹಿಂದೆ ಅವನು ಆ ಬೆಂಚಿಗೆ ಒರಗಿ ಕುಳಿತಿದ್ದಾಗ ನಾನು ಬಂದಿದ್ದೆ. ಈಗ ಒರಗಿರು ವವನು ನಾನು-ಕಾಹಿಲೆಯವನು ನಾನು.

ಅವನು " ಹಲೋ " ಎನ್ನಲಿಲ್ಲ.

ನನ್ನ ಸಿಗರೇಟು ಸುಟ್ಟುಕೊಂಡು ಹೊಗೆಯ ಎಳೆ ಮೇಲಕ್ಕೆ ಏಳುತಿತ್ತು. ಅದನ್ನು ದೂರವೆಸೆದೆ.

" ಬಾ ಮುರಲಿ......."

ಅವನು ಕುಳಿತುಕೊಂಡು. ಸಾಕಷ್ಟು ರಕ್ತ ಸಂಚಾರವಿಲ್ಲದ ಅವನು ಮುಖದಿಂದ ಎಳೆಯ ಕಣ್ಣುಗಳೆರಡು ನನ್ನನ್ನೆ ದಿಟ್ಟಿಸಿದುವು. ಆ ದೃಷ್ಟಿಯಲ್ಲಿ ಕನಿಕರವಿತ್ತೊ ದ್ವೇಷವಿತ್ತೊ ನನಗೆ ತಿಳಿಯಲಿಲ್ಲ. ಕ್ಷೀಣವಾದ ಸ್ವರದಲ್ಲಿ ನಾನು ಕೇಳಿದೆ.

" ವನಜಾ ಬರಲಿಲ್ವಾ?"

" ಬರೋದಿಲ್ಲ.'

' ನನ್ನ ಕಾಗದ ಬಂತೇನು?"

"ಬಂತು. ವನಜಾ ಬರೋದಿಲ್ಲ. ಅದನ್ನ ಹೇಳೋದಿಕ್ಕೇ ನಾನು ಬಂದೆ."

"ಓ !......"

ಮುಂದೇನು ಹೇಳಬೇಕೋ ತೋಚಲಿಲ್ಲ. ತಡವರಿಸುತ್ತ